ಕರ್ನಾಟಕ

ಕೋಟಿಗೊಬ್ಬ-3 ನಾಳೆ (ಅ.15) ಬಿಡುಗಡೆಯಾಗುವ ಬಗ್ಗೆ ಟ್ವೀಟ್ ಮಾಡಿದ ಕಿಚ್ಚ ಸುದೀಪ್

Pinterest LinkedIn Tumblr

ಬೆಂಗಳೂರು: ಇಂದು ತೆರೆ ಕಾಣಬೇಕಾಗಿದ್ದ ಕೋಟಿಗೊಬ್ಬ 3 ಸಿನಿಮಾ ಕಾರಣಾಂತರಗಳಿಂದ ಪ್ರದರ್ಶನ ಕಾಣಲಿಲ್ಲ. ಇದೀಗ ನಾಳೆ ಸಿನೆಮಾ ತೆರೆಕಾಣಲಿದೆ ಎಂದು ಚಿತ್ರದ ನಾಯಕ ಸುದೀಪ್ ಅವರೇ ಖುದ್ದು ಘೋಷಣೆ ಮಾಡಿದ್ದಾರೆ.

ಲ್ಯಾಬ್​, ವಿತರಕರು ಹಾಗೂ ನಿರ್ಮಾಪಕರ ನಡುವಿನ ಹಣಕಾಸಿನ ಸಮಸ್ಯೆಯಿಂದಾಗಿ ಸಿನಿಮಾ ಪ್ರದರ್ಶನ ಮಾಡಲು ಅಗತ್ಯವಿದ್ದ ಅನುಮತಿ ಸಿಕ್ಕಿಲ್ಲ. ಇದರಿಂದಾಗಿ ಚಿತ್ರತಂಡ ವಿತರಕರನ್ನು ಬದಲಾಯಿಸಿದೆ. ಜೊತೆಗೆ ನಾಳೆ (ಅಕ್ಟೋಬರ್ 15 ) ಬಿಡುಗಡೆಯಾಗುತ್ತಿದೆ.

ಸಿನಿಮಾ ಪ್ರದರ್ಶನ ದಿಡೀರ್ ರದ್ದಾಗಿದ್ದರಿಂದ ಚಿತ್ರಮಂದಿರದವರು ಹಾಗೂ ಸಿನಿಪ್ರಿಯರು ಬೇಸರಗೊಂಡಿದ್ದರು. ಅಲ್ಲಲ್ಲಿ‌ ಅಭಿಮಾನಿಗಳ‌ ಅಸಮಾಧಾನ ಪ್ರತಿಭಟನೆ ಹಂತಕ್ಕೂ ತಲುಪಿತ್ತು. ಅದಕ್ಕಾಗಿಯೇ ಕಿಚ್ಚ ಸುದೀಪ್​ ಅವರು ಚಿತ್ರತಂಡದ ಪರವಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದರು.

ಸಿನಿಮಾ ರಿಲೀಸ್​ ಮಾಡಲು ನಾನು ಕಾತರನಾಗಿದ್ದೇನೆ. ಆದರೆ, ಈಗ ಆಗಿರುವ ಸಮಸ್ಯೆಯಿಂದಾಗಿ ಚಿತ್ರದ ಪ್ರದರ್ಶನ ರದ್ದಾಗಿದೆ. ಅದಕ್ಕೆ ವಿಷಾದಿಸುತ್ತೇನೆ. ಇನ್ನು ಮುಂದಿನ ರಿಲೀಸ್ ದಿನಾಂಕ ಪ್ರಕಟವಾಗುವರೆಗೆ ತಾಳ್ಮೆ ಇರಲಿ ಎಂದು ಮನವಿ ಮಾಡಿದ್ದ ಕಿಚ್ಚ ಸುದೀಪ್​ ಈಗ ಹೊಸ ದಿನಾಂಕದೊಂದಿಗೆ ಪೋಸ್ಟರ್ ರಿಲೀಸ್ ಮಾಡಿದ್ದಾರೆ.

Comments are closed.