ಗಲ್ಫ್

ಕಿಚ್ಚ ಸುದೀಪ್​ ಸಿನಿ ಜರ್ನಿಗೆ 25 ವರ್ಷದ ಸಂಭ್ರಮ; ಬುರ್ಜ್ ಖಲೀಫಾದ ಮೇಲೆ ಇಂದು ರಾರಾಜಿಸಲಿದೆ ವಿಕ್ರಾಂತ್​ ರೋಣ ಟೀಸರ್​..!

Pinterest LinkedIn Tumblr

ಸ್ಯಾಂಡಲ್‌ವುಡ್ ಸುಲ್ತಾನ ಕಿಚ್ಚ ಸುದೀಪ್ ದುಬೈನಲ್ಲಿ ಇಂದು ಬೆಳ್ಳಿಹಬ್ಬ ಆಚರಿಸಿಕೊಳ್ಳಲಿದ್ದಾರೆ. ಸುದೀಪ್ ಸಿನಿಮಾ ಜೀವನಕ್ಕೆ 25 ವರ್ಷದ ಸಂಭ್ರಮ. ಇಂದು ದುಬೈನ ಬುರ್ಜ್ ಖಲೀಫಾದ‌ಲ್ಲಿ ಕಿಚ್ಚನ ಬೆಳ್ಳಿ ಹಬ್ಬ ಆಚರಣೆ ನಡೆಯುತ್ತಿದೆ. ಜೊತೆಗೆ ಕಿಚ್ಚ ಅಭಿನಯದ ‘ವಿಕ್ರಾಂತ್ ರೋಣ’ ಚಿತ್ರದ ಕಟೌಟ್ ಬುರ್ಜ್ ಖಲೀಫಾದ ಮೇಲೆ ರಾರಾಜಿಸಲಿದೆ.

ಜಗತ್ತಿನ ಎತ್ತರದ ಬುರ್ಜ್ ಖಲೀಫಾದ ಮೇಲೆ ಅಭಿನಯ ಚಕ್ರವರ್ತಿಯ 2000 ಅಡಿ ಕಟೌಟ್ ಕಾಣಿಸಲಿದೆ. ವಿಕ್ರಾಂತ್ ರೋಣ ಚಿತ್ರದ ಟೀಸರ್ ಕೂಡ ಬುರ್ಜ್ ಖಲೀಫಾದ ಮೇಲೆ ರಿಲೀಸ್ ಆಗಲಿದೆ.

ವಿಕ್ರಾಂತ್ ರೋಣ ಸಿನೆಮಾದ 180 ಸೆಕುಂಡುಗಳ ಟೀಸರ್ ಬಿಡುಗಡೆಯಾಗಲಿದೆ. ಇಂದು ರಾತ್ರಿ ವಿಕ್ರಾಂತ್ ರೋಣ ಟೈಟಲ್ ಲೋಗೋ ಕೂಡ ಲಾಂಚ್ ಆಗಲಿದೆ. ರಾತ್ರಿ 9 ಗಂಟೆಗೆ ಕಿಚ್ಚ ಕ್ರಿಯೇಷನ್ಸ್ ಯೌಟ್ಯೂಬ್ ಚಾನಲ್ ಮೂಲಕ ಕಾರ್ಯಕ್ರಮ ಲೈವ್ ಪ್ರಸಾರ ಆಗಲಿದೆ.

Comments are closed.