ಬೆಂಗಳೂರು: ಕೊರೋನಾ ಹಿನ್ನಡೆಯಾಗುತ್ತಿರುವ ಹೊತ್ತಲ್ಲೇ ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಜೋರಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹಿತ ಗಣ್ಯರು ಗುರುವಾರ ದೀಪಾವಳಿ ಶುಭಾಶಯಗಳನ್ನು ಕೋರಿದ್ದಾರೆ.

ಟ್ವೀಟ್ ಮಾಡಿರುವ ಪ್ರಧಾನಿ ಮೋದಿಯವರು, ‘ದೀಪಾವಳಿಯ ಈ ಶುಭ ಸಂದರ್ಭದಲ್ಲಿ ದೇಶವಾಸಿಗಳಿಗೆ ಹಬ್ಬದ ಶುಭಾಶಯಗಳು. ಈ ಬೆಳಕಿನ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಅದೃಷ್ಟವನ್ನು ತರಲಿ ಎಂದು ನಾನು ಬಯಸುತ್ತೇನೆ. ಎಲ್ಲರಿಗೂ ದೀಪಾವಳಿ ಹಬ್ಬದ ಶುಭಾಶಯಗಳು’ ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿ, ‘ವಿಶ್ವದಾದ್ಯಂತ ಇರುವ ಎಲ್ಲಾ ನಮ್ಮ ಪ್ರೀತಿಯ ಕನ್ನಡಿಗರಿಗೆ ಅತ್ಯಂತ ಸಂತೋಷ ಮತ್ತು ಸಮೃದ್ಧ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ‘ಬೆಳಕಿನ ಹಬ್ಬ’ ನಿಮ್ಮೆಲ್ಲರ ಜೀವನವನ್ನು ಆರೋಗ್ಯ, ಸಂಪತ್ತು, ಸಂತೋಷ ಮತ್ತು ಯಶಸ್ಸಿನಿಂದ ಬೆಳಗಲಿ, ನೀವು ಎಲ್ಲಿಯೇ ಇದ್ದರೂ ನಮ್ಮ ಭೂಮಿಗೆ ಹೆಚ್ಚಿನ ಕೀರ್ತಿಯನ್ನು ತನ್ನಿ’ ಎಂದು ತಿಳಿಸಿದ್ದಾರೆ.
Comments are closed.