ಕರಾವಳಿ

ತಲ್ಲೂರಿ‌ನಲ್ಲಿ ಬ್ರಹತ್ ರಕ್ತದಾನ ಶಿಬಿರ | ರಕ್ತದಾನಕ್ಕೆ ಯುವಕರು ಮುಂದಾಗಬೇಕು: ಪಿ. ಕಿಶನ್ ಹೆಗ್ಡೆ

Pinterest LinkedIn Tumblr

ಕುಂದಾಪುರ: ಪಂಚಾಗಂಗಾ ರೈತರ ಸೇವಾ ಸಹಕಾರಿ ಸಂಘ ಹೆಮ್ಮಾಡಿ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ ) ಉಡುಪಿ, ಲಯನ್ಸ್ ಕುಂದಾಪುರ ಸಿಟಿ ಸೆಂಟರ್ ಕುಂದಾಪುರ, ರೋಟರಿ ಮಿಡ್ ಟೌನ್ ಕುಂದಾಪುರ, ಶೌರ್ಯ ವಿಪತ್ತು ನಿರ್ವಹಣೆ ಘಟಕ ತಲ್ಲೂರು, ಕೆ.ಎಂ.ಸಿ ರಕ್ತನಿಧಿ ಮಣಿಪಾಲದ ಸಹಭಾಗಿತ್ವದಲ್ಲಿ ತಲ್ಲೂರಿನಲ್ಲಿ ರಕ್ತ ದಾನ ಶಿಬಿರ‌ ನಡೆಯಿತು.

ಸೌಕೂರು ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವದಾನ ಮಾಡುವ ರಕ್ತದ ಅನಿವಾರ್ಯತೆ ನಿಗಿಸುವಲ್ಲಿ ರಕ್ತದಾನಕ್ಕೆ ಯುವಕರು ಮುಂದಾಗಬೇಕೆಂದು ಎಂದು ಕರೆ ನೀಡಿದರು.

ಸಭೆಯ ಅಧ್ಯಕ್ಷತೆಯನ್ನು ಸಂತೋಷ್ ಕುಮಾರ್ ಶೆಟ್ಟಿ ಹಕ್ಲಾಡಿ ವಹಿಸಿದ್ದರು. ಸಮಾಜ ಸೇವಕರಾದ ಅಭಿಜಿತ್ ಕೊಠಾರಿ ಮೂಡ್ಲಕಟ್ಟೆ, ಮತ್ತು ರಮೇಶ್ ಪೂಜಾರಿ ತಲ್ಲೂರು ಅವರನ್ನು ಅಭಿನಂದಿಸಲಾಯಿತು. ಒಟ್ಟು 172 ಯೂನಿಟ್ ರಕ್ತ ಸಂಗ್ರಹಿಸಲಾಗಿದೆ.

ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ,  ಜಯಕುಮಾರ್ ಗಾಣಿಗ, ಸುಕುಮಾರ ಶೆಟ್ಟಿ, ತಲ್ಲೂರು  ಗ್ರಾಮ ಪಂಚಾಯತ್ ಅಧ್ಯಕ್ಷ ಗಿರೀಶ್ ನಾಯಕ್, ಮಾಜಿ ಅಧ್ಯಕ್ಷ ಆನಂದ ಬಿಲ್ಲವ ಉಪ್ಪಿನಕುದ್ರು, ಅಭಯಹಸ್ತ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ, ತಾಲೂಕು ಯುವ ಜನ ಸೇವೆ ಮತ್ತು ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಮಣಿಪಾಲ‌ ಕೆಎಂಸಿ ವೈದ್ಯೆ ಡಾ. ನಿಕಿತಾ, ಪ್ರಮುಖರಾದ ವಾಸುದೇವ ಕಾಮತ್ ಕಂಡ್ಲೂರು, ಕರಣ್ ಪೂಜಾರಿ ತಲ್ಲೂರು, ಅರುಣ್ ಕುಮಾರ್ ಉಪ್ಪಿನಕುದ್ರು, ಕಾರ್ಯಕ್ರಮ ಸಂಯೋಜಕ  ಅಭಯಹಸ್ತ ಪ್ರಶಾಂತ್ ತಲ್ಲೂರು ಉಪಸ್ಥಿತರಿದ್ದರು.

ಭಾಸ್ಕರ್ ಆಚಾರ್ಯ ಉಪ್ಪಿನಕುದ್ರು ಸ್ವಾಗತಿಸಿದರು. ಚಂದ್ರಿಕಾ ಕುಂದಾಪುರ ನಿರೂಪಿಸಿ, ವಂದಿಸಿದರು.

Comments are closed.