ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ಚಿತ್ರದಲ್ಲಿ ಪುನೀತ್ ಪಾತ್ರಕ್ಕೆ ಶಿವರಾಜ್ ಕುಮಾರ್ ಅವರು ಡಬ್ಬಿಂಗ್ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಹುಟ್ಟಿದ ಹಬ್ಬದ ದಿನ ಅಂದರೆ ಮಾರ್ಚ್ 17 ರಂದು ಚಿತ್ರ ಬಿಡುಗಡೆ ಚಿತ್ರ ತಂಡ ಸಿದ್ಧತೆ ನಡೆಸುತ್ತಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿವೆ. ಶಿವರಾಜ್ ಕುಮಾರ್ ಅವರು ಪುನೀತ್ ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಜ್ ಕುಮಾರ್ ಅಪ್ಪು ಇಲ್ಲದೆ ವಾಯ್ಸ್ ಕೊಡೋದು ತುಂಬಾ ಕಷ್ಟ. ಇನ್ನೊಬ್ಬ ಆಕ್ಟರ್ ಒಳಗೆ ಹೋಗಿ ಡಬ್ ಮಾಡುವುದು ಕಷ್ಟ. ಜೇಮ್ಸ್ ಇಡೀ ಸಿನಿಮಾಗೆ ವಾಯ್ಸ್ ಕೊಟ್ಟಿದ್ದೀನಿ. ಎರಡೂವರೆ ದಿನ ವಾಯ್ಸ್ ಡಬ್ ಮಾಡಿದೀನಿ ಎಂದು ತಿಳಿಸಿದ್ದಾರೆ.
ಜ.26 ರಂದು ಪುನೀತ್ ರಾಜಕುಮಾರ್ ಸೈನಿಕನ ಗೆಟಪ್’ನಲ್ಲಿರುವ ಜೇಮ್ಸ್ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು.
Comments are closed.