ಬೆಂಗಳೂರು: ವಿಧಾನ ಪರಿಷತ್ ಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯುತ್ತಿದ್ದು, ಕೊಡಗು ವಿಧಾನಪರಿಷತ್ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಹಾಸನ ಜೆಡಿಎಸ್ ಅಭ್ಯರ್ಥಿ ಸೂರಜ್ ರೇವಣ್ಣ ಅವರು ಆರಂಭದಿಂದಲೂ ಮುನ್ನಡೆ ಸಾಧಿಸಿಕೊಂಡು ಬಂದು ಅಂತಿಮವಾಗಿ 1430 ಮತಗಳ ಅಂತರದಿಂದ ಜಯ ಸಾಧಿಸಿದರು.
ಸೂರಜ್ ರೇವಣ್ಣ 2247 ಮತ ಪಡೆದರೆ, ಕಾಂಗ್ರೆಸ್ ನ ಎಂ.ಶಂಕರ್ 714, ಬಿಜೆಪಿಯ ವಿಶ್ವನಾಥ್ 435 ಮತಗಳನ್ನಷ್ಟೇ ಪಡೆದರು.
ಕೊಡಗಿನಲ್ಲಿ 102 ಮತಗಳ ಅಂತರದಿಂದ ಬಿಜೆಪಿಯ ಸುಜಾ ಕುಶಾಲಪ್ಪ ಜಯಭೇರಿ ಬಾರಿಸಿದ್ದು, ಕೊಡಗು ವಿಧಾನಪರಿಷತ್ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿತು. ಬಿಜೆಪಿಯ ಸುಜಾ ಅವರು 705 ಮತಗಳನ್ನು ಪಡೆದರೆ, ಕಾಂಗ್ರೆಸ್ ನ ಡಾ.ಮಂಥರ್ ಗೌಡ ಅವರು 603 ಮತಗಳನ್ನು ಪಡೆದರು. 17 ಮತಗಳು ಅನರ್ಹವಾಗಿದೆ.
Comments are closed.