ಕುಂದಾಪುರ: ಸಚಿವ ಸ್ಥಾನ ನೀಡುವುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಪರಮಾಧಿಕಾರ ಎಂದು ರಾಜ್ಯದಲ್ಲಿ ಎಲ್ಲಾ ಹೇಳುತ್ತಾರೆ. ಕೇಂದ್ರ, ಹೈಕಮಾಂಡ್ ಈ ಬಗ್ಗೆ ಮಾಧ್ಯಮದವರು ಕೇಳಬೇಕು. ನಾನಾಗಿ ಈವರೆಗೂ ಸಚಿವ ಸ್ಥಾನ ನಾನು ಕೇಳಿಲ್ಲ..ಅವರು ಕೊಟ್ಟಿಲ್ಲ ಎಂದು ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸ್ಪಷ್ಟನೆ ನೀಡಿದ್ದಾರೆ.

ಕುಂದಾಪುರದಲ್ಲಿಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು ದಾನ ದಾನಗಳಲ್ಲಿ ಸಮಾಧಾನ ಮೇಲು ಎನ್ನುವ ಹಿನ್ನೆಲೆ ನಾನು ಎಲ್ಲಿಯೂ ಅಸಮಧಾನಗೊಂಡಿಲ್ಲ, ಸಮಾಧಾನವಾಗಿದ್ದೇನೆ ಎಂದರು.
ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಪಕ್ಷವೇ ಇಲ್ಲ. ಇದು ಪಕ್ಷ ರಹಿತವಾದ ಚುನಾವಣೆ. ಯಾವುದೇ ಪಕ್ಷಗಳಿಲ್ಲ. ಆದರೆ ಯಾವುದೋ ಪಕ್ಷದ ಬೆಂಬಲಿತರು ಅನ್ನುವುದು ಗೊಂದಲಕಾರಿ ಎಂದು ಶಾಸಕರು ಈ ಸಂದರ್ಭ ಹೇಳಿದರು.
ಕುಂದಾಪುರ ಫ್ಲೈ ಓವರ್ ಕಾಮಗಾರಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಮಗಾರಿ ಶೀಘ್ರ ಮುಗಿಯುತ್ತೆ ಎಂದರು. ಕಾಮಗಾರಿಯ ಸಲುವಾಗಿ ತಂದ ಉತ್ಪನ್ನಗಳು ಹಾಳಾಗುತ್ತಿದೆ ಎನ್ನುವ ಆರೋಪದ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದ ಅವರು, ಅಂತಹ ಸಮಸ್ಯೆ ಏನೂ ಇಲ್ಲ ಎಂದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.