
ಮಂಗಳೂರು : ಪ್ರತಿಯೊಬ್ಬರಿಗೂ ಕೂಡ ಲಸಿಕೆ ನೀಡುವ ಜವಾಬ್ದಾರಿ ಸರಕಾರದ, ಜಿಲ್ಲಾಡಳಿತದ ಮೇಲಿದೆ. ವದಂತಿಗಳಿಗೆ ಕಿವಿಗೊಡಬೇಡಿ ಹಂತ ಹಂತವಾಗಿ ಎಲ್ಲರಿಗೂ ಲಸಿಕೆ ನೀಡುತ್ತೇವೆ ಎಂದು ಶಾಸಕ ವೇದವ್ಯಾಸ್ ಕಾಮತ್ ಹೇಳಿದ್ದಾರೆ.
ಪ್ರಥಮ ಹಂತದ ಕೋವಿಶೀಲ್ಡ್ ಲಸಿಕೆ ಪಡೆದವರಿಗೆ 84 ದಿನಗಳ ನಂತರ ಎರಡನೇ ಹಂತದ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡುವ ಒಂದು ದಿನ ಮೊದಲು ಎಸ್.ಎಂ.ಎಸ್ ಅಥವ ಕರೆ ಮಾಡಿ ಮಾಹಿತಿ ನೀಡಲಾಗುತ್ತದೆ. ಯಾವುದೇ ಕಾರಣಕ್ಕೂ ಗಾಬರಿಪಡಬೇಕಿಲ್ಲ ಎಂದು ಶಾಸಕರು ಹೇಳಿದ್ದಾರೆ.
ಪ್ರಾರಂಭದ ದಿನಗಳಲ್ಲಿ ಲಸಿಕೆಯ ಕುರಿತು ಬಿಜೆಪಿಯ ವ್ಯಾಕ್ಸಿನ್ ಎಂದು ಉದ್ದೇಶಪೂರ್ವಕವಾಗಿ ಅಪಪ್ರಚಾರ ಮಾಡಿದ ಕಾಂಗ್ರೇಸ್ ಮುಖಂಡರು ಇಂದು ಲಸಿಕೆ ಸಿಗುತ್ತಿಲ್ಲ ಎಂದು ಅಪಪ್ರಚಾರ ಮಾಡುತಿದ್ದಾರೆ. ಬೇರೆ ಬೇರೆ ರೀತಿಯಲ್ಲಿ ಜನರಲ್ಲಿ ಭೀತಿ ಹುಟ್ಟಿಸಿ ಜನರು ಲಸಿಕೆ ಪಡೆಯಲು ಬಾರದಂತೆ ಮಾಡಿದ ಕಾಂಗ್ರೇಸ್ ಮುಖಂಡರು ಇಂದು ಲಸಿಕೆ ಪಡೆಯುತಿದ್ದಾರೆ ಎಂದಿದ್ದಾರೆ.
Comments are closed.