ಮಡಿಕೇರಿ: ವಿರಾಜಪೇಟೆ ಸಮೀಪದ ಕದನೂರು ಬಳಿ ಕೇರಳ ನೋಂದಣಿ ಸಂಖ್ಯೆಯ ಪಿಕಪ್ ವಾಹನ ಕೆಎಲ್-17 ಹೆಚ್ 3567ರಲ್ಲಿ ಕೇರಳ ರಾಜ್ಯದ ವ್ಯಕ್ತಿಯೋರ್ವ ಅಕ್ರಮವಾಗಿ ಬೀಟಿ ಮರದ ತುಂಡುಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ವರ್ತಮಾನದ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಕೇರಳದ ಮಲಪರಂಬು ನಿವಾಸಿ ಪಿ.ಪಿ. ಅನಾಸ್ (36) ಬಂಧಿತ ಆರೋಪಿಯಾಗಿದ್ದು ಈತನಿಂದ ಅಂದಾಜು 2 ಲಕ್ಷ ಮೌಲ್ಯದ 5 ಬೀಟಿ ಮರದ ತುಂಡುಗಳನ್ನು ಹಾಗು ವಾಹನವನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತನು ಕರಡ ಗ್ರಾಮದ ಪಿ. ಬೋಪಣ್ಣ ಎಂಬವರ ತೋಟದಿಂದ ಕೊಳಕೇರಿ ನಿವಾಸಿ ಆಪು ಎಂಬವನೊಂದಿಗೆ ಜೊತೆ ಸೇರಿ ಅಕ್ರಮವಾಗಿ ಬೀಟಿ ಮರಗಳನ್ನು ಕಟಾವು ಮಾಡಿ ಕೇರಳ ರಾಜ್ಯದ ಕೊಚ್ಚಿನ್ ಗೆ ಸಾಗಾಟ ಮಾಡುವುದಾಗಿ ವಿಚಾರಣೆಯಿಂದ ತಿಳಿದುಬಂದಿದ್ದು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.
ಕಾರ್ಯಾಚರಣೆಯು ವಿರಾಜಪೇಟೆ ಡಿವೈಎಸ್ಪಿ ಸಿ.ಟಿ. ಜಯಕುಮಾರ್ ಮತ್ತು ವಿರಾಜಪೇಟೆ ವೃತ್ತ ನಿರೀಕ್ಷಕರಾದ ಬಿ.ಎಸ್.ಶ್ರೀಧರ್ ರವರ ನೇತೃತ್ವದಲ್ಲಿ ನಡೆದಿದ್ದು ಕಾರ್ಯಾಚರಣೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಠಾಣಾ ಪ್ರಭಾರ ಪಿಎಸ್ಐ ಹೆಚ್.ಎಸ್. ಬೋಜಪ್ಪ, ಎಎಸ್ಐ ಸಿ.ವಿ. ಶ್ರೀಧರ್, ಸಿಬ್ಬಂದಿಗಳಾದ ತೀರ್ಥಕುಮಾರ್, ನೆಹರುಕುಮಾರ್, ಸುಕುಮಾರ್, ರಾಮಣ್ಣ, ಪ್ರದೀಪ್ ಮತ್ತು ಕಾರ್ತಿಕ್ ಮೊದಲಾದವರು ಭಾಗಿಯಾಗಿದ್ದರು.
Comments are closed.