ಕರ್ನಾಟಕ

ಕಾರವಾರದಲ್ಲಿ ರಾಸಾಯನಿಕ ತುಂಬಿದ್ದ ಲಾರಿ ಪಲ್ಟಿ, ಹೆದ್ದಾರಿಯಲ್ಲಿ ಹೊತ್ತಿಕೊಂಡ ಬೆಂಕಿ

Pinterest LinkedIn Tumblr

ಕಾರವಾರ: ರಾಸಾಯನಿಕ ತುಂಬಿದ ಟ್ಯಾಂಕರ್ ಕಾರಾವಾರ ತಾಲ್ಲೂಕಿನ ಆರತಿಬೈಲ್ ಘಟ್ಟದ ತಿರುವಿನಲ್ಲಿ ಬುಧವಾರ ಮಗುಚಿ ಬಿದ್ದಿದೆ. ಇದರಿಂದ ಸೋರಿದ ಕೆಮಿಕಲ್ ಹಳ್ಳದಲ್ಲಿ ಹರಿದು ಬೆಂಕಿ ಹತ್ತಿಕೊಂಡು ರೈತರ ತೋಟ ಗದ್ದೆಗಳಿಗೆ ಹಾನಿಯಾಗಿದೆ.

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ರಾಷ್ಟ್ರೀಯ ಹೆದ್ದಾರಿ- 63ರ ಆರ್ತಿಬೈಲ್ ಕ್ರಾಸ್‌ನ ಸಮೀಪ ಬೆಳ್ಳಂಬೆಳಿಗ್ಗೆ ಕೆಮಿಕಲ್ ತುಂಬಿಕೊಂಡು ಸಂಚರಿಸುತ್ತಿದ್ದ ಲಾರಿಯೊಂದು ಬೆಳಗ್ಗೆ 7.30 ರ ವೇಳೆಗೆ ಪಲ್ಟಿಯಾಗಿ ಸ್ಥಳೀಯರಲ್ಲಿ ಆತಂಕ ಮೂಡಿಸಿತು. ಮಂಗಳೂರಿನ ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ಓಎನ್‌ಜಿಸಿ) ಪೆಟ್ರೋಕೆಮಿಕಲ್ಸ್ ವಿಭಾಗದಿಂದ ಬೆಂಜಿನ್ ಪೆಟ್ರೋಕೆಮಿಕಲ್ ಅನ್ನು ತುಂಬಿಕೊಂಡು ಗುಜರಾತ್ ರಾಜ್ಯದ ಅಹಮದಾಬಾದ್‌ಗೆ ಟ್ಯಾಂಕರ್ ತೆರಳುತ್ತಿತ್ತು.

ಬೆಂಕಿಯ ಪ್ರಮಾಣವು ತುಂಬಾ ದೊಡ್ಡದಾಗಿದ್ದು ಅದು ಘಾಟ್‌ಗಳಿಗೆ ಹೊಂದಿಕೊಂಡಿರುವ ಕಾಡಿಗೆ ಹರಡಿದ್ದು ಬೆಂಕಿಯಿಂದಾಗಿ ಕನಿಷ್ಠ 2 ಕಿಮೀ ಹಸಿರು ಬನಕ್ಕೆ ಹಾನಿಯಾಗಿದೆ. ಬೆಂಕಿಯ ಕಾರಣ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.

ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದರು.

Comments are closed.