
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಕೊಡಿಯಾಲ್`ಬೈಲ್ ವಾರ್ಡಿನ ವಿವೇಕನಗರದಲ್ಲಿರುವ ಸತ್ಯ ಸಾರಮಾಣಿ ದೈವಸ್ಥಾನದ ಬಳಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ವಿವೇಕನಗರ ಸತ್ಯಸಾರಮಾಣಿ ದೇವಸ್ಥಾನದ ಬಳಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಕುರಿತು ಸಾರ್ವಜನಿಕರು ಹಾಗೂ ಸ್ಥಳೀಯ ಮನಪಾ ಸದಸ್ಯರ ಬೇಡಿಕೆಯ ಪ್ರಕಾರ ಅನುದಾನ ಬಿಡುಗಡೆಗೊಳಿಸಲಾಗಿದ್ದು ಸಾರ್ವಜನಿಕರ ಸಮ್ಮುಖದಲ್ಲಿ ಚಾಲನೆ ನೀಡಿದ್ದೇವೆ ಎಂದರು.
ಕೊಡಿಯಾಲಬೈಲ್ ವಾರ್ಡಿನ ಅಭಿವೃದ್ಧಿಯ ಕುರಿತು ವಿವಿಧ ಯೋಜನೆಗಳನ್ನು ರೂಪಿಸಲಾಗಿದೆ. ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಅವರು ಈಗಾಗಲೇ ಅನೇಕ ಕಾಮಗಾರಿಗಳಿಗೆ ಅನುದಾನ ತರುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡುತ್ತಿದ್ದಾರೆ. ಪಾಲಿಕೆ ಹಾಗೂ ಸರಕಾರದ ವಿವಿಧ ಅನುದಾನಗಳನ್ನು ಹೊಂದಿಸಿ ಕೊಡಿಯಾಲಬೈಲ್ ವಾರ್ಡನ್ನು ಸಂಪೂರ್ಣ ಅಭಿವೃದ್ಧಿಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಪ್ರಶಾಂತ್ ಆಳ್ವ, ವಿವೇಕ್ ದೇವಾಡಿಗ, ಯಶವಂತ್ ಕುದ್ರೋಳಿ, ಕಿರಣ್ ರೈ, ಜಯರಾಜ್ ಶೆಟ್ಟಿ, ಮೇಘರಾಜ್ ಬಲ್ಲಾಳ್ ಭಾಗ್, ಶಶಾಂಕ್ ಬಲ್ಲಾಳ್ ಭಾಗ್, ಚಿಂತನ್ ಡಿ.ವಿ, ಸುಶೀಲ,ಚಂದ್ರಶೇಖರ ಶೆಟ್ಟಿ, ಶಶಿಧರ್ ಜೆ, ವಸಂತ್ ಜೆ ಪೂಜಾರಿ, ಸುರೇಶ್ ಬಲಿಪತೋಟ, ಗಂಗಾಧರ್ ಬಲ್ಲಾಳ್ ಭಾಗ್, ಸದಾಶಿವ ಬಿಜೈ, ಸತ್ಯಸಾರಮಾಣಿ ದೈವಸ್ಥಾನದ ಅದ್ಯಕ್ಷರಾದ ಅಜಿತ್ ಕುಮಾರ್, ಗುರಿಕಾರರಾದ ಸಿದ್ದಪ್ಪ, ಕಾರ್ಯದರ್ಶಿ ಶಿವಶಂಕರ್ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Comments are closed.