ಕರಾವಳಿ

ಬಪ್ಪನಾಡು ದುರ್ಗಾಪರಮೇಶ್ವರಿ ದೇವಳಕ್ಕೆ ನಟಿ ರಚಿತಾರಾಮ್ ಭೇಟಿ; ಕರಾವಳಿ ಬಗ್ಗೆ ಡಿಂಪಲ್ ಕ್ವೀನ್ ಹೇಳಿದ್ದೇನು..?

Pinterest LinkedIn Tumblr

ಮಂಗಳೂರು: ಸ್ಯಾಂಡಲ್‍ವುಡ್‍ನ ನಟಿ, ಡಿಂಪಲ್ ಕ್ವೀನ್ ಖ್ಯಾತಿಯ ರಚಿತಾರಾಮ್ ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿಯಲ್ಲಿರುವ ಬಪ್ಪನಾಡು‌ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದರು.

ರಚಿತಾರಾಮ್ ತಮ್ಮ ಕುಟುಂಬ ಸಮೇತ ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ‌ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಾಲಯದ ವತಿಯಿಂದ ಅವರನ್ನು ಗೌರವಿಸಲಾಯಿತು.

ಈ ವೇಳೆ ಮಾತನಾಡಿದ ಅವರು, ಕರಾವಳಿಯ ದೇವಸ್ಥಾನಗಳು ಭಕ್ತಿಯ ತಾಣಗಳಾಗಿದ್ದು ಮನಸ್ಸಿಗೆ ಶಾಂತಿ ನೀಡುತ್ತದೆ. ಕರಾವಳಿಯ ಖಾದ್ಯಗಳು ಬಹಳ ಇಷ್ಟವಾಗಿದ್ದು ಎಲ್ಲಾ ತರದ ಊಟಗಳನ್ನು ಇಷ್ಟ ಪಡುತ್ತೇನೆ. ಪಬ್ಬಾಸ್ ಐಸ್ ಕ್ರೀಂ ತಿನ್ನಬೇಕೆಂದು ಇಷ್ಟವಿತ್ತು. ಆದರೆ ಗಂಟಲು ನೋವಿನಿಂದ ಸಾಧ್ಯವಾಗಿಲ್ಲ ಎಂದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಎನ್ .ಎಸ್ ಮನೋಹರ್ ಶೆಟ್ಟಿ, ಅರ್ಚಕ ನರಸಿಂಹ ಭಟ್ ಶಿವಶಂಕರ್ ವರ್ಮ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್, ನಾಗೇಶ್ ಬಪ್ಪನಾಡು ಉಪಸ್ಥಿತರಿದ್ದರು.

Comments are closed.