ಕರ್ನಾಟಕ

ಕನ್ನಡ ಬಾವುಟ ಸುಟ್ಟ ಮೂವರು ದುಷ್ಕರ್ಮಿಗಳ ಬಂಧನ..!

Pinterest LinkedIn Tumblr

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಹಲಸಿ ಗ್ರಾಮದಲ್ಲಿ ಕನ್ನಡ ಬಾವುಟ ಸುಟ್ಟು, ಜಗಜ್ಯೋತಿ ಬಸವೇಶ್ವರರ ಚಿತ್ರಕ್ಕೆ ಸೆಗಣಿ ಮೆತ್ತಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಂದಗಡ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಜು ಗುರವ, ಸಚಿನ್ ಗುರವ ಹಾಗೂ ಗಣೇಶ ಪೆಡ್ನೇಕರ ಬಂಧಿತರು. ಘಟನೆಯು ಸೋಮವಾರ ನಡೆದಿತ್ತು.

ಸದ್ಯ‌ ಬಂಧಿತರನ್ನು ಪೊಲೀಸರು ತೀವೃ ವಿಚಾರಣೆಗೊಳಪಡಿಸಿದ್ದಾರೆ.

 

Comments are closed.