ಮನೋರಂಜನೆ

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ದಿಗ್ಗಜ ದಿಲೀಪ್ ಕುಮಾರ್ ನಿಧನ

Pinterest LinkedIn Tumblr

ಮುಂಬೈ: ಹಿಂದಿ ಸಿನಿಮಾದ ದಿಗ್ಗಜ, ಟ್ರ್ಯಾಜಿಡಿ ಕಿಂಗ್ ದಿಲೀಪ್ ಕುಮಾರ್ (98) ಇಂದು ಬೆಳಗ್ಗೆ 7.30ಕ್ಕೆ ನಿಧನರಾಗಿದ್ದಾರೆ. ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ಕೊನೆಯುಸಿರೆಳೆದಿದ್ದಾರೆ.

ಕಳೆದ ಎರಡು ತಿಂಗಳಿನಿಂದ ದಿಲೀಪ್ ಕುಮಾರ್ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತಿತ್ತು. ಒಂದೇ ತಿಂಗಳಿನಲ್ಲಿ ಎರಡು ಬಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 5ರಂದು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ದಿಲೀಪ್ ಕುಮಾರ್ ಅವರ ಟ್ವಿಟರ್ ಮೂಲಕವೇ ಕುಟುಂಬಸ್ಥರು ಮಾಹಿತಿ ನೀಡಿದ್ದರು. ಪತಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ದಿಲೀಪ್ ಕುಮಾರ್ ಪತ್ನಿ ಸೈರಾ ಭಾನು ಖಾನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದರು.

ಡಿಸೆಂಬರ್ 11, 1922ರಲ್ಲಿ ಪೇಶಾವರದಲ್ಲಿ ಜನಿಸಿದ್ದರು. ದಿಲೀಪ್ ಕುಮಾರ್ ಅವರ ಮೂಲ ಹೆಸರು ಮೊಹಮ್ಮದ್ ಯೂಸೂಪ್ ಖಾನ್. ರಾಜ್ ಕಪೂರ್ ಅವರ ಸಮಕಾಲೀನರವರಾಗಿದ್ದರು. ಬಣ್ಣದ ಲೋಕಕ್ಕೆ ದಿಲೀಪ್ ಕುಮಾರ್ ಹೆಸರಿನಿಂದ ಎಂಟ್ರಿ ಪಡೆದುಕೊಂಡಿದ್ದರು. 22ನೇ ವಯಸ್ಸಿನಲ್ಲಿ ಬಣ್ಣ ಹೆಚ್ಚಿದ ದಿಲೀಪ್ ಕುಮಾರ್ ಅವರ ಮೊದಲ ಚಿತ್ರ ‘ಜ್ವಾರಾ ಭಾಟ’ 1944ರಲ್ಲಿ ತೆರಕಂಡಿತ್ತು.

ಐದು ದಶಕದಲ್ಲಿ ಸುಮಾರು 60ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳ ಸಂಖ್ಯೆ ಹೆಚ್ಚಾಗೋದು ಮುಖ್ಯ ಅಲ್ಲ. ಚಿತ್ರದ ಕಥೆ ಚೆನ್ನಾಗಿರಬೇಕೆಂದು ಹಲವು ಆಫರ್ ಗಳನ್ನು ದಿಲೀಪ್ ಕುಮಾರ್ ರಿಜೆಕ್ಟ್ ಮಾಡುತ್ತಿದ್ದರು.

Comments are closed.