ಪ್ರಮುಖ ವರದಿಗಳು

ಸಿಡಿಎಸ್ ಜನರಲ್ ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತಿಮ ಯಾತ್ರೆ; ಸೇನಾದಂಡನಾಯಕನಿಗೆ ಪುಷ್ಪ ಗೌರವ ಸಲ್ಲಿಸಿದ ಜನರು

Pinterest LinkedIn Tumblr

ನವದೆಹಲಿ: ತಮಿಳುನಾಡಿನ ಕೂನೂರನಲ್ಲಿ ಬುಧವಾರ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಸಿಡಿಎಸ್ ಜನರಲ್ ಬಿಪಿನ್ ರಾವತ್ ಹಾಗೂ ಅವರ ಪತ್ನಿ ಮದುಲಿಕಾ ರಾವತ್ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆ ನಡೆದಿದ್ದು ಸೇನಾ ವಾಹನದಲ್ಲಿ ಪಾರ್ಥಿವ ಶರೀರದ ಮೆರವಣಿಗೆ ಸಾಗಿದೆ. ಕೆಲವೇ ಹೊತ್ತಲ್ಲಿ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.

ಅವರ ನಿವಾಸದಿಂದ ಆರಂಭವಾದ ಅಂತಿಮ ಯಾತ್ರೆ ದೆಹಲಿಯ ಕಂಟೊನ್ಮೆಂಟ್ ನಲ್ಲಿರುವ ಬ್ರಾರ್ ಸ್ಕ್ವೇರ್ ಸಮಾಧಿಯವರೆಗೂ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು. ಪಾರ್ಥಿವ ಶರೀರ ಸಾಗುತ್ತಿರುವ ರಸ್ತೆಗಳಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದು ಅಗಲಿದ ಸೇನಾದಂಡನಾಯಕನಿಗೆ ಪುಷ್ಪ ಗೌರವ ಸಲ್ಲಿಸಿದರು.

ಇದಾದ ಬಳಿಕ ಸಂಬಂಧಿಕರಿಗೆ ಪಾರ್ಥಿವ ಶರೀರದ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. 4 ರಿಂದ 4-15ರವರೆಗೆ ಗಣ್ಯರಿಂದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇದೀಗಾ (4.15 ರ ಬಳಿಕ) ಅಂತಿಮ ವಿಧಿ ವಿಧಾನ ನೆರವೇರಿಸಲಾಗುತ್ತಿದೆ.

ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ವೇಳೆ ಶ್ರೀಲಂಕಾ, ಭೂತಾನ್, ನೇಪಾಳ ಮತ್ತು ಬಾಂಗ್ಲಾದೇಶದ ಮಿಲಿಟರಿ ಕಮಾಂಡರ್ ಗಳು ಪಾಲ್ಗೊಂಡಿದ್ದಾರೆ. ಬಿಪಿನ್ ರಾವತ್ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರದ ವೇಳೆ ಭದ್ರತೆಗಾಗಿ ಸುಮಾರು 800 ಸೇನಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ.

Comments are closed.