ಕರ್ನಾಟಕ

ಸ್ಯಾಂಡಲ್‍ವುಡ್‍ನ ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ಕೊಟ್ಟ ನಟಿಯರಿಂದ ಬಿರಿಯಾನಿ ಊಟ..!

Pinterest LinkedIn Tumblr

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹಿರಿಯ ಕಲಾವಿದೆ ಲೀಲಾವತಿ ಅವರ ಮನೆಗೆ ಸ್ಯಾಂಡಲ್‍ವುಡ್ ಸ್ಟಾರ್ ನಟಿಯರು ಭೇಟಿ ಕೊಟ್ಟಿದ್ದಾರೆ.

‘ಮತ್ತೊಂದು ಅವಿಸ್ಮರಣೆಯ ದಿನ’ ಎಂದು ಬರೆದುಕೊಂಡು ಹಿರಿಯ ನಟಿ ಜೊತೆಗೆ ಕೆಲವು ಸಮಯ ಕಳೆದಿರುವ ಸುಂದರ ಕ್ಷಣಗಳನ್ನು ನಟಿ ಶ್ರುತಿ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ನಟಿ ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಅವರು ಲೀಲಾವತಿಯವರ ಮನೆಗೆ ಭೇಟಿಕೊಟ್ಟಿದ್ದರು. ಇದೀಗ ಮತ್ತೊಮ್ಮೆ ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣು ವರ್ಧನ್, ಹೇಮಾ ಚೌಧರಿ, ಶ್ರುತಿ ಮೂವರು ಸೇರಿ ಹೋಗಿದ್ದಾರೆ.

ಹೇಮಾ ಚೌಧರಿ, ಲೀಲಾವತಿ ಅವರಿಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದು ಶ್ರುತಿ, ಲೀಲಾವತಿ ಅವರ ಮನೆಯಲ್ಲಿ ಬಿರಿಯಾನಿ ಮಾಡಿ, ಊಟವನ್ನು ಬಡಿಸಿದ್ದಾರೆ. ನಂತರ ಲೀಲಾವತಿ ಅವರು ಒಂದು ಹಾಡನ್ನು ಹಾಡಿದ್ದಾರೆ. ಕೊನೆಯಲ್ಲಿ ಎಲ್ಲರೂ ಒಟ್ಟಿಗೆ ಕುಳಿತು ಫೋಟೋವನ್ನು ಕ್ಲಿಕ್ಕಿಸಿಕೊಂಡಿದ್ದಾರೆ.

Comments are closed.