ಮಂಗಳೂರು: ನಗರದ ಸಿಸಿಬಿ ಪೊಲೀಸರ ಮೇಲೆ ಗಂಭೀರ ಆರೋಪಕ್ಕೀಡಾದ ಕಾರು ಮಾರಾಟ ಪ್ರಕರಣದಲ್ಲಿ ಸಸ್ಪೆಂಡ್ ಆಗಿದ್ದ ಸಿಸಿಬಿ ಎಸ್ಸೈ ಕಬ್ಬಾಳ್ ರಾಜ್ ಮತ್ತು ಸಿಇ ಎನ್ ಪಾಂಡೇಶ್ವರ ಠಾಣೆಯಲ್ಲಿ ಇನ್ಸ್ಪೆಕ್ಟರ್ ಆಗಿದ್ದ ರಾಮಕೃಷ್ಣ ಅವರ ಅಮಾನತು ಆದೇಶವನ್ನು ಹಿಂಪಡೆಯಲಾಗಿದೆ.

ಕಳೆದ 2020 ರ ನವೆಂಬರ್ ನಲ್ಲಿ ಹಣ ದ್ವಿಗುಣ ಪ್ರಕರಣದಲ್ಲಿ ಬಂಧಿತನಾಗಿದ್ದ ಕೇರಳ ಮೂಲದ ಆರೋಪಿಗಳನ್ನು ಬಿಡುಗಡೆ ಮಾಡಲು ಅವರು ಮಾರಾಟ ಮಾಡಿದ್ದಾರೆ ಎಂದು ಆರೋಪ ಕೇಳಿ ಬಂದಿತ್ತು.
ಡಿಜಿಪಿ ಪ್ರವೀಣ್ ಸೂದ್ ಆರೋಪಿಗಳಾಗಿದ್ದ ಕಬ್ಬಾಳ್ ರಾಜ್ ಮತ್ತು ರಾಮಕೃಷ್ಣ ಹಾಗೂ ಇನ್ನಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಿದ್ದರು. ಒಟ್ಟು ಪ್ರಕರಣದ ಬಗ್ಗೆ ಸಿಐಡಿ ತನಿಖೆಗೆ ಆದೇಶ ಮಾಡಿದ್ದರು. ಫೆಬ್ರವರಿ ಕೊನೆಯ ವಾರದಲ್ಲಿ ಅವರು ಸಸ್ಪೆಂಡ್ ಆಗಿದ್ದರು. ಆದರೆ ಯಾವುದೇ ಆರೋಪ ಬಂದು ಇಲಾಖಾ ತನಿಖೆಗೆ ಕಾರಣಕ್ಕೆ ಅಮಾನತುಗೊಂಡ ಅಂತಹ ಅಧಿಕಾರಿಗಳು ಆರು ತಿಂಗಳವರೆಗೆ ಮಾತ್ರ ಅಮಾನತಿನಲ್ಲಿ ಇರುತ್ತಾರೆ ಸಹಜವಾಗಿಯೇ ಅಮಾನತು ಅವಧಿ ಮುಗಿದು ಹೋಗುತ್ತದೆ ಅದರಂತೆಯೇ ಡಿಜಿಪಿ ಪ್ರವೀಣ್ ಸಿದ್ದು ಅವರನ್ನು ಮತ್ತೆ ಕರ್ತವ್ಯಕ್ಕೆ ನಿಯೋಜನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
Comments are closed.