ಬೆಂಗಳೂರು: ರಾಸಲೀಲೆ ಸಿಡಿ ಬಹಿರಂಗಗೊಂಡ ಬಳಿಕ ಈ ವಿಚಾರವಾಗಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ.

ಮೊದಲನೆಯದಾಗಿ ನನಗೆ ದಿನೇಶ್ ಕಲ್ಲಹಳ್ಳಿ ಯಾರು ಎಂಬುದು ಗೊತ್ತಿಲ್ಲ. ನಾನು 21 ವರ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ಇದರ ಬಗ್ಗೆ ಪರಿಪೂರ್ಣ ತನಿಖೆ ನಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಮ್ಮದು ದೊಡ್ಡ ರಾಜಕೀಯ ಕುಟುಂಬ. ಇದು ನಿಜಕ್ಕೂ ನನಗೆ ದೊಡ್ಡ ಶಾಕ್ ನೀಡಿದೆ. ಈ ವಿಡಿಯೋ ಸೃಷ್ಟಿ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆ ಹೆಣ್ಣು ಮಗಳು ಯಾರು ಎಂಬುದು ನನಗೆ ಗೊತ್ತಿಲ್ಲ. ಇದುವರೆಗೂ ಕೇಳಿಬರದ ಆರೋಪ ಈಗ ಹೇಗೆ ಕೇಳಿಬಂತು ಹೇಳಿ.
ಇದರ ಬಗ್ಗೆ ಮೊದಲು ಸಂಪೂರ್ಣ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರಲ್ಲ. ಸತ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ.
ನಾನು ತಪ್ಪು ಮಾಡಿಲ್ಲ, ರಾಜಿನಾಮೆ ನೀಡಲ್ಲ: ಸಚಿವ ರಮೇಶ್ ಜಾರಕಿಹೊಳೆ
ಬೆಂಗಳೂರು: ಸಿಡಿ ಬಹಿರಂಗಗೊಂಡ ಬಳಿಕ ಈ ವಿಚಾರವಾಗಿ ಖಾಸಗಿ ಸುದ್ದಿವಾಹಿನಿಯೊಂದಿಗೆ ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ.
ಮೊದಲನೆಯದಾಗಿ ನನಗೆ ದಿನೇಶ್ ಕಲ್ಲಹಳ್ಳಿ ಯಾರು ಎಂಬುದು ಗೊತ್ತಿಲ್ಲ. ನಾನು 21 ವರ್ಷದಿಂದ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ತುಂಬಾ ಸೂಕ್ಷ್ಮ ವ್ಯಕ್ತಿ. ಇದರ ಬಗ್ಗೆ ಪರಿಪೂರ್ಣ ತನಿಖೆ ನಡೆಯಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಮ್ಮದು ದೊಡ್ಡ ರಾಜಕೀಯ ಕುಟುಂಬ. ಇದು ನಿಜಕ್ಕೂ ನನಗೆ ದೊಡ್ಡ ಶಾಕ್ ನೀಡಿದೆ. ಈ ವಿಡಿಯೋ ಸೃಷ್ಟಿ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಆ ಹೆಣ್ಣು ಮಗಳು ಯಾರು ಎಂಬುದು ನನಗೆ ಗೊತ್ತಿಲ್ಲ. ಇದುವರೆಗೂ ಕೇಳಿಬರದ ಆರೋಪ ಈಗ ಹೇಗೆ ಕೇಳಿಬಂತು ಹೇಳಿ.
ಇದರ ಬಗ್ಗೆ ಮೊದಲು ಸಂಪೂರ್ಣ ತನಿಖೆಯಾಗಲಿ. ನಾನು ಯಾವುದಕ್ಕೂ ಹೆದರಲ್ಲ. ಸತ್ಯ ಗೆಲ್ಲುತ್ತೆ ಎಂದು ಹೇಳಿದ್ದಾರೆ.
Comments are closed.