UAE

ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ಮಂದಿರದಲ್ಲಿ ಗುರುವಂದನಾ ಮತ್ತು ಸಂಸ್ಕೃತಿ ಸಿಂಚನ | ಕಲಾ ಸಂಸ್ಕೃತಿ, ಆಧ್ಯಾತ್ಮಿಕ, ಗುರು ಪರಂಪರೆಯ ಅನಾವರಣ

Pinterest LinkedIn Tumblr

ಅಬುಧಾಬಿ: ಮಧ್ಯಪ್ರಾಚ್ಯದ ಇತಿಹಾಸದಲ್ಲಿ ಮೊದಲಬಾರಿಗೆ ಅರಬ್ ಸಂಯುಕ್ತ ಸಂಸ್ಥಾನದ ಅಬುಧಾಬಿ ಬಿ.ಎ.ಪಿ.ಎಸ್. ಹಿಂದೂ ದೇವಾಲಯದಲ್ಲಿ ಮೇ 31ಮೇ 2025  ರಂದು ನಡೆಸಲಾಯಿತು. ಸನಾತನ ಸಂಸ್ಕೃತಿ, ಕಲಾ  ಆಧ್ಯಾತ್ಮಿಕ, ಗುರು ಪರಂಪರೆಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.

ಭಾರತದ ವಿವಿಧ ಭಾಗಗಳಿಂದ ಆಗಮಿಸಿದ್ದ ಪರಮ ಪೂಜ್ಯ ಮಠಾಧಿಪತಿಗಳು ಹಾಗೂ ಗಣ್ಯಾತಿ ಗಣ್ಯರು, ವಿವಿಧ ಕ್ಷೇತ್ರಗಳ ಸಾಧಕರುಗಳನ್ನು ಸುಮಂಗಲೆಯರಿಂದ ಪೂರ್ಣ ಕುಂಭ, ವೇದಘೋಷ, ಪಂಚವಾಧ್ಯಗಳೊಂದಿಗೆ ಬಿ.ಎ.ಪಿ.ಎಸ್. ಹಿಂದೂ ಮಂದಿರದ ಅವರಣದಲ್ಲಿರುವ ಪ್ರಮುಖ್ ಸಭಾಂಗಣಕ್ಕೆ ಮೆರವಣಿಗೆಯ ಮೂಲಕ ಬರ ಮಾಡಿಕೊಳ್ಳಲಾಯಿತು.

ವೇದಘೋಷದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ಪ್ರಾರ್ಥನೆ ಸ್ವಾಗತದೊಂದಿಗೆ ಅಧಿಕೃತ ಚಾಲನೆ ದೊರೆಯಿತು. ಸಂಸ್ಥೆಯಎ ಸದಸ್ಯರು ಪ್ರಾಸ್ತಾವಿಕ ಭಾಷಣದಲ್ಲಿ ಗುರುವಂದನಾ ಮತ್ತು ಸಂಸ್ಕೃತಿ ಸಿಂಚನದ ಸಂಪೂರ್ಣ ಚಿತ್ರಣವನ್ನು ಅನಾವರಣಗೊಳಿಸಿದರು.

ಅಬುಧಾಬಿ ಹಿಂದೂ ಮಂದಿರದ ಮುಖ್ಯಸ್ಥರು ಪರಮ ಪೂಜ್ಯ ಶ್ರೀ ಬ್ರಹ್ಮವಿಹಾರಿ ದಾಸ್ ಸ್ವಾಮೀಜಿಯವರು ಉದ್ಘಾಟನಾ ಭಾಷಣದಲ್ಲಿ ಸನಾತನ ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲಿ ಪ್ರಸ್ತುತ ಅಬುಧಾಬಿ ಹಿಂದೂ ಮಂದಿರ ವಿಶ್ವ ಭಾತೃತ್ವದ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಗಿರುವ ಪ್ರಮುಖ ಕೇಂದ್ರವಾಗಿರುವ ಬಿ ಎ.ಪಿ.ಎಸ್. ಹಿಂದೂ ಮಂದಿರವನ್ನು ಉಲ್ಲೇಖಿಸಿ ಸಂದೇಶವನ್ನು ನೀಡಿದರು.

ಪರಮ ಪೂಜ್ಯ ಸ್ವಾಮಿಜಿಯವರಿಂದ ಸಂದೇಶ ಪ್ರವಚನ: ಶ್ರೀ ಸಿದ್ದಗಂಗಾ ಮಠಾಧ ಶ್ರೀ ಶ್ರೀ ಶ್ರೀ ಸಿದ್ಧಲಿಂಗ ಸ್ವಾಮಿಜಿಯವರು ಗುರು ಮತ್ತು ಭಾರತೀಯ ಸಂಸ್ಕೃತಿಯ ರಕ್ಷಣೆ ಮತ್ತು ಅವಶ್ಯಕತೆ ಬಗ್ಗೆ ಮಾತಾಡಿ ಆಶೀರ್ವಚನ ನೀಡಿ ಗುರುವಂದನೆ ಸಲ್ಲಿಸಿದರು. ಆದಿಚುಂಚನಗಿರಿ ಮಹಾ ಸಂಸ್ಥಾನ ಬಿಜಿಎಸ್ ಮಠದ ಜಗದ್ಗುರು  ಶ್ರೀ ಶ್ರೀ ಶ್ರೀ ನಿರ್ಮಲಾನಂದಾ ಮಹಾಸ್ವಾಮಿಜಿಯವರು ಆಶೀರ್ವಚನ ನೀಡಿ ಗುರುವಂದನೆ ಸಲ್ಲಿಸಿದರು. ಬೆಳಗಾವಿ ನಿಡಸೊಸಿ ಶ್ರೀ ಜಗದ್ಗುರು ದುರುದುಂಡೆಶ್ವರ ಮಠದ ಸ್ವಾಮಿಜಿ  ಶ್ರೀ ಶ್ರೀ ಶ್ರೀ ನಿಜಲಿಂಗೇಶ್ವರ ಸ್ವಾಮಿಜಿ ಮತ್ತು ಗೋವಾ ರಾಜ್ಯದ ಶ್ರೀ ದತ್ತ ಪದ್ಮನಾಭ ಪೀಠದ ಪದ್ಮಶ್ರೀ ಪುರಸ್ಕೃತ ಪೂಜ್ಯ ಶ್ರೀ ಶ್ರೀ ಸದ್ಗುರು ಬ್ರಹ್ಮೇಶನಂದನಾಚಾರ್ಯ ಸ್ವಾಮಿಜಿ, ಸ್ವಾಮಿಜಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸನಾತನ್ ವೇದಿಕ್ ಸಂಸ್ಥಾನದ ಗುರು ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಪ್ರೋಫೆಸರ್ ಸ್ವಾಮಿ ಚೈತನ್ಯಾನಂದ ಸರಸ್ವತಿಯವರಿಂದ ಸಮಾರೋಪ ಸಂದೇಶ ಪ್ರವಚನ ನಡೆಯಿತು. ಅಬುಧಾಬಿ ಕರ್ಮ ಆರ್ಟ್ ಸೆಂಟರ್ ವತಿಯಿಂದ”ಶಿವಶಕ್ತಿ” ಭರತನಾಟ್ಯ ಸರ್ವರ ಮೆಚ್ಚುಗೆ ಪಡೆಯಿತು.

ಶಾಸ್ತ್ರೋಕ್ತವಾಗಿ ವೇದ ಘೋಷ ಮಾಡಿ ಗಣಪತಿ ಪೂಜೆ ಮಾಡಿ ಕಾರ್ಯಕ್ರಮ ಮಾಡಿದ ೪೦ ಮಂದಿಗೆ ಶಾಲು ಹೊದಿಸಿ ಗೌರವಿಸಲಾಯಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರುಗಳಿಗೆ ನೀಡಲಾಗಿರುವ ಬಿರುದುಗಳು ಹಾಗೂ ಸನ್ಮಾನ ಗೌರವ.  ಅಯೋಧ್ಯೆಯ ಶ್ರೀ ರಾಮನ ಮೂರ್ತಿಯ ಕೆತ್ತಿದ ಕೈ ಬೆರಳಿಗೊಂದು ಚಿನ್ನದುಂಗುರ ಕಾರ್ಯಕ್ರಮದಲ್ಲಿ, ಶಿಲ್ಪಿಗಳ ಕೈ ಬೆರಳುಗಳಿಗೆ ಚಿನ್ನದುಂಗುರ ತೊಡಿಸಿ ಸನ್ಮಾನಿಸಲಾಯಿತು.

ಶ್ರೀ ಅರುಣ್ ಯೋಗಿರಾಜ್ : “ಸಂಸ್ಕೃತಿ ಶಿಲ್ಪಕಲಾ ಶ್ರೇಷ್ಠ”-ಅಯೋಧ್ಯೆ ಶ್ರೀ ರಾಮ ಲಲ್ಲ ಮೂರ್ತಿ ಕೆತ್ತಿರುವ ಶಿಲ್ಪಿ

ಶ್ರೀ ಗಣೇಶ್ ಭಟ್ : “ಸಂಸ್ಕೃತಿ ಶಿಲ್ಪಕಲಾ ರತ್ನ”-ಅಯೋಧ್ಯೆ ಶ್ರೀ ರಾಮ ಲಲ್ಲ ಮೂರ್ತಿಯ ಕೆತ್ತನೆಯ ಇನ್ನೊರ್ವ ಶಿಲ್ಪಿ

ಶ್ರೀ ಅಶೋಕ್ ಕೊಟೆಚಾ : “ಸಂಸ್ಕೃತಿ ಧರ್ಮ ರತ್ನ”-ಅಬುಧಾಬಿ ಹಿಂದೂ ಮಂದಿರ ನಿರ್ಮಾಣ ಹಿಂದಿನ ಬೃಹತ್ ಶಕ್ತಿ

ಡಾ. ಬಿ. ಆರ್. ಶೆಟ್ಟಿ.: “ಸಂಸ್ಕೃತಿ ದಿ ಗೋಲ್ಡನ್ ಹಾರ್ಟ್ ಅವಾರ್ಡ್”-ಯು.ಎ.ಇ.ಯ ಹಿರಿಯ ಉದ್ಯಮಿ ಹಾಗೂ ಮಾನವತಾ ಹಿತೈಷಿ

ಶ್ರೀ ಎಂ. ಬಿ. ಬಸವರಾಜ್ : “ಕನ್ನಡ ಸೇವಾ ಸಂಸ್ಕೃತಿ ರತ್ನ”-ವ್ಯವಸ್ಥಾಪ ಕ ನಿರ್ದೇಶಕರು – ನಂದಿ ಡೆವಲಪರ್ಸ್ ಬೆಂಗಳೂರು

ಡಾ ದಿನೇಶ್ ಸದಾಶಿವನ್ : “ಮಾಸ್ಟರ್ ಆಫ್ ಕಾರ್ಡಿಕ್ ಕೇರ್ ರತ್ನ”-ಯು.ಎ.ಇಯಲ್ಲಿ ಹತ್ತು ಸಾವಿರ ಹೃದಯ ಶಸ್ತ್ರ ಚಿಕಿತ್ಸೆ ಮಾಡಿರುವ ಕನ್ನಡಿಗ ಹೃದಯ ತಜ್ಞ

ಶ್ರೀಮತಿ ಜಯಲಕ್ಷ್ಮೀ ಸುರೇಶ್ ಭಟ್ : “ಕನ್ನಡ ಭಾಷಾ ಸಂಸ್ಕೃತಿ ಸೇವಾ ಪುರಸ್ಕಾರ್”-ಗಲ್ಫ್ ನಾಡಿನಲ್ಲಿ ಕನ್ನಡ ಭಾಷಾ ಸೇವೆ

ಶ್ರೀ ವೇಲ್ ಮುರುಘಾ : “ಸಂಸ್ಕೃತಿ ಪವರಿಂಗ್ ದಿ ನೇಚರ್ ಅವಾರ್ಡ್”-ಇಂಜಿನಿಯರಿಂಗ್ ಮ್ಯಾನೆಜ್ಮೆಂಟ್ ಪರಿಣಿತರು

ಡಾ ತುಂಬೆ ಮೊಯಿದ್ದೀನ್ : “ಔಟ್ ಸ್ಟಾಂಡಿಂಗ್ ಎಜುಕೇಟರ್ ಅಚೀವ್ ಮೆಂಟ್ ಅವಾರ್ಡ್”-ವಿದೇಶದಲ್ಲಿ ತುಂಬೆ ಮೆಡಿಕಲ್ ಯೂನಿವರ್ಸಿಟಿ ಸ್ಥಾಪಿಸಿ ಶಿಕ್ಷಣ ಕ್ಷೇತ್ರಲ್ಲಿ ಸಾಧನೆ ಮಾಡಿದವರು

ಶ್ರೀ ಸತೀಶ್ ಸನ್ಪಾಲ್ : “ಸಂಸ್ಕೃತಿ ಬಿಲ್ಡರ್ ಆಫ್ ಡ್ರೀಮ್ಸ್ ರತ್ನ”-ಅನೇಕ್ಸ್ ಹೋಲ್ಡಿಂಗ್ ಚೇರ್ಮನ್ ಹಾಗೂ ಮಾನವತಾ ಹಿತೈಷಿ ವಾದಿ

ಶ್ರೀ ಬಿ. ಕೆ. ಗಣೇಶ್ ರೈ : “ಸಂಸ್ಕೃತಿ ಶಿಲ್ಪಕಲಾ ರತ್ನ”-ಕ್ರಿಯಾತ್ಮಕ ಕಲಾ ನಿರ್ದೇಶಕರು, ಬರಹಗಾರು, ಸಮಾಜ ಮತ್ತು ಸನಾತನ ಸೇವೆ

ಶ್ರೀ ಸುಬ್ರಹ್ಮಣ್ಯ : “ಸಂಸ್ಕೃತಿ ವೇದ ಪುರಸ್ಕಾರ ರತ್ನ”-ಸನಾತನ ವೇದ ಹಾಗೂ ಸಂಗೀತ ಸೇವೆ

ಶ್ರೀ ಸರ್ವೋತ್ತಮ್ ಶೆಟ್ಟಿ : “ಸಂಸ್ಕೃತಿಸೋಶಿಯಲ್ ಎಕ್ಸಲೆನ್ಸ್ ಅವಾರ್ಡ್”-ಕನ್ನಡ ಭಾಷಾ ಸೇವೆ ಮತ್ತು ಸಂಘಟನಾ ಚತುರತೆ

ಪೂಜ್ಯ ಸಾಯಿಕೀರ್ತಿನಾಥ್ ಸ್ವಾಮಿಜಿ : “ಸಂಸ್ಕೃತಿ ಭಕ್ತಿ ರತ್ನ”-ಭಕ್ತಿ ಸಂಗೀತ ಸೇವೆ – ಆದಿಚುಂಚನಗಿರಿ ಮಹಾ ಸಂಸ್ಥಾನ ಬಿಜಿಎಸ್ ಮಠ

ಶ್ರೀ ಭಗವಂತ್ ಖೂಬಾ : “ವಿಸಿನರಿ ಲೀಡರ್ ಆಫ್ ದಿ ನೇಷನ್ ಅವಾರ್ಡ್”-ಕೇಂದ್ರ ಸರ್ಕಾರದ ಸಚಿವರಾಗಿ ಜನಮಾನಸದಲ್ಲಿ ಸಲ್ಲಿಸಿರುವ ಸೇವೆಗಾಗಿ

ಶ್ರೀ ಸದನ್ ದಾಸ್ : “ಸಂಸ್ಕೃತಿ ಸೇವಾ ಪುರಸ್ಕಾರ್ ರತ್ನ”-ಕನ್ನಡ ಭಾಷೆ, ಸಮಾಜ ಸೇವೆ, ಸನಾತನ, ಅತ್ಯುತ್ತಮ ಸಂಘಟನೆಗಾಗಿ

ಶ್ರೀ ಕೆಂಪರಾಜ್ : “ಸಂಸ್ಕೃತಿ ಹ್ಯೂಮನ್ ಕ್ಯಾಪಿಟಲ್ ಎಕ್ಸಲೆನ್ಸ್ ಅವಾರ್ಡ್”

ವ್ಯವಸ್ಥಾಪಕ ನಿರ್ದೇಶಕರು ಸ್ಕಿಲ್ ಟೆಕ್ ಗ್ಲೋಬಲ್ ಹ್ಯೂಮನ್ ರಿಸೋರ್ಸ್ ಲೀಡರ್ಶಿಪ್-ಶ್ರೀ ಪ್ರಕಾಶ್ ರುದ್ರಪ್ಪ : “ಸಂಸ್ಕೃತಿ ಸೇವಾ ರತ್ನ”-ಸಾಂಸ್ಕೃತಿಕ, ಸಂಘಟನೆ, ಸಮಾಜ ಸೇವೆಗಾಗಿ

ಶ್ರೀ ಚಂದ್ರಶೇಖರ್ ಆರಾಧ್ಯ ಯು.ಎಸ್.ಎ.: “ಸಂಸ್ಕೃತಿ ಸೇವಾ ಪುರಸ್ಕಾರ್ ರತ್ನ”-ಸಮಾಜ ಸೇವೆ ಮತ್ತು ಸಂಸ್ಕೃತಿ ರಕ್ಷಣೆ

ಕಾರ್ಯಕ್ರಮದ ಅಂತಿಮ ಘಟ್ಟದಲ್ಲಿ ಜೆ ಐ ಟು ಡ್ಯಾನ್ಸ್ ಅಂಡ್ ಮ್ಯೂಸಿಕ್ ಟ್ರೈನಿಂಗ್ ಸೆಂಟರ್ ವಿದ್ಯಾರ್ಥಿಗಳಿಂದ ಚಿರಂಜೀವಿ ಮಾರ್ಕಂಡೆಯಾ ಕಥಾನಕ ನೃತರೂಪಕ ನಡೆಯಿತು. ಬಂದಿರುವ ಎಲ್ಲಾ ಆಹ್ವಾನಿತರಿಗೆ ಬೆಳಗಿನ ಉಪಹಾರ ಮಧ್ಯಾನದ ರುಚಿಯಾದ  ಭೋಜನ ಮತ್ತು ಸಂಜೆಯ ಚಹಾದ ವ್ಯವಸ್ಥೆ ಮಾಡಲಾಗಿತ್ತು.

ಅನಿವಾಸಿ ಭಾರತೀಯರೆಲ್ಲರೂ ಒಟ್ಟು ಸೇರಿ ಗಲ್ಫ್ ನಾಡಿನಲ್ಲಿ ಗುರುವಂದನೆ ಸಲ್ಲಿಸಿ ಮತ್ತು ಭಾರತೀಯ ಸಂಸ್ಕೃತಿ ಸಿಂಚನ ಮಾಡಿ ಇತಿಹಾಸ ಬರೆದರು.

 

Comments are closed.