
ಮಂಗಳೂರು : ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರ ಹೆಸರಿನಲ್ಲಿ ಫೇಸ್‌ಬುಕ್ ನಕಲಿ ಖಾತೆಯನ್ನು ತೆರೆಯಲಾಗಿದ್ದು, ಸಾರ್ವಜನಿಕರು ಎಚ್ಚರಿಂದಿಂದಿರಲು ಪೊಲೀಸ್ ಅಯುಕ್ತರು ಮನವಿ ಮಾಡಿದ್ದಾರೆ.
‘ನನ್ನ ಹೆಸರು ಮತ್ತು ನನ್ನ ವೈಯಕ್ತಿಕ ವಿವರ ಸಹಿತ ಫೇಸ್‌ಬುಕ್ ನಕಲಿ ಖಾತೆಯನ್ನು ಸೃಷ್ಟಿಸಿರುವುದು ಬೆಳಕಿಗೆ ಬಂದಿದೆ. ಈ ಖಾತೆಯ ಮೂಲಕ ಹಣಕಾಸಿನ ನೆರವು ನೀಡುವಂತೆ ಬೇಡಿಕೆ ಬರಬಹುದು. ಹಾಗಾಗಿ ಎಚ್ಚರಿಕೆಯಿಂದಿರಿ’ ಎಂದು ಆಯುಕ್ತರು ಫೇಸ್‌ಬುಕ್ ಸ್ನೇಹಿತರಲ್ಲಿ ಮನವಿ ಮಾಡಿದ್ದಾರೆ.

ಈ ಹಿಂದೆಯೂ ಸೈಬರ್ ಖದೀಮರು ಪೊಲೀಸ್ ಇಲಾಖೆ ಸಹಿತ ಕೆಲವು ಇಲಾಖೆಗಳ ಹಿರಿಯ ಅಧಿಕಾರಿಗಳ ಫೇಸ್‌ಬುಕ್ ನಕಲಿ ಖಾತೆಗಳನ್ನು ಸೃಷ್ಟಿಸಿ ಮೂಲ ಖಾತೆಯಲ್ಲಿದ್ದ ಫ್ರೆಂಡ್ಸ್ ಲಿಸ್ಟ್‌ನ್ನು ತೆಗೆದು ಅವರೆಲ್ಲರಿಗೂ ನಕಲಿ ಖಾತೆಯ ಮೂಲಕ ಸಂದೇಶ ಕಳುಹಿಸಿ ಹಣದ ಸಹಾಯ ಮಾಡುವಂತೆ ಮನವಿ ಮಾಡಿದ ಬಗ್ಗೆ ವರದಿಯಾಗಿತ್ತು ಎಂದು ನಗರ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಅವರು ಮಾಹಿತಿ ನೀಡಿದ್ದಾರೆ.
Comments are closed.