ಕರಾವಳಿ

ತಂಬಾಕು ಉತ್ಪನ್ನಗಳ ಪ್ಯಾಕ್‍ಗಳಲ್ಲಿ – ಆರೋಗ್ಯ ಚಿತ್ರಾತ್ಮ ಎಚ್ಚರಿಕೆಯ ಸಂದೇಶ ಕಡ್ಡಾಯ

Pinterest LinkedIn Tumblr

ಮಂಗಳೂರು : ತಂಬಾಕು ಉತ್ಪನ್ನಗಳ ತಯಾರಕರು, ವಿತರಕರು, ಮಾರಾಟಗಾರರು ಹಾಗೂ ಆಮದುದಾರರು 2020ನೇ ಡಿಸೆಂಬರ್ 1 ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಪ್ಯಾಕ್‍ಗಳಲ್ಲಿ ಕೋಟ್ಪಾ-2003 ಹೊಸ ನಿರ್ದಿಷ್ಠ ಆರೋಗ್ಯ ಚಿತ್ರಾತ್ಮ ಎಚ್ಚರಿಕೆಯ ಸಂದೇಶವನ್ನು ಹೊಂದಿರಬೇಕು.

“ತಂಬಾಕು ನೋವಿನ ಸಾವಿಗೆ ಕಾರಣವಾಗುತ್ತದೆ” ಎಂಬ ವಾಕ್ಯದ ಅಕ್ಷರಗಳು ಬಿಳಿಬಣ್ಣ ಮತ್ತು ಕಪ್ಪು ಬಣ್ಣದ ಹಿನ್ನೆಲೆ ಹೊಂದಿರಬೇಕು ಹಾಗೂ ಇಂದೇ ತ್ಯಜಿಸಲು ಕರೆ ಮಾಡಿ 1800-11-2356 ಎಂಬುದನ್ನು ಕಾಣಿಸುವಂತೆ ಮುದ್ರಿಸಿರಬೇಕು. ಸದರಿ ನಿಯಮವು ಮುಂದಿನ 12 ತಿಂಗಳವರೆಗೆ ಮಾನ್ಯವಾಗಿರುತ್ತದೆ.

ಆರೋಗ್ಯ ಚಿತ್ರಾತ್ಮಕ ಎಚ್ಚರಿಕೆ ಮತ್ತು ಬರಹ ಆರೋಗ್ಯ ಎಚ್ಚರಿಕೆಯುಳ್ಳ ಮುದ್ರಣವನ್ನು ನಾಲ್ಕು ಬಣ್ಣಗಳಲ್ಲಿ ಹಾಗೂ ಕನಿಷ್ಠ 300ಡಿಪಿಐ ರೆಸಲ್ಯೂಷನ್‍ನಲ್ಲಿ ಹಾಗೂ ಪ್ಯಾಕೇಟ್‍ನ ಶೇ.85 ರಷ್ಟು ಸ್ಥಳದಲ್ಲಿ ಮುದ್ರಿಸುವುದು ಕಡ್ಡಾಯವಾಗಿರುತ್ತದೆ. ಅವುಗಳ ಅಕ್ಷರ ಗಾತ್ರ ಮತ್ತು ಬಣ್ಣ ನಿಖರವಾಗಿರಬೇಕು.
ಈ ಎಲ್ಲಾ ನಿಬಂಧನೆಗಳನ್ನು ಉಲ್ಲಂಘಿಸಿದ್ದಲ್ಲಿ ಕೋಟ್ಪಾ-2003 ಕಾಯ್ದೆ ಸೆಕ್ಷನ್-20 ರ ಪ್ರಕಾರ ಶಿಕ್ಷಾರ್ಹ ಅಪರಾಧ, ಜೈಲು ಶಿಕ್ಷೆ ಅಥವಾ ದಂಡ ಎರಡನ್ನೂ ಸಹ ವಿಧಿಸಲಾಗುವುದು.

ಆರೋಗ್ಯ ಚಿತ್ರಾತ್ಮಕ ಎಚ್ಚರಿಕೆ ಮತ್ತು ಬರಹ ಆರೋಗ್ಯ ಎಚ್ಚರಿಕೆಗಳು ಹಾಗೂ ನಿಯಮಗಳ ವಿವರವನ್ನು mohfw.gov.in ಮತ್ತು ntcp.nhp.gov.in ಜಾಲತಾಣದಲ್ಲಿ ಪಡೆಯಬಹುದು. ಹಾಗೆಯೇ
ntcp:mohfw@gmail.com ಅಥವಾ 011-23062868 ಗೆ ಮನವಿ ಅಥವಾ ಕೋರಿಕೆ ಸಲ್ಲಿಸಿ ಪಡೆಯಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ನೋಡಲ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments are closed.