ಕರಾವಳಿ

ಸೋಂಕು ಹರಡುವುದನ್ನು ತಡೆಯಲು ಮಂಗಳೂರು ಪಾಲಿಕೆಯಿಂದ ವಿಶೇಷ ಕ್ರಮ : ಹತ್ತು ಮಾರ್ಗಸೂಚಿ ಪ್ರಕಟ

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕು ಹರಡುವುದನ್ನು ಮತ್ತು ಪರಿಸ್ಥಿತಿಯನ್ನು ನಿಭಾಯಿಸುವ ಉದ್ದೇಶದಿಂದ ಪಾಲಿಕೆಯು ಕಾಲಕಾಲಕ್ಕೆ ಅವಶ್ಯ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಈ ಕೆಳಗಿನ ಹತ್ತು ಮಾರ್ಗಸೂಚಿಗಳನ್ನು ಪ್ರಕಟಿಸಲಾಗಿದೆ.

1. ಸ್ಥಳೀಯ ಮನಪಾ ಸದಸ್ಯರ ಸಹಕಾರದೊಂದಿಗೆ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಉದ್ದೇಶದಿಂದ ವಾರ್ಡ್ ಮಟ್ಟದ ಟಾಸ್ಕ್‍ಪೋರ್ಸ್ ಸಮಿತಿಯನ್ನು ರಚಿಸಿದ್ದು, ಪ್ರತಿಯೊಂದು ವಾರ್ಡಿಗೆ ಪಾಲಿಕೆ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.

2. ಸದ್ರಿ ವಾರ್ಡ್ ಮಟ್ಟದ ಸಮಿತಿಯ ಕಾರ್ಯವೈಖರಿಯನ್ನು ನಿಗಾವಹಿಸಲು ನಗರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅನುಗುಣವಾಗಿ UPHC ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

3. ಕೋವಿಡ್ ಖಚಿತ ಪ್ರಕರಣಗಳು ಹೊಂದಿರುವ ಮನೆಗಳನ್ನು ಕಂಟೈನ್‍ಮೆಂಟ್ ಜೋನ್ ಎಂದು ಪರಿಗಣಿಸಿ “ ಈ ಮನೆ ನಿಗಾವಣೆಯಲ್ಲಿದೆ” ಎಂಬ ಸ್ಟಿಕ್ಕರನ್ನು ಹಚ್ಚುವುದು. ಹಾಗೂ ಗೃಹ ಬಂಧನದಲ್ಲಿರುವವರ ಮೇಲೆ ನಿಗಾವಹಿಸಿ ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸಲಾಗುತ್ತಿದೆ.

4. ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಪರೀಕ್ಷೆ ಹಾಗೂ ಲಸಿಕೆ ಉದ್ದೇಶದಿಂದ ಜನಸಾಂದ್ರತೆ ಉಂಟಾಗುತ್ತಿರುವುದರಿಂದ ಸಾರ್ವಜನಿಕರಿಗೆ ಅನುಕೂಲೂಕವಾಗಲು UPHC ಗಳಿಗೆ ಅವಶ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಾಗೂ ಸ್ಥಳಾವಕಾಶ ಕೊರತೆಯಿರುವ ಆರೋಗ್ಯ ಕೇಂದ್ರಗಗ¼ಲ್ಲಿÀ ಲಸಿಕೆ ಕಾರ್ಯಕ್ರಮವನ್ನು ಸಮೀಪದ ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ.

5. ಪ್ರಸ್ತುತ ಇರುವ ವಿದ್ಯಮಾನಗಳನ್ನು ಗಣನೆಗೆ ತೆಗೆದುಕೊಂಡು ಪಾಲಿಕೆ ವ್ಯಾಪ್ತಿಯ ಆರೋಗ್ಯ ಕೇಂದ್ರಗಳಿಗೆ ಅನುಗುಣವಾಗಿ ಹೆಚ್ಚುವರಿಯಾಗಿ ತಾತ್ಕಾಲಿಕವಾಗಿ ಪ್ರಯೋಗಾಲಯ ತಂತ್ರಜ್ಞರನ್ನು ಪಾಲಿಕೆ ವತಿಯಿಂದ ನೇಮಿಸಿಕೊಂಡು ಸಂಚಾರಿ ಗಂಟಲು ದ್ರವ ಮಾದರಿ ಸಂಗ್ರಹ ತಂಡವನ್ನು (Mobile Swab Collection team) ರಚಿಸಿಲಾಗಿದೆ.

6. ಸಂಬಂಧಪಟ್ಟ UPHC ನೋಡಲ್ ಅಧಿಕಾರಿಗಳು ಹಾಗೂ ವಾರ್ಡ್ ನೋಡಲ್ ಅಧಿಕಾರಿಗಳು ಪ್ರತಿ ದಿನ ಪೂರ್ವಾಹ್ನ 9.30 ರ ಸಮಯದಲ್ಲಿ ಆರೋಗ್ಯ ಕೇಂದ್ರಕ್ಕೆ ಬೇಟಿ ನೀಡಿ ಆ ದಿನದ ಕೋವಿಡ್ ಪಾಸಿಟಿವ್ ಪ್ರಕರಣದ ಪಟ್ಟಿಯಲ್ಲಿ ತಮ್ಮ ವಾರ್ಡಿಗೆ ಸಂಬಂಧಿಸಿದ ಸೋಂಕಿತರ ಪಟ್ಟಿಯನ್ನು ಪ್ರತ್ಯೇಕಿಸುವುದು ಹಾಗೂ ಸೋಂಕಿತರ ಸಂಪರ್ಕದಲ್ಲಿರುವ ಪ್ರಾಥಮಿಕ ಸಂಪರ್ಕ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆಹಚ್ಚಿ ಕೋವಿಡ್ ಪರೀಕ್ಷೆಗೆ ಒಳಪಡಿಸುವುದು ಕೋವಿಡ್ ಖಚಿತ ಪ್ರಕರಣಗಳು ಹೊಂದಿರುವ ಮನೆಗಳನ್ನು ಹೋಮ್ ಐಸೋಲೇಷನ್‍ನಲ್ಲಿರುವ ಸೋಂಕಿತರ ಬಗ್ಗೆ ನಿಗಾವಹಿಸುವುದು.

7. ಸರ್ಕಾರದ ಆದೇಶದಂತೆ, ವಿಕೇಂದ್ರೀಕೃತ ಚಿಕಿತ್ಸಾ ಕೇಂದ್ರಗಳನ್ನು ರೂಪಿಸಲು ಒಂದು ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ಅದರಂತೆ ಮಾರ್ಗಸೂಚಿಯನುಸಾರ ಕೋವಿಡ್ -19 ಸೋಂಕಿತ ರೋಗಿಗಳ ಆರೋಗ್ಯವನ್ನು ಮೇಲ್ವಿಚಾರಣೆ ಮಾಡಿ ಸದ್ರಿ ಸೋಂಕಿತರಿಗೆ ಹೋಮ್ ಐಸೊಲೇಷನ್ ಲ್ಲಿರಲು (Home Isolation) ಅಥವಾ ಕೋವಿಡ್ ಕೇರ್ ಸೆಂಟರ್ಗಳಿಗೆ (CCC) ಅಥವಾ ಆಸ್ಪತ್ರೆಗಳಿಗೆ ದಾಖಲಾಗುವಂತೆ ಅವರಿಗೆ ಸೂಕ್ತವಾಗಿ ಸಲಹೆ ನೀಡುವ ಸಲುವಾಗಿ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಾಲಿಕೆಯಲ್ಲಿ (Decentralized Triage Centre – DTC) ಸ್ಥಾಪಿಸಲಾಗಿರುತ್ತದೆ.

ಅದರಂತೆ ನಗರ ಆರೋಗ್ಯ ಕೇಂದ್ರಗಳನ್ನು ಮುಂದಿನ ಆದೇಶದವರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ವಿಕೇಂದ್ರೀಕೃತ ಚಿಕಿತ್ಸಾ ಕೇಂದ್ರ (DTC) ವನ್ನಾಗಿ ಘೋಷಿಸಿ ಆದೇಶಿಸಲಾಗಿದೆ. ಈ ಡಿಟಿಸಿಯನ್ನು ಆರೋಗ್ಯ ಇಲಾಖೆಯ ವೈದ್ಯಕೀಯ ಅಧಿಕಾರಿಗಳ ಸೂಕ್ತ ಮಾರ್ಗದರ್ಶನದಲ್ಲಿ, ಸಂಬಂಧಿತ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ (ಜಿಲ್ಲಾಡಳಿತ / ಆರೋಗ್ಯ ಇಲಾಖೆ, ದಕ್ಷಿಣ ಕನ್ನಡ ರವರ ನಿರ್ದೇಶನದಂತೆ) ವೈದ್ಯಕೀಯ ಇಂಟನ್ರ್ಸ್/ ಪಿಜಿ ವಿದ್ಯಾರ್ಥಿಗಳಿಂದ ಹಾಗೂ ಈಗಾಲೇ ನೇಮಿಸಿರುವ ಪಾಲಿಕೆ ನೋಡಲ್ ಅಧಿಕಾರಿಗಳ ಸಹಕಾರದೊಂದಿಗೆ ನಿರ್ವಹಿಸಲಾಗುತ್ತಿದೆ.

8. ಹೋಮ್ ಐಸೋಲೇಷನ್‍ನಲ್ಲಿರುವ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ವೈದ್ಯಕೀಯ ಆರೈಕೆಗಾಗಿ ಪಾಲಿಕೆ ವತಿಯಿಂದಲೇ Home Isolation Medical Kit ಪೂರೈಸುವ ಬಗ್ಗೆ ಕ್ರಮ ಕೈಗೊಳ್ಳಲು ತಿಳಿಸಲಾಯಿತು.

9. ರಾಜ್ಯದಲ್ಲಿ ಕೋವಿಡ್ 19 ಹರಡುವಿಕೆಯನ್ನು ತಡೆಗಟ್ಟುವ ಉದ್ದೇಶದಿಂದ ದಿನಾಂಕ: 10-05-2021 ರಿಂದ 24-05-2021ರ ವರೆಗೆ ಅನ್ವಯಿಸುವಂತೆ ಕಟ್ಟುನಿಟ್ಟಿನ ಮಾರ್ಗಸೂಚಿಯನ್ನು ಜಾರಿಗೆ ತಂದಿದ್ದು, ಈ ಅವಧಿಯಲ್ಲಿ ಸರ್ಕಾರದ ಆದೇಶದಂತೆ ಪಾಲಿಕೆ ವ್ಯಾಪ್ತಿಯ ಕೂಲಿ ಕಾರ್ಮಿಕರು, ವಲಸಿಗರು, ದರ್ಬಲ ವರ್ಗದವರು ಹಾಗೂ ಸಂಕಷ್ಟಗೊಳಗಾದ ಸ್ಥಳೀಯರಿಗೆ ಅನುಕೂಲವಾಗುವಂತೆ ಪಾಲಿಕೆ ವ್ಯಾಪ್ತಿಯ 5 ಪ್ರದೇಶಗಳಲ್ಲಿ ಚಾಲ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಉಚಿತವಾಗಿ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಒದಗಿಸಲಾಗುತ್ತಿದ್ದು, ಪ್ರಸ್ತುತ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

10. ಕೋವಿಡ್ 19 ಸೋಂಕಿನಿಂದ ರಕ್ಷಿಸುವ ಹಾಗೂ ಹರಡುವಿಕೆಯನ್ನು ನಿಯಂತ್ರಿಸುವ ಸಲುವಾಗಿ ನಗರದಲ್ಲಿ ಕಂಡುಬರುತ್ತಿರುವ ರಾತ್ರಿ ವಸತಿ ನಿರ್ಗತಿಕರನ್ನು ಪಾಲಿಕೆಯ ಡೇ-ನಲ್ಮ್ ಯೋಜನೆಯಡಿ ಬಂದರ್ (ಪುರುಷರು) ಮತ್ತು ಉರ್ವಾ (ಮಹಿಳೆಯರು) ಪ್ರದೇಶದಲ್ಲಿ ಆರಂಭಿಸಿರುವ ರಾತ್ರಿ ವಸತಿ ರಹಿತ ಆಶ್ರಯ ಕೇಂದ್ರಗಳಿಗೆ ತಲುಪಿಸಿ ಆರೈಕೆ ಮಾಡಲಾಗುತ್ತಿದೆ.

Comments are closed.