ಬೆಂಗಳೂರು: ಕೆಲ ಸಮಯಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕನ್ನಡದ ಹಿರಿಯ ನಟ ಅಶೋಕ್ ರಾವ್ ನಿಧನರಾಗಿದ್ದಾರೆ. ಕ್ಯಾನ್ಸರ್ ಖಾಯಿಲೆಯಿಂದ ಬಳಲುತ್ತಿದ್ದ ಅಶೋಕ್ ರಾವ್ ಅವರು ಮಂಗಳವಾರ ಮಧ್ಯರಾತ್ರಿ 12.30ಕ್ಕೆ ವಿದ್ಯಾರಣ್ಯಪುರದಲ್ಲಿರುವ ಮನೆಯಲ್ಲಿ ಕೊನೆಯುಸಿರೆಳೆದರು.

ಖಳ ನಟ, ಪೋಷಕ ಪಾತ್ರಗಳಲ್ಲಿ ಮಿಂಚಿದ್ದ ಅಶೋಕ್ ರಾವ್ ಅವರು ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಗಂಭೀರ ಪಾತ್ರಗಳಿಗೆ ಅವರು ಜೀವ ತುಂಬಿದ್ದರು.
ಡಾ. ರಾಜ್ಕುಮಾರ್ ನಟನೆಯ ‘ಪರಶುರಾಮ್’ ಸಿನಿಮಾದಲ್ಲಿ ಖಳ ನಟನಾಗಿ ಅವರು ಗಮನ ಸೆಳೆದಿದ್ದರು. ಅತಿ ಅಪರೂಪ, ಪರಿಣಯ, ಶತ್ರು, ಮುಗಿಲ ಚುಂಬನ, ಬಾಸ್, ಪೊಲೀಸ್ ಕಥೆ, ಹೂ, ಕೃಷ್ಣನ್ ಲವ್ ಸ್ಟೋರಿ, ಕುಣಿದು ಕುಣಿದು ಬಾರೆ, ಯುವ, ಮನಸಾರೆ, ಬೊಂಬಾಟ್, ಅರ್ಜುನ್, ಸಂಗಾತಿ, ಪೊಲೀಸ್ ಕಥೆ, ಸಜನಿ, ಸೌಂದರ್ಯ, ಬೊಂಬುಗಳು ಸಾರ್ ಬೊಂಬುಗಳು, ಮತಾಡ್ ಮಾತಾಡ್ ಮಲ್ಲಿಗೆ, ಆಪರೇಷನ್ ಅಂಕುಶ, ತವರಿನ ಸಿರಿ, ತಿರುಪತಿ, ಸೈನೈಡ್, ಸಿರಿವಂತ, ರಿಷಿ, ಗಡಿಪಾರ್, ಇನ್ಸ್‌ಪೆಕ್ಟರ್ ಝಾನ್ಸಿ, ಆಟೋ ಶಂಕರ್, ಓಂ ಗಣೇಶ್, ಸೈನಿಕ, ಇಂದ್ರ ಧನುಷ್, ಹಬ್ಬ, ಓ ಪ್ರೇಮವೇ, ಸ್ನೇಹ, ಟುವ್ವಿ ಟುವ್ವಿ ಟುವ್ವಿ, ಜೋಡಿ ಹಕ್ಕಿ, ಅಶ್ವಮೇಧ ಮುಂತಾದ ಚಿತ್ರಗಳಲ್ಲಿ ಅಶೋಕ್ ರಾವ್ ನಟಿಸಿದ್ದರು.
Comments are closed.