ಕರಾವಳಿ

ಬೈಂದೂರಿನಲ್ಲಿರುವುದು ಬ್ರಿಟೀಷ್ ಸರಕಾರವಲ್ಲ: ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಬಿ.ವೈ ರಾಘವೇಂದ್ರ ಗರಂ..!

Pinterest LinkedIn Tumblr

ಕುಂದಾಪುರ: ದಕ್ಷಿಣ ಭಾರತ ಪ್ರಸಿದ್ಧ ಪುಣ್ಯ ಕ್ಷೇತ್ರ ಕೊಲ್ಲೂರಿನಲ್ಲಿ ಈಗಿರುವ ಮುಖ್ಯ ರಸ್ತೆಗೆ ಪರ್ಯಾಯವಾಗಿ ಇಲ್ಲಿಗೆ ಬರುವ ಭಕ್ತರಿಗೆ ಅನುಕೂಲವಾಗುವಂತೆ ರಿಂಗ್ ರೋಡ್ ನಿರ್ಮಾಣಕ್ಕೆ ತೀರ್ಮಾನಿಸಲಾಗಿದೆ. ಇದರ ರಸ್ತೆ ನಿರ್ಮಾಣ ಕಾಮಗಾರಿ ಹೆದ್ದಾರಿ ಇಲಾಖೆ ಹಾಗೂ ಭೂಸ್ವಾಧೀನ ಕಾರ್‍ಯ ಲೋಕೋಪಯೋಗಿ ಇಲಾಖೆಯಿಂದ ಆಗಲಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರ ಹಾಗೂ ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಬೈಂದೂರು ಪಟ್ಟಣ ಪಂಚಾಯತಿಗೆ ಸ್ಥಳೀಯ ಯೋಜನಾ ಪ್ರಾಧಿಕಾರ ರಚನೆಗೆ ಗೆಜೆಟ್ ಸುತ್ತೋಲೆ ಹೊರಡಿಸಿ, ೬ ತಿಂಗಳು ಕಳೆದರೂ ಇನ್ನೂ ಪ್ರಾಧಿಕಾರ ಆರಂಭವಾಗದ ಕುರಿತಂತೆ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಂಸದ ಬಿವೈ ರಾಘವೇಂದ್ರ ಅವರು, ಬೈಂದೂರು ಸ್ಥಳೀಯಾಭಿವೃದ್ಧಿ ಯೋಜನಾ ಪ್ರಾಧಿಕಾರವನ್ನು ರಚಿಸುವಲ್ಲಿ ಆದಷ್ಟು ಶೀಘ್ರ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಯೋಜನಾ ಪ್ರಾಧಿಕಾರದವರು ಆದ್ಯತೆ ನೆಲೆಯಲ್ಲಿ ಗಮನಹರಿಸಬೇಕು. ಎಸಿ ಹಾಗೂ ಡಿಸಿಯವರು ಈ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು. ಬಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಿ‌ಆರ್‌ಝಡ್-೩ ವಲಯದಲ್ಲಿರುವ ಪ್ರದೇಶವನ್ನು ಸಿ‌ಆರ್‌ಝಡ್-೨ ವಲಯ ವ್ಯಾಪ್ತಿಗೆ ಸೇರ್ಪಡೆ ಮಾಡಲು ಈಗಾಗಲೇ ಚೆನ್ನೈಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಬೈಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಬಡ ಜನರಿಗೆ ಮನೆ ಕಟ್ಟಲು ಅನುಕೂಲವಾಗುವಂತೆ ಪಿ‌ಎಂಎವೈ ಸೌಲಭ್ಯ ಕಲ್ಪಿಸಲು ಹಾಗೂ ಅದಕ್ಕಿರುವ ತಾಂತ್ರಿಕ ತೊಂದರೆಯನ್ನು ನಿವಾರಿಸಲು ಸಂಸದರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕುತ್ತರಿಸಿದ ಅಧಿಕಾರಿಗಳು ಬಂದೂರು ಪಟ್ಟಣ ಪಂಚಾಯತ್ ರಚನೆಯಾಗಿದ್ದರೂ, ಕೇಂದ್ರ ನಗರಾಭಿವೃದ್ಧಿ ಸಚಿವಾಲಯದಲ್ಲಿ ಇನ್ನೂ ನೋಂದಣಿ ಆಗದ ಕಾರಣ, ಈ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ತಾಂತ್ರಿಕ ತೊಂದರೆಯಾಗಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಎಸಿಯವರಿಗೆ ಸಂಸದರು ತಿಳಿಸಿದರು.

ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಸ್ಮಶಾನಗಳಿಗೆ ೫.೫೬ ಸೆನ್ಸ್ ಜಾಗ ಗುರುತಿಸಲಾಗಿದ್ದು, ಅಲ್ಲಿ ಆದಷ್ಟು ಶೀಘ್ರ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಿ ಎಂದು ಸಂಸದರು ತಿಳಿಸಿದರು. ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಹಾಗೂ ಕಸ ವಿಲೇವಾರಿಗೆ ೮.೬ ಸೆನ್ಸ್ ಜಾಗ ಗುರುತಿಸಿದ್ದು, ಅನುದಾನಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಕೊಲ್ಲೂರು ರಿಂಗ್ ರೋಡ್ ರಚನೆ, ಬಂದೂರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಆಗಬೇಕಾದ ತುರ್ತು ಕೆಲಸಗಳ ಬಗ್ಗೆ ಗಮನವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯರಾದ ಬಾಬು ಶೆಟ್ಟಿ, ಶಂಕರ ಪೂಜಾರಿ, ರೋಹಿತ್ ಕುಮಾರ್ ಶೆಟ್ಟಿ, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ. ರಾಜು, ಕುಂದಾಪುರ ಡಿ‌ಎಫ್‌ಒ ಆಶಿಶ್ ರೆಡ್ಡಿ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭಾ, ಸಿ‌ಆರ್‌ಝಡ್ ನಿರ್ದೇಶಕ ದಿನೇಶ್, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು, ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿರುವುದು ಬ್ರಿಟೀಷ್ ಸರ್ಕಾರವಲ್ಲ:

ಕುಂದಾಪುರದಿಂದ ಬೈಂದೂರಿನ ತನಕ ಅವೈಜ್ಞಾನಿಕವಾಗಿ ನಡೆಯುತ್ತಿರುವ ಚತುಷ್ಪತ ಹೆದ್ದಾರಿ ಕಾಮಗಾರಿಯ ಕುರಿತು ಆಕ್ರೋಶ ವ್ಯಕ್ತಪಡಿಸಿದ ಸಂಸದ ಬಿ.ವೈ ರಾಘವೇಂದ್ರ ಅವರು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಮಾಧ್ಯಮಗಳಲ್ಲಿ ಬಂದ ವರದಿಗಳನ್ನು ಪಟ್ಟಿ ಮಾಡಿಕೊಂಡು ಬಂದಿರುವ ಸಂಸದರು ಒಂದೊಂದೆ ಸಮಸ್ಯೆಗಳನ್ನು ಅಧಿಕಾರಿಗಳ ಮುಂದೆ ತೆರೆದಿಟ್ಟು ಸ್ಥಳದಲ್ಲೇ ಅಲ್ಲಿನ ಸಮಸ್ಯೆಗಳನ್ನು ಸರಿಪಡಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ಹೆದ್ದಾರಿ ಕಾಮಗಾರಿಯಲ್ಲಿ ಅದಾಗಿಲ್ಲ, ಇದಾಗಿಲ್ಲ ಎನ್ನುವ ಉತ್ತರ ಬೇಡ. ಜನರ ಬೇಡಿಕೆ ಏನಿದೆ ಅದನ್ನು ಮಾಡಿಕೊಡಿ. ಇಲ್ಲಿರೋದು ಬ್ರಿಟೀಷ್ ಸರಕಾರ ಅಲ್ಲ, ಮೋದಿ ಸರಕಾರವಿರೋದು. ಆದ್ಯತೆ ನೆಲೆಯಲ್ಲಿ ಆದಷ್ಟು ಬೇಗ ಈ ಎಲ್ಲ ಕಾಮಗಾರಿಗಳನ್ನು ಮಾಡಿಕೊಡಿ. ಎಲ್ಲೆಲ್ಲ ಸಮಸ್ಯೆ ಇದೆ ಆ ಬಗ್ಗೆ ನನಗೆ ಪತ್ರ ಬರೆದು ಕಳುಹಿಸಿ, ಹೆದ್ದಾರಿ ಪ್ರಾಧಿಕಾರದ ಬೆಂಗಳೂರು ಹಾಗೂ ದಿಲ್ಲಿಯ ಅಧಿಕಾರಿಗಳೊಂದಿಗೆ ಮಾತನಾಡಿ ನಿವಾರಣೆಗೆ ಪ್ರಯತ್ನಿಸುತ್ತೇನೆ ಎಂದು ಸಂಸದ ರಾಘವೇಂದ್ರ ಹೇಳಿದರು.

Comments are closed.