ಕರಾವಳಿ

ಕುಂದಾಪುರ ಬೊಬ್ಬರ್ಯನ ಕಟ್ಟೆಯ ಬಳಿ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳಿಗೆ ಮುಕ್ತಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ

Pinterest LinkedIn Tumblr

ಕುಂದಾಪುರ: ಹಲವಾರು ಸಮಯಗಳಿಂದ ಕುಂದಾಪುರ ಬೊಬ್ಬರ್ಯನ ಕಟ್ಟೆಯ ಬಳಿಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಪ್ರವೇಶ/ನಿರ್ಗಮನಕ್ಕೆ ಅವಕಾಶ ನೀಡಬೇಕು ಎಂಬುದು ಸ್ಥಳೀಯರ ಅಪೇಕ್ಷೆಯಾಗಿದ್ದು ಇಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿಯಿತ್ತರು.

ಈ ಕುರಿತು ಸಂಸದೆ ಶೋಭಾ ಕರಂದ್ಲಾಜೆಯವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳೊಂದಿಗೆ ಚರ್ಚಿಸಿ ಇಂದು ಸ್ಥಳ ಪರಿಶೀಲನೆಗೆ ಅಧಿಕಾರಿಗಳನ್ನ ಕಳುಹಿಸಿದ್ದು ಸ್ಥಳೀಯರ ಅನುಕೂಲ ಹಾಗೂ ಅಪೇಕ್ಷೆಯಂತೆ ಈ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ.

1. ಡಿ.ವೈ.ಎಸ್.ಪಿ ಕಚೇರಿಯ ಸಮೀಪದಲ್ಲಿ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರೋಡಿಗೆ ಪ್ರವೇಶ ನೀಡಲು ಅವಕಾಶ ಮಾಡಿಕೊಡುವುದು.

2. ಕುಂದಾಪುರ ಶಾಸ್ತ್ರಿ ಸರ್ಕಲ್ ಸರ್ವೀಸ್ ರೋಡಿನಿಂದ ಉಡುಪಿಗೆ ಸಾಗುವ ದಾರಿಯಲ್ಲಿ, ಸರ್ವೀಸ್ ರೋಡಿನಿಂದ ರಾಷ್ಟ್ರೀಯ ಹೆದ್ದಾರಿಗೆ (ಡಿ.ವೈ.ಎಸ್.ಪಿ ಕಚೇರಿಯ ವಿರುದ್ಧ ಭಾಗದಲ್ಲಿ) ಪ್ರವೇಶ ನೀಡಲು ಅವಕಾಶ ಮಾಡಿ ಕೊಡುವುದು.

3. ಬಸ್ರೂರು ಮೂರ್ಕೈ ಹತ್ತಿರದ ಅಂಡರ್ ಪಾಸ್ ಅನ್ನು ಕೂಡಲೆ 2 ಕಡೆ ಹಂಪ್ ಅಳವಡಿಸಿ ಒಪನ್ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅನುವು ಮಾಡಿಕೊಡುವುದು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸ್ಥಳೀಯರ ಮನವಿಗೆ ತಕ್ಷಣದಲ್ಲೇ ಸ್ಪಂದಿಸಿದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿಯ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಕುಂದಾಪುರ ಮಂಡಲ ಬಿಜೆಪಿ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿ ಸತೀಶ್  ಪೂಜಾರಿ ವಕ್ವಾಡಿ ,ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಸದಾನಂದ ಬಳ್ಕೂರು, ಯುವಮೋರ್ಚಾ ಕುಂದಾಪುರ ಅಧ್ಯಕ್ಷ ಅವಿನಾಶ್ ಉಳ್ತೂರು, ರೈತಮೋರ್ಚಾ ಕುಂದಾಪುರ ಅಧ್ಯಕ್ಷ ಸುನಿಲ್ ಶೆಟ್ಟಿ ಹೇರಿಕುದ್ರು, ಹಿಂದುಳಿದ ವರ್ಗಮೊರ್ಚಾ ಜಿಲ್ಲಾ ಉಪಾಧ್ಯಕ್ಷ ಸುಧೀರ್ ಕೆ ಎಸ್ , ಕುಂದಾಪುರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಜಯ್ ಎಸ್ ಪೂಜಾರಿ, ಪುರಸಭೆ ಅಧ್ಯೆಕ್ಷೆ ವೀಣಾ ಭಾಸ್ಕರ್,ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ,ಪುರಸಭಾ ಸದಸ್ಯ ಗಿರೀಶ್ ದೇವಾಡಿಗ,ರೋಹಿಣಿ ಉದಯ್ ಕುಮಾರ್ ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.

Comments are closed.