ಕರಾವಳಿ

ಕುಂದಾಪುರದ ಗುಲ್ವಾಡಿಯಲ್ಲಿ ಇತ್ತೀಚೆಗೆ ರಕ್ಷಿಸಲ್ಪಟ್ಟ 23 ಜಾನುವಾರುಗಳನ್ನು ಕಳೆದುಕೊಂಡವರಿಗೆ ಮಹತ್ವದ ಸೂಚನೆ

Pinterest LinkedIn Tumblr

ಉಡುಪಿ: ತಾಲೂಕಿನ ಕಂಡ್ಲೂರಿನಲ್ಲಿರುವ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂದಿಗಳು ಜೂನ್ 27 ರಂದು ಕುಂದಾಪುರ ತಾಲೂಕು ಗುಲ್ವಾಡಿ ಗ್ರಾಮದ ಗುಲ್ವಾಡಿ ಕಾಂಡ್ಲಗದ್ದೆ ಎಂಬಲ್ಲಿ ದಾಳಿ ನಡೆಸಿ ಹಿಂಸಾತ್ಮಕವಾಗಿ ಕಟ್ಟಿಹಾಕಿದ್ದ 23 ಜಾನುವಾರುಗಳನ್ನು ವಶಪಡಿಸಿಕೊಂಡಿದ್ದು ಈ ಜಾನುವಾರುಗಳ ವಾರಸುದಾರರು ಇದ್ದರೆ ಪೊಲೀಸರನ್ನು ಸಂಪರ್ಕಿಸಲು‌ ಕೋರಲಾಗಿದೆ.

ಖಚಿತ ವರ್ತಮಾನದಂತೆ ಪೊಲೀಸರು ದಾಳಿ ನಡೆಸಿದ್ದು 23 ಜಾನುವಾರುಗಳನ್ನು ಮಹಜರು ಪ್ರಕ್ರಿಯೆ ಮೂಲಕ ಸ್ವಾಧೀನಕ್ಕೆ ಪಡೆದುಕೊಂಡು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಕುಂದಾಪುರ ತಾಲೂಕು ಅಸೋಡು ಗ್ರಾಮದ ಕಾಮಧೇನು ಗೋಸಂರಕ್ಷಣಾ ಕೇಂದ್ರಕ್ಕೆ ರವಾನಿಸಲಾಗಿತ್ತು. ಮಾತ್ರವಲ್ಲದೆ ಆರೋಪಿತರ ವಿರುದ್ಧ ಠಾಣೆಯಲ್ಲಿ ಕಲಂ 379 ಐಪಿಸಿ ಮತ್ತು ಕಲಂ 11(1)(ಡಿ) ಪ್ರಾಣಿಹಿಂಸೆ ನಿಷೇಧ ಕಾಯ್ದೆ 1960 ರಂತೆ ಪ್ರಕರಣ ದಾಖಲಿಸಲಾಗಿತ್ತು.

ಈ 23 ಜಾನುವಾರುಗಳನ್ನು ಕಳೆದುಕೊಂಡವರು ಕಂಡ್ಲೂರಿನ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Comments are closed.