ಕುಂದಾಪುರ: ವರದಕ್ಷಿಣೆ ಕಾಯ್ದೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಕಳೆದ 23 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ಜಿಲ್ಲೆ ಸಾಗರ ಮೂಲದ ಪ್ರಸ್ತುತ ಶಿವಮೊಗ್ಗ ಹೊಸನಗರದ ಸಂಪಿಗೆ ನಿವಾಸಿಯಾಗಿರುವ ನಾಸೀರ ಖಾನ್ (52) ಬಂಧಿತ ಆರೋಪಿ.
ಈತನ ಮೇಲೆ ವರದಕ್ಷಿಣೆ ಕಿರುಕುಳದಡಿ 2002ರಲ್ಲಿ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರಿಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಗಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಕೃಷ್ಣ, ಪ್ರಸನ್ನ, ಸಂದೀಪ್ ಕುರಾಣಿ, ಮಹಾಲಿಂಗರಾಯ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರದಲ್ಲಿ ಬಂಧಿಸಿದ್ದು ಆರೋಪಿಯನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ.
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಹೆಚ್ಚುವರಿ ಡಿವೈಎಸ್ಪಿ ಸುಧಾಕರ ನಾಯ್ಕ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಹೆಚ್.ಡಿ ಕುಲಕರ್ಣಿ, ಬೈಂದೂರು ಸಿಪಿಐ ನೀಲೇಶ್ ಚೌಹ್ವಾಣ್ ನಿರ್ದೇಶನದಂತೆ ಗಂಗೊಳ್ಳಿ ಪೊಲೀಸ್ ಠಾಣೆ ಪಿಎಸ್ಐಗಳಾದ ಪವನ್ ನಾಯಕ್, ಬಸವರಾಜ ಕನಶೆಟ್ಟಿ ನೇತೃತ್ವ ಕಾರ್ಯಾಚರಣೆ ನಡೆದಿತ್ತು.
Comments are closed.