ಕರಾವಳಿ

ಕಾಸರಗೋಡಿನಲ್ಲಿ ದಾಖಲೆಗಳಿಲ್ಲದೆ 3.30 ಕೋಟಿ ರೂ. ಚಿನ್ನಾಭರಣ ಸಾಗಾಟ; ಆರೋಪಿ ವಶಕ್ಕೆ

Pinterest LinkedIn Tumblr

ಕಾಸರಗೋಡು: ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಾಟ ಮಾಡುತಿದ್ದ 3.30 ಕೋಟಿ ರೂ. ಮೌಲ್ಯದ ಚಿನ್ನಾಭರಣ ಸಹಿತ ಮಹಾರಾಷ್ಟ್ರ ನಿವಾಸಿಯನ್ನು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರ ಕೊಲ್ಲಾಪುರದ ಮಹೇಶ್(26) ಬಂಧಿತ ಆರೋಪಿ. ಗುರುವಾರ ಮಧ್ಯಾಹ್ನ ಮಹೇಶ್ ಚಿನ್ನಾಭರಣ ಸಹಿತ ಕಣ್ಣೂರಿನಿಂದ ಮಂಗಳೂರಿಗೆ ತೆರಳುತ್ತಿದ್ದಾಗ ಕಾಸರಗೋಡು ಚಂದ್ರಗಿರಿ ಸೇತುವೆ ಸಮೀಪ ಕಾರನ್ನು ತಡೆದು ತಪಾಸಣೆ ನಡೆಸಿದ್ದು ಚಿನ್ನಾಭರಣ ಸಾಗಾಟ ಪತ್ತೆಯಾಗಿದೆ. ಅಧಿಕಾರಿಗಳಿಗೆ ಲಭಿಸಿದ ಖಚಿತ ಮಾಹಿತಿಯಂತೆ ಕಾರ್ಯಾಚರಣೆ ನಡೆಸಲಾಗಿದ್ದು ಕಾರಿನ ಸೀಟಿನಡಿ ಚಿನ್ನಾಭರಣವನ್ನು ಬಚ್ಚಿಟ್ಟು ಸಾಗಾಟ ಮಾಡುತ್ತಿದ್ದ ಎನ್ನಲಾಗಿದೆ. ಸುಮಾರು ಆರೂವರೆ ಕಿಲೋ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿ ಮಹೇಶನನ್ನು ಕಸ್ಟಮ್ಸ್ ಅಧಿಕಾರಿಗಳು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

Comments are closed.