ರಾಷ್ಟ್ರೀಯ

‘ಏಕೈಕ ಪುತ್ರನಾಗಿರೋ ಅಡುಗೆ ಮಾಡುವ ವರ ಬೇಕಾಗಿದ್ದಾನೆ’; ಪತ್ರಿಕೆಯ ಜಾಹೀರಾತು ವೈರಲ್

Pinterest LinkedIn Tumblr

ಉತ್ತಮ ದೇಹ ಹೊಂದಿರುವ ಹಾಗೂ ಏಕೈಕ ಪುತ್ರನಾಗಿರೋ ಅಡುಗೆ ಮಾಡುವ ವರ ಬೇಕಾಗಿದ್ದಾನೆ ಎಂದು ವಧು ಜಾಹೀರಾತು ನೀಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸ್ತ್ರೀ ಸಮಾನತಾವಾದಿ, ಶಾರ್ಟ್ ಹೇರ್, ವಿದ್ಯಾವಂತೆ, ಕ್ಯಾಪಿಟಲಿಸಂ ವಿರೋಧಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ 30 ವರ್ಷದ ಮಹಿಳೆಗೆ ಸುಂದರವಾದ ಸದೃಢ ದೇಹ ಹೊಂದಿರುವ 25-28 ವರ್ಷದ ವರ ಬೇಕಾಗಿದ್ದಾನೆ. ವ್ಯಾಪರ, ಬಂಗಲೆ, ಕನಿಷ್ಠ 20 ಎಕರೆ ಫಾರ್ಮ್ ಹೌಸ್ ಇರೋ ಏಕೈಕ ಪುತ್ರನಾಗಿರೋ ಯುವಕನಾಗಿರಬೇಕು. ಆತನಿಗೆ ಅಡುಗೆ ಮಾಡುವುದು ಬರಬೇಕು. ಆಸಕ್ತಿ ಹೊಂದಿರುವವರು ಸಂಪರ್ಕಿಸಿ ಎಂದು ಪತ್ರಿಕೆಯೊಂದರಲ್ಲಿ ವಧು-ವರ ಬೇಕಾಗಿದ್ದಾರೆ ಎನ್ನುವ ಕಾಲಂನಲ್ಲಿ ಪ್ರಕಟವಾಗಿರುವ ಜಾಹೀರಾತಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ.

ಈ ಜಾಹೀರಾತು ಇದೀಗ ಸಖತ್ ವೈರಲ್ ಆಗುತ್ತಿದೆ. ಇದು ನಿಜವಾದ ಜಾಹೀರಾತಾ? ಹಾಸ್ಯ ಮಾಡಲು ಇಂತಹ ಪ್ರಕಟಣೆ ನೀಡಿದ್ದಾರಾ? ಎಂದೆಲ್ಲ ನೆಟ್ಟಗರು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಮಾಡುತ್ತಿದ್ದರು. ಆದರೆ ಆಗಿದ್ದೇನೆಂದ್ರೆ ಸಾಕ್ಷಿ ಎಂಬ ಯುವತಿ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಆಕೆಯ ಸಹೋದರ ಸ್ನೇಹಿತರೊಂದಿಗೆ ಸೇರಿ ಈ ವ್ಯಂಗ್ಯದ ಜಾಹೀರಾತು ನೀಡಿದ್ದಾರೆ. ಈ ಜಾಹೀರಾತು ನೀಡಲು 13 ಸಾವಿರ ರೂಪಾಯಿ ಖರ್ಚು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಪುರುಷರು ವಧುವನ್ನು ಹುಡುಕುವಾಗ ಹುಡುಗಿ ಎತ್ತರವಾಗಿರಬೇಕು, ತೆಳ್ಳಗ ಇರಬೇಕು, ಸುಂದರವಾಗಿರಬೇಕು ಎಂದು ಹಲವು ರೀತಿಯಲ್ಲಿ ಷರತ್ತು ಹಾಕುತ್ತಾರೆ. ತಮ್ಮ ಸಂಪತ್ತಿನ ಬಗ್ಗೆ ಹೆಮ್ಮೆ ಪಡುತ್ತಾರೆ. ಆದರೆ ಅನ್ನೇ ವಧುವಿನ ಕಡೆಯವರು ಮಾಡಿದಾಗ ಜೀರ್ಣಿಸಿಕೊಳ್ಳಲು ಆಗಲ್ಲ ಎಂದು ಸಾಕ್ಷಿ ಹೇಳಿದ್ದಾರೆ.

Comments are closed.