ಕುಂದಾಪುರ: ಇಲ್ಲಿನ ಪ್ರಸಿದ್ಧ ತ್ರಾಸಿ-ಮರವಂತೆ ಬೀಚ್ ನಲ್ಲಿ ಶನಿವಾರ (ಜೂ.07) ಸಂಜೆ ಅಲೆಗಳ ಸೆಳೆತಕ್ಕೆ ಸಿಕ್ಕಿ ಸಮುದ್ರ ಪಾಲಾಗುತ್ತಿದ್ದ ಬೆಂಗಳೂರು ಮೂಲದ ನಾಲ್ವರು ಹಾಗೂ ಇನ್ನೊಂದು ಪ್ರಕರಣದಲ್ಲಿ ಗೋವಾ ಮೂಲದ ಓರ್ವ ಮಹಿಳೆ ಸೇರಿದಂತೆ ಐವರನ್ನು ರಕ್ಷಿಸಲಾಗಿದೆ.
ಲೈಫ್ ಗಾರ್ಡ್ ಸಿಬ್ಬಂದಿ ಪೃಥ್ವಿರಾಜ್ ಉಪ್ಪುಂದ ಹಾಗೂ ಪ್ರಮೋದ್ ರಾಜ್ ಉಪ್ಪುಂದ ಹಾಗೂ ಬೀಚ್ ಉಸ್ತುವಾರಿ ಸಿಬ್ಬಂದಿ ಸುರೇಶ್ ಕೊಡೇರಿ, 24*7 ಅಂಬುಲೆನ್ಸ್ ಇಬ್ರಾಹಿಂ ಗಂಗೊಳ್ಳಿ ನೇತೃತ್ವದಲ್ಲಿ ರಕ್ಷಣೆ ಮಾಡಲಾಗಿದೆ.
ನಂತರ ಸ್ಥಳಕ್ಕೆ ಆಗಮಿಸಿದ ಗಂಗೊಳ್ಳಿ ಪೊಲೀಸ್ ನಿರೀಕ್ಷಕ ಹಾಗೂ ಸಿಬ್ಬಂದಿಗಳು ಒನ್ ಟು ಸಿಬ್ಬಂದಿ, ಹೈವೇ ಪೆಟ್ರೋಲ್ ಸಿಬ್ಬಂದಿ ಸೈರನ್ ಮೊಳಗಿಸಿ ಸುರಕ್ಷತೆ ದೃಷ್ಟಿಯಿಂದ ಪ್ರವಾಸಿಗರನ್ನು ಎಚ್ಚರಿಸಿದರು.
Comments are closed.