ಅಂತರಾಷ್ಟ್ರೀಯ

ತಾಯಿಯ ಶವವನ್ನು 10 ವರ್ಷಗಳ ಕಾಲ ಫ್ರೀಜರ್ ನಲ್ಲಿಟ್ಟ ಮಗಳು ! ಕಾರಣವೇನು ಗೊತ್ತೇ…?

Pinterest LinkedIn Tumblr

ಟೋಕಿಯೋ: ಮಹಿಳೆಯೊಬ್ಬಳು 10 ವರ್ಷಗಳ ಕಾಲ ತಾಯಿಯ ಶವವನ್ನ ಫ್ರೀಜರ್ ನಲ್ಲಿಟ್ಟ ವಿಚಿತ್ರ ಪ್ರಕರಣವೊಂದು ಜಪಾನ್ ನಲ್ಲಿ ಬೆಳಕಿಗೆ ಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಶವವನ್ನು ವಶಕ್ಕೆ ಪಡೆದುಕೊಂಡು, ಮಗಳನ್ನ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

48 ವರ್ಷದ ಯುಮಿ ಯೊಶಿನೋ ಬಂಧಿತ ಮಹಿಳೆ. ಕಳೆದ 10 ವರ್ಷಗಳಿಂದ ಫ್ರೀಜರ್ ನಲ್ಲಿಟ್ಟಿಕೊಂಡಿದ್ದಳು. ತಾಯಿಗೆ 60 ವರ್ಷವಿದ್ದಾಗಲೇ ಆಕೆ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತಾಯಿ ಸಾವನ್ನಪ್ಪಿರುವ ವಿಷಯ ತಿಳಿದ್ರೆ ತನ್ನನ್ನು ಮನೆಯಿಂದ ಹೊರ ಹಾಕುತ್ತಾರೆ ಭಯದಿಂದ ಈ ರೀತಿ ಮಾಡಿದ್ದಾಳೆ ಎಂದು ವರದಿಯಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಯುಮಿ ವಾಸವಾಗಿರುವ ಮನೆಗೆ ಬಾಡಿಗೆ ಪಾವತಿಸಿರಲಿಲ್ಲ. ಅಧಿಕಾರಿಗಳು ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದಾಗ ಯುಮಿ ಹೊರ ಬಂದಿದ್ದಳು. ಮನೆಯ ಸ್ವಚ್ಛಗೊಳಿಸುವಾಗ ಕ್ಲೀನರ್ ಗೆ ಫ್ರೀಜರ್ ನಲ್ಲಿ ಶವ ಕಂಡಿದೆ.

ಮೃತ ಮಹಿಳೆಗೆ ಟೋಕಿಯೋ ಮಹಾನಗರ ಪಾಲಿಕೆಯ ವಸತಿ ಯೋಜನೆ ಅಡಿಯಲ್ಲಿ ಫ್ಲ್ಯಾಟ್ ನೀಡಲಾಗಿತ್ತು. ತಾಯಿಯ ಮನೆಯಲ್ಲಿಯೇ ಯುಮಿ ವಾಸವಾಗಿದ್ದಳು. ತಾಯಿ ಸಾವನ್ನಪ್ಪಿರುವ ವಿಷಯ ತಿಳಿದರೆ ತನ್ನನ್ನು ಹೊರಗೆ ಹಾಕುತ್ತಾರೆ ಎಂದು ಸಾವಿನ ಸುದ್ದಿಯನ್ನ ಯುಮಿ ಯಾರಿಗೂ ಹೇಳಿರಲಿಲ್ಲ. ಮಹಿಳೆಯ ಸಾವು ಹೇಗಾಗಿದೆ ಎಂಬುದರ ಬಗ್ಗೆ ನಿಖರ ಮಾಹಿತಿ ತಿಳಿದು ಬಂದಿಲ್ಲ. ಸದ್ಯ ಯುಮಿಯನ್ನ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.