Mumbai

ಗೋರೆಗಾಂವ್ ಕರ್ನಾಟಕ ಸಂಘ ‘ರಂಗಸ್ಥಳ’ದಿಂದ ಆಟಿಡೊಂಜಿ ಬಯ್ಯದ ಪೋರ್ತು-2025

Pinterest LinkedIn Tumblr

ಮುಂಬಯಿ: ಆಷಾಡ ಮಾಸದಲ್ಲಿ ಉಪಯೋಗ ಮಾಡುವ ತಿಂಡಿ ತಿನಸು ಸೋಪ್ಪು ತರಕಾರಿಗಳ ಬಗ್ಗೆ ಕೇಳಿದೆ ಅಷ್ಟೆ ಅದರೆ ಇಂದು ರಂಗಸ್ಥಳದವರು  ಪ್ರತ್ಯಕ್ಷವಾಗಿ ಎಲ್ಲಾ ವಸ್ತುಗಳನ್ನು ತಂದು ಪ್ರದರ್ಶಿಸಿದ್ದಾರೆ, ಆಷಾಡದ ಒಂದು ಸಂಜೆ ಕಾರ್ಯಕ್ರಮವು ಒಂದು ಹೊಸ ಪರಿಕಲ್ಪನೆ ಗೆ ಸಾಕ್ಷಿಯಾಗಿದೆ ಇನ್ನೂ ಮುಂದಕ್ಕೂ  ಇಂಥ ಕಾರ್ಯ ಕ್ರಮಗಳು ಜರಗುತ್ತಿರಲಿ ಎಂದು ಗೋರೆಗಾಂವ್ ಕರ್ನಾಟಕ ಸ಼ಂಘ ಅಧ್ಯಕ್ಷೆ ವಿಶಾಲಕ್ಷಿ ಉಳವಾರ ಹೇಳಿದರು.

ಗೋರೆಗಾಂವ್ ಕರ್ನಾಟಕ  ಸಂಘದ ಉಪ ವಿಭಾಗ ರಂಗಸ್ಥಳದ ವತಿಯಿಂದ ಆಟಿಡೊಂಜಿ ಬಯ್ಯದ ಪೋರ್ತು ಕಾರ್ಯಕ್ರಮವು  ಸಂಘದ ಅಧ್ಯಕ್ಷೆಯಾದ ವಿಶಾಲಕ್ಷಿ ಉಳವಾರರವರ ಅಧ್ಯಕ್ಷತೆಯಲ್ಲಿ ಅ.  13 ರಂದು ಧಾವೆ ಬಿಲ್ಡಿಂಗ್ 2ನೇ  ಮಹಡಿ ಸಂಘದ ಆಫೀಸ್ ಗೋರೆಗಾಂವ್ ಇಲ್ಲಿ ನಡೆದಿದ್ದು ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು.

ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ತುಳು ಸಂಘ ಬೊರಿವಲಿಯ ಮಾಜಿ ಅಧ್ಯಕ್ಷ, ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಮಹಾರಾಷ್ಟ್ರ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಶೆಟ್ಟಿ ಪೇಟೆಮನೆಯವರು ಸಂಘದ ಜಿ ಅಧ್ಯಕ್ಷ ರಮೇಶ್ ಶೆಟ್ಟಿ ಪಯ್ಯಾರ್ ಮತ್ತು ಇತರ ಗಣ್ಯರೊಂದಿಗೆ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತು ಶುಭ ಹಾರೈಸಿ ಮಾತನಾಡುತ್ತಾ ತುಳು ಕನ್ನಡಿಗರು ಮಹಾನಗರದಲ್ಲಿ ಇತ್ತಿಚಿನ ದಿನಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಆಟಿ ತಿಂಗಳನ್ನು ಆಚರಿಸಿ ನಾಡಿನ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ. ಆಟಿ ತಿಂಗಳು ಮಳೆಗಾಲದಲ್ಲಿ ಬಹಳ ಕಷ್ಟದ ದಿನಗಳಾದ್ದು ಅದನ್ನು ನೆನೆಸುವಾಗ ಮೃಷ್ಟಾನ್ನ ಭೋಜನ ಆಡಂಬರದ ಅವಶ್ಯಕತೆ ಇಲ್ಲ. ಆದರೆ ಗೋರೆಗಾಂವ್ ಕರ್ನಾಟಕ ಸಂಘದಲ್ಲಿ ಅಂದಿನ ಆಟಿ ದಿನವನ್ನುಸರಳ ರೀತಿಯಲ್ಲಿ ನೆನೆಪಿಸಿ ಕೊಂಡು ಆಟಿ ತಿಂಗಳ  ತಿಂಡಿ ತಿನಸು ಗಳನ್ನು ಸಂಘದ ಎಲ್ಲ ಸದಸ್ಯರು ಮಾಡಿ ತಂದು  ಒಂದೇ ಕೂಡು ಕುಟುಂಬದವರನ್ನು ಸೇರಿಸಿ ಆಟಿಡೊಂಜಿ ಬಯ್ಯದ ಪೊರ್ತು ಕಾರ್ಯಕ್ರಮ ಆಚರಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಗೌ.ಪ್ರ.ಕಾರ್ಯದರ್ಶಿ  ಸರಿತಾ ಸುರೇಶ್ ನಾಯಕ್ , ಕೋಶಾಧಿಕಾರಿ ಆನಂದ್ ಶೆಟ್ಟಿ, ಉಪಾಧ್ಯಕ್ಷರಾದ  ವಿಶ್ವನನಾಥ್ ಶೆಟ್ಟಿಯವರು   ಆಟಿಯ ದಿನದ ವಿಶೇಷತೆಯ ಬಗ್ಗೆ  ಮಾತಾನಾಡಿದರು. ಸಂಘದ ಎಲ್ಲಾ ಉಪವಿಭಾಗದರು ತಮ್ಮ ತಮ್ಮ ಅನುಭವಗಳನ್ನು ಹಂಚಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ  ಸಹಕರಿಸಿದರು.

ಗ್ರಂಥಯಾನ ವಿಭಾಗದ ಮಾಜಿ ನಿರ್ದೇಶಕಿ ಉಷಾ ಶೆಟ್ಟಿ ಹಾಗೂ ಯಶೋಧ ಶೆಟ್ಟಿ ‘ ಅಂದಿನ ಆಟಿ ಹಾಗೂ ಇಂದಿನ ಆಟಿ ತಿಂಗಳ ಆಚರಣೆ ಬಗ್ಗೆ ಸಂವಾದ, ಆಕಾಶವಾಣಿ ವಾರ್ತೆಯನ್ನು  ಶಾಂತ ಶೆಟ್ಟಿಯವರು ಓದಿ ನಕ್ಕು ನಗಿಸಿ ಎಲ್ಲರನ್ನೂ ಮನೋರಂಜಿಸಿದರು.

ಸಂಘದ ಸದಸ್ಯರು ಮನೆಯಲ್ಲಿ ತಯಾರಿಸಿ ತಂದ ಆಟಿ ತಿಂಗಳ ಖಾದ್ಯಗಳನ್ನು ಪ್ರದರ್ಶಿಸಲಾಯಿತು.  ವೇದಿಕೆಯಲ್ಲಿ ಪ್ರಕಾಶ್ ಶೆಟ್ಟಿ ಪೇಟೆಮನೆ, ಉಪಾಧ್ಯಾಕ್ಷ ವಿಶ್ವನಾಥ್ ಶೆಟ್ಟಿ, ಗೌ.ಪ್ರ.ಕಾರ್ಯದರ್ಶಿ  ಸರಿತಾ ಸುರೇಶ್ ನಾಯಕ್,   ಕೋಶಾಧಿಕಾರಿ ನಂದ್ ಶೆಟ್ಟಿ ಉಪಸ್ಥಿತಿದ್ದರು.

ರಂಗಸ್ಥಳ ವಿಭಾಗದ ಸಂಚಾಲಕಿ ಲೀಲಾಗಣೇಶ್ ಕಾರ್ಕಳ  ಎಲ್ಲರನ್ನೂ  ಸ್ವಾಗತಿಸಿ ಆಟಿಯ  ಬಗ್ಗೆ ಮಾತನಾಡಿ  ಕಾರ್ಯಕ್ರಮ ನಿರೂಪಿಸಿದರು.  ಶಾಲಿನಿ ನಾಯಕ್ ರವರು ಧನ್ಯವಾದ ಗೈದರು ಕೊನೆಗೆ .ಆಶಾ ವಿಶ್ವನಾಥ್ ಶೆಟ್ಟಿ, ಶಾಂತ ಶೆಟ್ಟಿ, ಸರಿತಾ ಸುರೇಶ್ ನಾಯಕ್,  ಜಯಲಕ್ಷೀ ಪೂಜಾರಿ, ಶಕುಂತಳಾ ಆಚಾರ್ಯ,ಶಾಲಿನಿ ನಾಯಕ್,ವಸಂತಿ ಕೋಟೆಕಾರ್, ಉಷಾ ಶೆಟ್ಟಿ, ಪದ್ಮಾವತಿ ಪೂಜಾರಿ, ಪ್ರೇಮ ಆಚಾರ್ಯ , ಮಮತಾ ಆಚಾರ್ಯ, ಸುಜಾತ ಗೋಪಾಲ್ ಆಚಾರ್ಯ, ಉಪಸ್ಥಿತರಿದ್ದು ಸಹಕರಿಸಿದರು.

Comments are closed.