ಕರಾವಳಿ

ರಸ್ತೆಯಲ್ಲಿ ಸಿಕ್ಕ ಮೊಬೈಲ್, ಪರ್ಸ್ ಮರಳಿಸಿ ಪ್ರಾಮಾಣಿಕತೆ ಮೆರೆದ ಕೊಲ್ಲೂರು ಶ್ರೀ ಮೂಕಾಂಬಿಕಾ ಪಿಯು  ಕಾಲೇಜು ವಿದ್ಯಾರ್ಥಿ

Pinterest LinkedIn Tumblr

ಕೊಲ್ಲೂರು: ಕ್ಷೇತ್ರದ ದರ್ಶನಕ್ಕೆ ಬಂದ ಯಾತ್ರಾರ್ಥಿಯೊಬ್ಬರು ಕಳೆದುಕೊಂಡ ಮೊಬೈಲ್‌ಗಳು ಹಾಗೂ ಪರ್ಸ್ ಇದ್ದ ಬ್ಯಾಗ್ ಠಾಣೆಗೆ ನೀಡಿ ಪಿಯುಸಿ ವಿದ್ಯಾರ್ಥಿ ಪ್ರಾಮಾಣಿಕತೆ ಮೆರೆದಿದ್ದು ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಕೊಲ್ಲೂರು ದರ್ಶನಕ್ಕೆ ಬಂದಿದ್ದ ಕೇರಳ ರಾಜ್ಯದ ಅರುಣ್  ಮುರುಳಿ ಎನ್ನುವರಿಗೆ ಸೇರಿದ 2 ಮೊಬೈಲ್ ಪೋನ್ ಮತ್ತು ಹಣವಿದ್ದ ಪರ್ಸ್ ಕಳೆದುಹೋಗಿದ್ದು ತಕ್ಷಣವೇ ಅವರು ಕೊಲ್ಲೂರು ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದರು. ರಸ್ತೆಯಲ್ಲಿ ಸಿಕ್ಕ ಚಿಕ್ಕ ಬ್ಯಾಗ್‌ವೊಂದು ಕೊಲ್ಲೂರು ಶ್ರೀ  ಮೂಕಾಂಬಿಕಾ ಪಿಯು ಕಾಲೇಜಿನ  ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಬಾಹುಬಲಿ ಎಂಬಾತನಿಗೆ ಸಿಕ್ಕಿದ್ದು ತಕ್ಷಣ ಆತ ಅದನ್ನು ಠಾಣೆಗೆ ತಂದು ನೀಡಿದ್ದಾನೆ. ಕೊಲ್ಲೂರು ಠಾಣೆ ಪಿಎಸ್ಐ ವಿನಯ್ ಎಂ. ಕೊರ್ಲಹಳ್ಳಿ ಅವರು ಕಳೆದುಕೊಂಡ ವಾರೀಸುದಾರರಿಗೆ ವಸ್ತುಗಳನ್ನು ಹಸ್ತಾಂತರಿಸಿದರು.

ವಿದ್ಯಾರ್ಥಿಯ ಪ್ರಾಮಾಣಿಕ ಕಾರ್ಯಕ್ಕೆ ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ಪೊಲೀಸ್ ಇಲಾಖೆಯವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Comments are closed.