ಕರ್ನಾಟಕ

ಪುನೀತ್ ರಾಜ್‌‌ಕುಮಾರ್ ಸಾವಿನ ಬಗ್ಗೆ ತನಿಖೆ ನಡೆಸಲು ಅಭಿಮಾನಿಯೊಬ್ಬರಿಂದ ಪೊಲೀಸರಿಗೆ ದೂರು

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್‌ವುಡ್‌‌ ನಟ ಪುನೀತ್ ರಾಜ್‌ಕುಮಾರ್ ಅವರ ಸಾವಿಗೆ ಅವರ ಕುಟುಂಬ ವೈದ್ಯರ ನಿರ್ಲಕ್ಷ್ಯವೇ ಕಾರಣ ಆರೋಪಿಸಿ ಈ ಬಗೆ ತನಿಖೆ ನಡೆಸಬೇಕು ಎಂದು ಪುನೀತ್ ಅಭಿಮಾನಿಯೊಬ್ಬರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಅರುಣ್ ಪರಮೇಶ್ವರ್ ಎಂಬ ಅಭಿಮಾನಿ ದೂರು ನೀಡಿದ್ದು, ಪುನೀತ್ ರಾಜ್‌ಕುಮಾರ್‌ಗೆ ಎದೆನೋವು ಕಾಣಿಸಿಕೊಂಡ ಕೂಡಲೇ ಅವರು ರಮಣಶ್ರೀ ಆಸ್ಪತ್ರೆಗೆ ಹೋಗಿದ್ದು, ಪುನೀತ್ ಗೆ ಅಲ್ಲಿ ಸೂಕ್ತ ಚಿಕಿತ್ಸೆಯೂ ಸಿಕ್ಕಿಲ್ಲ ಎಂದು ಎಣಿಸುತ್ತದೆ. ಅವರನ್ನು ತಡವಾಗಿ ವಿಕ್ರಮ್ ಆಸ್ಪತ್ರೆಗೆ ಸೇರಿಸಲಾಗಿದ್ದು, ವಿಕ್ರಮ್ ಆಸ್ಪತ್ರೆಗೆ ಸಾಗಿಸಲು ರಮಣಶ್ರೀ ಆಸ್ಪತ್ರೆ ಕಡೆಯಿಂದ ಆಂಬ್ಯೂಲೆನ್ಸ್ ಕೂಡ ಮಾಡಿಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಈ ಬಗ್ಗೆ ಸತ್ಯಾಸತ್ಯತೆ ಬಹಿರಂಗವಾಗಬೇಕು ಎಂದಿದ್ದಾರೆ.

ಇನ್ನು ಪುನೀತ್ ಎಷ್ಟು ಸಮಯಕ್ಕೆ ರಮಣಶ್ರೀ ಆಸ್ಪತ್ರೆಗೆ ದಾಖಲಾದರು..?ಎದೆನೋವಿನ ಬಗ್ಗೆ ಹೇಳಿದಾಗ ಎಷ್ಟು ನಿಮಿಷಗಳ ಕಾಲ ರಮಣಶ್ರೀ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು..?ಯಾವ್ಯಾವ ಮಾತ್ರೆಗಳನ್ನು ಅಲ್ಲಿ ನೀಡಲಾಗಿತ್ತು..? ಆ ಬಳಿಕ ಅವರು ಆಸ್ಪತ್ರೆಯಿಂದ ಎಷ್ಟು ಸಮಯಕ್ಕೆ ವಿಕ್ರಮ್ ಆಸ್ಪತ್ರೆಗೆ ತೆರಳಿದರು..? ಈ ಎಲ್ಲದರ ಬಗ್ಗೆ ಪೊಲೀಸರು ತನಿಖೆ ನಡೆಸಿ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Comments are closed.