ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ತೋಟದ ಮನೆಯಲ್ಲಿ ಗುರುವಾರ ಸಂಕ್ರಾಂತಿ ಸಂಭ್ರಮ ಜೋರಾಗಿತ್ತು. ದರ್ಶನ್ ಅವರು ಬಿಡುವು ಮಾಡಿಕೊಂಡು ತೋಟಕ್ಕೆ ಆಗಮಿಸಿ, ಹಸುಗಳಿಗೆ ಪೂಜೆ ಮಾಡಿ ಸಂಭ್ರಮಿಸಿದರು.

ಸಂಕ್ರಾಂತಿ ಹಿನ್ನೆಲೆಯಲ್ಲಿ ಗುರುವಾರ ಮೈಸೂರಿನ ತಿ.ನರಸೀಪುರ ರಸ್ತೆಯಲ್ಲಿರುವ ‘ತೂಗುದೀಪ ಫಾರ್ಮ್ ಹೌಸ್’ಗೆ ದರ್ಶನ್ ಆಗಮಿಸಿದ್ದರು. ತಮ್ಮ ಸ್ನೇಹಿತರು ಹಾಗೂ ಆಪ್ತರೊಂದಿಗೆ ಬೆರೆತು ತೋಟದ ಮನೆಯಲ್ಲಿ ಹಬ್ಬವನ್ನು ಆಚರಿಸಿದರು.
ನಟ ದರ್ಶನ್ ತೋಟದ ಮನೆಯಲ್ಲಿ ಅನೇಕ ಪ್ರಾಣಿಗಳನ್ನು ಸಾಕಿದ್ದಾರೆ. ಹಸುಗಳಿಗೆ ಪೂಜೆ ಮಾಡಲಾಯಿತು. ತೋಟದ ಮನೆಯಲ್ಲಿರುವ ಜಾನುವಾರುಗಳಿಗೆ ಸ್ನಾನ ಮಾಡಿಸಿ, ಪೂಜೆ ಮಾಡಲಾಯಿತು. ಸಂಜೆ ಜಾನುವಾರುಗಳಿಗೆ ಕಿಚ್ಚು ಹಾಯಿಸುವ ಮೂಲಕ ಸಂಕ್ರಾಂತಿಯನ್ನು ಆಚರಣೆ ಮಾಡಲಾಯಿತು. ತೋಟದ ಕೆಲಸಗಾರರು ಸಹ ಸಂಭ್ರಮದಿಂದ ಪಾಲ್ಗೊಂಡರು.
ತಮ್ಮ ಪ್ರೀತಿಯ ಕುದುರೆಗೆ ದರ್ಶನ್ ಕಿಚ್ಚು ಹಾಯಿಸುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಸಂಕ್ರಾಂತಿ ದಿನ ಗ್ರಾಮೀಣ ಪ್ರದೇಶಗಳಲ್ಲಿ ಹಸುಗಳನ್ನು ಸಿಂಗಾರಗೊಳಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಸಂಜೆ ಕಿಚ್ಚು(ಬೆಂಕಿ) ಹಾಯಿಸುವುದು ವಾಡಿಕೆಯಾಗಿದೆ.
Comments are closed.