ಮುಂಬಯಿ: 17 ತಾರೀಕಿನ ಈ ಶುಭ ದಿನದಂದು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇದರ 17ನೇ ವರ್ಷದ ಪೂಜೆಯನ್ನಾಚರಿಸುತ್ತಿದ್ದೇವೆ. ಇದಕ್ಕೆ ಪ್ರತಿಯೊಬ್ಬರು ’ನಾನು’ ಎಂಬುದರ ಬದಲು “ನಾವು, ನಮ್ಮದು” ಎಂಬುದಾಗಿ ಸೇವೆ ಮಾಡುತ್ತಾ ಬಂದಿದ್ದು ನಮ್ಮ ಬಳಗದ ಸದಸ್ಯರುಗಳ ಹಾಗೂ ಅಭಿಮಾನಿಗಳ ನಿಸ್ವಾರ್ಥ ಸೇವೆ ಬಳಗದ ಪ್ರತಿಯೊಂದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ ಎಂದು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇದರ ಅಧ್ಯಕ್ಷರಾದ ಹರೀಶ್ ಡಿ. ಮೂಲ್ಯ ತಿಳಿಸಿದರು.

ನಾನಿಲ್ತಾರ್ ಅಭಿಮಾನಿ ಬಳಗದ 17ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ, ಸಾಧಕರಿಗೆ ಸನ್ಮಾನ ಕಾರ್ಯಕ್ರಮವು ಆ. 17 ರಂದು ಗೋಮಾಂತಕ್ ಸೇವಾ ಸಂಘ, ವಿಲೇ ಪಾರ್ಲೆ ಪೂರ್ವ ಇಲ್ಲಿ ಜರಗಿದ್ದು ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ದಿನೇಶ್ ಕುಲಾಲ್ ರಂತವರ ಸಲಹೆ ನಮಗೆ ನಿರಂತರವಾಗಿ ಸಿಗುತ್ತಿದ್ದು ಎಲ್ಲರನ್ನು ಈ ಸಂದರ್ಭದಲ್ಲಿ ಅಬಿನಂದಿಸುತ್ತಿರುವೆನು ಎಂದರು.
ಸಭಾ ಕಾರ್ಯಕ್ರಮಕ್ಕೆ ಚಾಲನೆಯಿತ್ತು ಆಶೀರ್ವಚನ ನೀಡಿದ ಸಂತಾಕ್ರೂಸ್ ಮಂತ್ರದೇವತೆ ಚಾರಿಟೇಬಲ್ ಟ್ರಸ್ಠ್ ನ ಆಡಳಿತ ಮೊಕ್ತೇಸರ ವಾಸುದೇವ ಕೆ. ಬಂಜನ್ ಅವರು ಶ್ರೀ ವರಮಹಾಲಕ್ಷ್ಮೀ ಪೂಜೆಯಿಂದಾಗಿ ನಾವೆಲ್ಲರೂ ಒಟ್ಟಾಗಿರುವುದು ನಮ್ಮೆಲ್ಲರ ಸೌಭಾಗ್ಯ. ಈ ರೀತಿ ಎಲ್ಲರು ಒಂದಾಗಿ ಪೂಜೆ ಮಾಡಿದಲ್ಲಿ ದೇವರು ಒಲಿಯುತ್ತಾರೆ. ಇಂದಿಲ್ಲಿ ಭಜನೆ ಕಾರ್ಯಕ್ರಮವೂ ನಡೆದಿದ್ದು, ಕಲಿಯುಗದಲ್ಲಿ ಭಜನೆ, ಕೀರ್ತನೆಗಳಿದ್ದಲ್ಲಿ ದೇವರು ಒಲಿಯುತ್ತಾರೆ. ಸುಮಂಗಲೆಯರಿಂದ ಇಂದು ಪೂಜೆ ನೆಡೆಯುತ್ತಿದ್ದು ಸುಮಂಗಲೆಯರಿಂದ ನಡೆಯುತ್ತಿರುವ ಈ ಪೂಜೆಗೆ ಮಹತ್ವವಿದೆ. ಎಲ್ಲರಿಗೂ ವರಮಹಾಲಕ್ಷ್ಮೀ ಸಕಲ ಸಂಪತ್ತು, ಯೋಗ, ಭಾಗ್ಯ ಕರುಣಿಸಲಿ ಎಂದರು.
ಸೂರ್ಯನಾರಾಯಣ ಭಟ್ ಗೋರಾಯಿ ಅವರು ಮಾತನಾಡುತ್ತಾ ನಾವು ಒಳ್ಳೆಯ ಕರ್ಮ ಮಾಡಿದಲ್ಲಿ ಒಳ್ಳೆಯ ಫಲ ಸಿಗುತ್ತದೆ. ಶಕ್ತಿ ಮೀರಿ ಭಕ್ತಿ ಮಾಡಬೇಕು. ಭಕ್ತಿಯಿಂದ ನೀಡಿದ್ದನ್ನು ದೇವರು ಸಂತೋಷದಿಂದ ಸ್ವೀಕರಿಸುತ್ತಾರೆ. ಎಲ್ಲರು ಒಂದಾಗಿ ಪ್ರಾರ್ಥನೆ ಮಾಡುವುದರೊಂದಿಗೆ ಎಲ್ಲರು ಈ ಸಂಸ್ಥೆ ಹಾಗು ಸಂಸಾರವನ್ನು ಎತ್ತರಕ್ಕೆ ಕೊಂಡೊಯ್ಯೋಣ ಎಂದರು.
ಮುಖ್ಯ ಅತಿಥಿ ಕುಲಾಲ ಸಂಘ, ಮುಂಬಯಿ ಅಧ್ಯಕ್ಷ ರಘು ಎ. ಮೂಲ್ಯ ಅವರು ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇವರಿಗೆ ಶುಭ ಹಾರೈಸಿ ಹಾಗೂ ಸನ್ಮಾನಿತರನ್ನು ಅಭಿನಂದಿಸಿ. ಮಂಗಳೂರಿನ ಕುಲಾಲ ಭವನ ಲೋಕಾರ್ಪಣೆ ದಿನ ನಿಗದಿಪಡಿಸುವ ಬಗ್ಗೆ ಮುಂದಿನ ರವಿವಾರ ಸಭೆ ನಡೆಯಲಿದ್ದು ಎಲ್ಲರೂ ಆಗಮಿಸಿ ಸಹಕರಿಸಬೇಕಾಗಿ ವಿನಂತಿಸಿದರು.
ವಿಶೇಷ ಅತಿಥಿಯಾಗಿ ಆಗಮಿಸಿದ ಕುಲಾಲ ಭವನ ಕಟ್ಟಡ ಸಮಿತಿಯ ಉಪಕಾರ್ಯಾಧ್ಯಕ್ಷ, ಮುಂಬಯಿಯ ಉದ್ಯಮಿ, ಮಹಾದಾನಿ ಸುನಿಲ್ ಸಾಲ್ಯಾನ್, ಮಾತನಾಡುತ್ತಾ ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ ಉತ್ತಮ ಕಾರ್ಯವನ್ನು ಮಾಡುತ್ತಾ ಎಲ್ಲರನ್ನು ಒಂದೆಡೆ ಸೇರಿಸುತ್ತಿದ್ದು ಈ ಸಂಘಟನೆಗೆ ತನ್ನ ಸಂಪೂರ್ಣ ಸಹಕಾರವನ್ನು ವ್ಯಕ್ತಪಡಿಸಿದರು.
ಹೋಟೇಲು ಉದ್ಯಮಿ ಪದ್ಮನಾಭ ಬಂಗೇರ, ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸುತ್ತಾ ಅಲ್ಪಾವಧಿಯಲ್ಲೇ ಉನ್ನತ ಮಟ್ಟಕ್ಕೇರುತ್ತಿರುವ ನಾನಿಲ್ತಾರ್ ಅಭಿಮಾನಿ ಬಳಗಕ್ಕೆ ನಮ್ಮೆಲ್ಲರ ಪ್ರೋತ್ಸಾಹ ಸದಾ ಇದೆ ಎಂದರು.
ಮುಖ್ಯ ಅತಿಥಿ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ, ಮಲಾಡ್ ನ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಕೆ ಆಚಾರ್ಯ ಅವರು ಮಾತನಾಡುತ್ತಾ ಶ್ರಾವಣ ಮಾಸದ ಈ ಪವಿತ್ರ ತಿಂಗಳಲ್ಲಿ ಅನೇಕರು ತಪ್ಪದೇ ಹದಿನೇಳು ವರ್ಷಗಳ ಕಾಲ ಪೂಜೆಯಲ್ಲಿ ಭಾಗವಹಿಸಿರಬಹುದು. ನಮ್ಮ ಸನಾತನ ಧರ್ಮ ಉಳಿಸುದರೊಂದಿಗೆ ವರಮಹಾಲಕ್ಷ್ಮೀ ಪೂಜೆಯಿಂದ ಬಡತನ ದುರವಾಗಲು ಸಾಧ್ಯ. ನಿರ್ಮಲ ಮನಸ್ಸಿನಿಂದ ನಾವೆಲ್ಲರೂ ಶ್ರೀ ವರಮಹಾಲಕ್ಷ್ಮೀ ಪೂಜೆ ಮಾಡೋಣ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಾನಿಲ್ತಾರ್ ಕುಲಾಲ ಸಂಘ ಮುಂಡ್ಕೂರು ಅಧ್ಯಕ್ಷರಾದ ಜಯರಾಮ ಕುಲಾಲ್, ಮಾತನಾಡುತ್ತ ಮುಂಡ್ಕೂರಿನವರು ಎಲ್ಲರು ಇಲ್ಲಿ ಒಟ್ಟಾಗಿದ್ದು ಮುಂಡ್ಕೂರಿನ ದೇವರ ಪ್ರಭಾವ ಇಲ್ಲಿ ಕಾಣುತ್ತಿದೆ. ಮುಂಡ್ಕೂರಿನ ದೇವರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ತಾಯಿಯ ಯಕ್ಷಗಾನ ಇಲ್ಲಿ ನಡೆಯುತ್ತಿರಲಿ. ಇದೇ ರೀತಿ ಒಗ್ಗಟ್ಟಿನಿಂದ ಎಲ್ಲರೂ ಸೇರಿ ಮುಂದೆ ಬಳಗದ 25ನೇ ವರ್ಷವನ್ನು ಅದ್ದೂರಿಯಿಂದ ಆಚರಿಸೋಣ ಎಂದರು.
ಮುಖ್ಯ ಅತಿಥಿ ಹೋಟೇಲು ಉದ್ಯಮಿಗಳಾದ ವಸಂತ್ ಶೆಟ್ಟಿ, ತುಳು ಕೂಟ ಪೌಂಡೇಶನ್ ನಲಾಸೋಪಾರ ಮಹಿಳಾ ವಿಭಾಗದ ಕೋಶಾಧಿಕಾರಿ ನಳಿನಿ ಎಸ್ ಪೂಜಾರಿ, ಕುಲಾಲ ಸಂಘ ಮುಂಬಯಿಯ ಚರ್ಚ್‌ಗೇಟ್-ದಹಿಸರ್ ಸ್ಥಳೀಯ ಸಮಿತಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ರತ್ನಾ ಡಿ. ಕುಲಾಲ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಬಳಗದ ಉಪಾಧ್ಯಕ್ಷ ದಿನೇಶ್ ಮೂಲ್ಯ ದಂಪತಿ ಅಂಧೇರಿ ಮತ್ತು ಕುಲಾಲ ಸಂಘ ಮುಂಬಯಿಯ ಮೀರಾರೋಡ್ ವಿರಾರ್ ಸ್ಥಳೀಯ ಸಮಿತಿಯ ಗುರುವಂದನಾ ಭಜನಾ ಸಮಿತಿಯ ಕಾರ್ಯದರ್ಶಿ, ಸುಧೀರ್ಘ ಕಾಲದಿಂದ ಕನ್ನಡ ಬಾಷೆಯಲ್ಲಿ ಮುದ್ರಣ ಕ್ಷೇತ್ರದಲ್ಲಿ ತನ್ನನ್ನು ತಾನೇ ತೊಡಗಿಸಿಕೊಂಡಿರುವ ಆದ್ಯಪಾಡಿ ವಾಮನ್ ಮೂಲ್ಯ ದಂಪತಿ ಇವರನ್ನು ವೇದಿಕೆಯಲ್ಲಿದ್ದ ಎಲ್ಲಾ ಗಣ್ಯರು ಸನ್ಮಾನಿಸಿದರು. ಅರ್ಚನಾ ಮೂಲ್ಯ ಮತ್ತು ಸರೋಜಾ ಮೂಲ್ಯ ಸನ್ಮಾನ ಪತ್ರವನ್ನು ವಾಚಿಸಿದರು.
ನಾನಿಲ್ತಾರ್ ಅಭಿಮಾನಿ ಬಳಗದ ಸಂಚಾಲಕ ಕೃಷ್ಣ ಮೂಲ್ಯ ಕಾರ್ಯಕ್ರಮವನ್ನು ನಿರ್ವಹಿಸಿ ವಂದನಾರ್ಪಣೆ ಮಾಡಿದರು.
ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಗೋರೆಗಾಂವ್ ಮತ್ತು ವಿರಾರ್ ನಲಾಸೋಪಾರ ಕರ್ನಾಟಕ ಸಂಸ್ಥೆಯ ಮಹಿಳಾ ವಿಭಾಗದವರಿಂದ ಭಜನೆ ನಡೆಯಿತು. ಲಾಸ್ಯ ಕುಲಾಲ್ ಮತ್ತು ಷೃತಿ ನಾಯಕ್ ಅವರು ಸ್ವಾಗತ ನೃತ್ಯ ಮಾಡಿದರು. ಶ್ರೀ ಸಂತೋಷ್ ಭಟ್, ಚಾರ್‌ಕೋಪ್, ಕಾಂದಿವಲಿ ಅವರ ಪೌರೋಹಿತ್ಯದಲ್ಲಿ , ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ನಡೆಯಿತು.
ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ, ಬಳಿಕ ಮಹಾಮಂಗಳಾರತಿ ನಡೆದಿದ್ದು ಸುಮಂಗಲೆಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ನಂತರ ದಿ. ಪಿಜಿನ ಮೂಲ್ಯ ಉಳೆಪಾಡಿ ಇವರ ಸವಿನೆನಪಿಗಾಗಿ ಅಚರ ಪುತ್ರ ದಿನೇಶ್ ಮೂಲ್ಯ ಅಂಧೇರಿ ಪ್ರಾಯೋಜತ್ವದಲ್ಲಿ ಅನ್ನ ಸಂತರ್ಪಣೆ ನಡೆಯಿತು.
ಅಪರಾಹ್ನ ಪರಿಸರದ ವಿವಿಧ ಪ್ರತಿಭೆಗಳಿಂದ, ಬಳಗದ ಮಹಿಳೆಯರಿಂದ ಹಾಗೂ ಸದಸ್ಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇದರ ಕಾರ್ಯದರ್ಶಿ ದಿನೇಶ್ ಬಂಗೇರ ಖಾರ್ ದಾಂಡ, ಕೋಶಾಧಿಕಾರಿ ರೋಹಿದಾಸ್ ಕೆ ಬಂಜನ್ ನಲಾಸೋಪಾರ, ಜೊತೆ ಕಾರ್ಯದರ್ಶಿಗಳಾದ ಲೋಕೇಶ್ ಮೂಲ್ಯ ಗೋರೆಗಾಂವ್, ಸದಾಶಿವ ಮೂಲ್ಯ ವಿರಾರ್, ಜೊತೆ ಕೋಶಾಧಿಕಾರಿಗಳಾದ ವಿಶ್ವನಾಥ ಕುಂದರ್ ಅಂಧೇರಿ ಮತ್ತು ಶಶಿಕಾಂತ್ ಮೂಲ್ಯ ವಿರಾರ್ ಸಲಹೆಗಾರರಾದ ಹರೀಶ್ ಕುಲಾಲ್, ಮೀರಾರೋಡ್, ಕೇಶವ್ ಬಂಜನ್, ಜೋಗೇಶ್ವರಿ, ವಿಠಲ್ ಮೂಲ್ಯ, ಅಂಧೇರಿ, ಯಶೋಧರ ಬಂಗೇರಾ, ಮೀರಾರೋಡ್, ಅರ್ಚನಾ ಎಸ್. ಮೂಲ್ಯ, ವಸಾಯಿ, ಸೌಮ್ಯ ಡಿ. ಬಂಗೇರ, ಖಾರ್, ವಿಜಯಲಕ್ಷ್ಮಿ ಬಂಜನ್, ನಲಸೋಪರ, ರೇವತಿ ಮೂಲ್ಯ, ಅಂಧೇರಿ, ಸುನಿತಾ ಎಸ್. ಮೂಲ್ಯ, ವಿರಾರ್, ದೀಪಾ ಬಂಜನ್, ವಿರಾರ್, ಸವಿತಾ ದೇವಾಡಿಗ, ನಿತಿನ್ ಸಿ. ಬಂಜನ್, ವಿರಾರ್, ಶಂಕರ್ ಮೂಲ್ಯ, ವಸಾಯಿ, ಪ್ರಕಾಶ್ ಮೂಲ್ಯ, ಸಾಕಿನಾಕ, ಜ್ಯೋತಿ ಸಾಲ್ಯಾನ್, ಗೋರೆಗಾಂವ್, ದಿನೇಶ್ ಪೂಜಾರಿ, ಸಾಕಿನಾಕ, ಸರಿತಾ ಮೂಲ್ಯ, ಅಂಧೇರಿ, ಸುರೇಶ್ ವಿ ಬಂಗೇರ, ಶೇರ್ ಪಂಜಾಬ್, ನಾರಾಯಣ ಅರ್ಕ್ಯಾನ್, ಅಂಧೇರಿ, ಸರೋಜಾ ಎಚ್. ಮೂಲ್ಯ, ಅಂಧೇರಿ, ಹೇಮಲತಾ ಬಂಗೇರ, ಖಾರ್‌ದಾಂಡ, ನಳಿನಿ ಎನ್. ಬಂಜನ್, ವಿರಾರ್, ಕವಿತಾ ಸಾಲ್ಯಾನ್, ಮೀರಾ ರೋಡ್, ಬೇಬಿ ಮೂಲ್ಯ ಜೋಗೇಶ್ವರಿ, ದಿವ್ಯಾ ಮೂಲ್ಯ, ಗೋರೆಗಾಂವ್, ಜ್ಯೋತಿ ಬಂಜನ್, ಡೊಂಬಿವಲಿ, ಸುಕೇಶ್ ಮೂಲ್ಯ, ವಿರಾರ್, ರಮೇಶ್ ಮೂಲ್ಯ ಖಾರ್‌ಫರ್, ನಾಗಪ್ಪ ಸಿ. ಮೂಲ್ಯ, ವಿರಾರ್, ಸಚಿನ್ ಬಂಜನ್, ಡೊಂಬಿವಲಿ, ಸುರೇಶ್ ನಾಯಕ್, ಬಾಂದ್ರಾ, ಸುಧಾಕರ ಮೂಲ್ಯ, ನಾಲಾಸೋಪಾರ ದಿನೇಶ್ ಹೆಮ್ಮಾಡಿ, ಜೋಗೇಶ್ವರಿ ಮೊದಲಾದವರು ಸಹಕರಿಸಿದರು.
ಬೆಳಿಗ್ಗೆ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಶುಭಕೋರಿ ಮಾತನಾಡಿದ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಬೋಜ ಶೆಟ್ಟಿಯವರು ಮುಂಡ್ಕೂರಿನ ಸಣ್ಣ ಗ್ರಾಮದಿಂದ ಬಂದು ಇಲ್ಲಿ ನೆಲೆಸಿದವರನ್ನು ಒಂದೆಡೆ ಸೇರಿಸಿ ದೊಡ್ಡ ಮಟ್ಟಕ ಕಾರ್ಯಕ್ರಮ ನಡೆಸುತ್ತಿರುವ ನಾನಿಲ್ತಾರ್ ಅಭಿಮಾನಿ ಬಳಗ ಮುಂಬಯಿ (ಮುಂಡ್ಕೂರು), ಇದರ ಕಾರ್ಯಕಾರಿ ಸಮಿತಿಯ ಕಾರ್ಯ ಮೆಚ್ಚತಕ್ಕದ್ದು. ಅಭಿನಂದನೆಗಳು ಹಾಗೂ ಶುಭ ಹಾರೈಕೆಯೊಂದಿಗೆ ಬಳಗಕ್ಕೆ ನನ್ನ ಪ್ರೋತ್ಸಾಹವನ್ನು ವ್ಯಕ್ತಪಡಿಸಿದರು.
ವರದಿ : ಈಶ್ವರ ಎಂ. ಐಲ್
ಚಿತ್ರ : ಭಾಸ್ಕರ ಮೂಲ್ಯ ನಲಾಸೋಪಾರ
Comments are closed.