ಕರ್ನಾಟಕ

ಹಿಟ್ ಸಿನೆಮಾಗಳನ್ನು ನೀಡಿದ ಖ್ಯಾತ ನಿರ್ದೇಶಕ ಎಸ್‌.ಕೆ. ಭಗವಾನ್‌ ವಿಧಿವಶ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ ಭಗವಾನ್ ಅವರು ಸೋಮವಾರ ಬೆಳಿಗ್ಗೆ ನಿಧನರಾಗಿದ್ದಾರೆ. 90 ವರ್ಷದ ಭಗವಾನ್ ಅವರು ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಮೃತಪಟ್ಟರು. ಕನ್ನಡ ಚಿತ್ರರಂಗದ ನಟ, ನಟಿಯರು ಭಗವಾನ್ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.

ಇಂದು ರವೀಂದ್ರ ಕಲಾಕ್ಷೇತ್ರದಲ್ಲಿ ಭಗವಾನ್ ಅವರ ಪಾರ್ಥೀವ ಶರೀರವನ್ನು ದರ್ಶನ ವ್ಯವಸ್ಥೆಗೆ ಇಡಲಾಗುತ್ತದೆ. ಅಂದಹಾಗೆ ಭಗವಾನ್ ಅವರಿಗೆ ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳಿದ್ದಾರೆ.

1933ರಲ್ಲಿ ಜನಿಸಿದ ಎಸ್ ಕೆ ಭಗವಾನ್ ಅವರು ಕಣಗಲ್ ಪ್ರಭಾಕರ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿದ್ದರು. ಬಳಿಕ ಅವರು ಡಾ ರಾಜ್‌ಕುಮಾರ್, ಉದಯ್ ಕುಮಾರ್ ಅವರಿಗೆ ‘ಸಂಧ್ಯಾ ರಾಗ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆದರೆ ಈ ಚಿತ್ರದ ನಿರ್ದೇಶನದ ಕ್ರೆಡಿಟ್‌ರನ್ನು ಎಸಿ ನರಸಿಂಹ ಮೂರ್ತಿ ಅವರಿಗೆ ನೀಡಿದ್ದರು ಮೊದಲ ಬಾರಿಗೆ ಕನ್ನಡದಲ್ಲಿ ಜೇಮ್ಸ್ ಬಾಂಡ್ ಮಾದರಿಯ ಸಿನಿಮಾಗಳನ್ನು ಮಾಡಿದ ಕೀರ್ತಿ ದೊರೈ ಭಗವಾನ್ ಜೋಡಿಗೆ ಸಲ್ಲುತ್ತದೆ.

ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಗಾಳಿಮಾತು, ಚಂದನದ ಗೊಂಬೆ, ಹೊಸ ಬೆಳಕು, ಜೀವನಚೈತ್ರ ಮೊದಲಾದ ಹಿಟ್ ಚಿತ್ರಗಳು ದೊರೈ ಭಗವಾನ್ ನಿರ್ದೇಶನದ್ದು.

ನಿರ್ದೇಶನದ ಜೊತೆಗೆ ಭಗವಾನ್ ಅವರು ‘ಹೊಸಬೆಳಕು’, ‘ಭಾಗ್ಯೋದಯ’, ‘ಮಂಗಲಸೂತ್ರ’, ‘ರೌಡಿ ರಂಗಣ್ಣ’, ‘ವಸಂತ ಗೀತ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇನ್ನು ಇವರ ಸಿನಿಮಾಗಳಿಗೆ ರಾಜನ್ ನಾಗೇಂದ್ರ, ಜಿಕೆ ವೆಂಕಟೇಶ್ ಸಂಗೀತ ನಿರ್ದೇಶನವಿರುತ್ತಿತ್ತು.

Comments are closed.