ಕರಾವಳಿ

ಮಂಗಳೂರು : ಕಾಲೇಜು ವಿದ್ಯಾರ್ಥಿಗಳ ಲಸಿಕಾ ಶಿಬಿರಕ್ಕೆ ಇಂದು ಚಾಲನೆ

Pinterest LinkedIn Tumblr

ಮಂಗಳೂರು ಜೂನ್ 29 : ಜಿಲ್ಲೆಯ ಕೋವಿಡ್-19 ಕಾಲೇಜು ವಿದ್ಯಾರ್ಥಿಗಳ ಲಸಿಕಾ ಶಿಬಿರಕ್ಕೆ ಸಂಬಂಧಿಸಿದಂತೆ ಜೂನ್ 29ರಂದು ಕಾಲೇಜಿನಲ್ಲಿ ನೋಂದಾಯಿಸಿರುವ ಪದವಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಬೆಂಬಲ ಸಿಬ್ಬಂದಿಗಳಿಗೆ ಕೋವಿಡ್ ಲಸಿಕಾ ಶಿಬಿರವು ವಿವಿಧ ಸಂಸ್ಥೆಗಳಲ್ಲಿ ನಡೆಯಲಿರುವುದು.

ಲಸಿಕಾ ಫಲಾನುಭವಿಗಳು ಕಾಲೇಜು ಗುರುತಿನ ಚೀಟಿ ಹಾಗೂ ಆಧಾರ್ ಕಾರ್ಡ್‍ನೊಂದಿಗೆ ಹಾಜರಾಗಬೇಕು.

ಮಂಗಳೂರು ತಾಲೂಕು: ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಅಡ್ಯಾರ್, ಮಂಗಳೂರು ವಿಶ್ವವಿದ್ಯಾನಿಲಯಲೆಕ್ಚರ್ ಕಾಂಪ್ಲೆಕ್ಸ್. ಮಂಗಳ ಗಂಗೋತ್ರಿ, ಕೊಣಾಜೆ, ಸೈಂಟ್ ಆ್ಯಗ್ನೇಸ್ ಕಾಲೇಜು, ಬೆಂದೂರ್‍ವೆಲ್ ಮಂಗಳೂರು, ಸೈಂಟ್ ಅಲೋಷಿಯಸ್ ಕಾಲೇಜು ಮಂಗಳೂರು. ಎಸ್‍ಡಿಪಿಟಿ ಪ್ರಥಮ ದರ್ಜೆ ಕಾಲೇಜು ಕಟೀಲು, ಶ್ರೀ ಧವಳ ಕಾಲೇಜು.

ಮೂಡಬಿದ್ರೆ.ಬಂಟ್ವಾಳ ತಾಲೂಕು: ಪಿ.ಎ ಕಾಲೇಜು ಮುಡಿಪು, ಪಾಲಿಟೆಕ್ನಿಕ್ ಕಾಲೇಜು ಬಂಟ್ವಾಳ. ಪುತ್ತೂರು ತಾಲೂಕು: ಸೈಂಟ್ ಫಿಲೋಮಿನ ಕಾಲೇಜು ಪುತ್ತೂರು, ಪ್ರಗತಿ ಪ್ಯಾರಾ ಮೆಡಿಕಲ್ ಕಾಲೇಜು ಪುತ್ತೂರು. ಸುಳ್ಯ ತಾಲೂಕು: ಶಾರದಾ ಮಹಿಳಾ ಕಾಲೇಜು.

ಸುಳ್ಯ. ಬೆಳ್ತಂಗಡಿ ತಾಲೂಕು: ಶ್ರೀಗುರುದೇವ ಪ್ರಥಮ ದರ್ಜೆ ಕಾಲೇಜು, ಕಲ್ಪತರು ನರ್ಸಿಂಗ್ ಕಾಲೇಜು, ಸರ್ಕಾರಿ ಐ.ಟಿ.ಐ ಕಾಲೇಜು ಮಳಲಿ, ಮನ್ಸರ್ ಪ್ಯಾರಾಮೆಡಿಕಲ್ ಕಾಲೇಜು ಗೇರುಕಟ್ಟೆಯಲ್ಲಿ ಲಸಿಕಾ ಶಿಬಿರವು ನಡೆಯಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.