
ಮಂಗಳೂರು, ಡಿಸೆಂಬರ್.21 : ಮಂಗಳೂರು ಹಾಗೂ ಮೂಡಬಿದ್ರೆ ತಾಲೂಕಿನ ಗ್ರಾಮ ಪಂಚಾಯತಿಗೆ ಡಿ.22 ಮತದಾನ ನಡೆಯಲಿದ್ದು ಪೂರ್ವಭಾವಿಯಾಗಿ ಇಂದು ಮಂಗಳೂರಿನ ಮಹಾತ್ಮ ಗಾಂಧೀಜಿ ಪ್ರೌಢಶಾಲೆ ಬೋಂದೆಲ್ನಲ್ಲಿ ಮೊದಲನೇ ಹಂತದ ಗ್ರಾಮ ಪಂಚಾಯತ್ಗೆ ನಡೆದ ಮಸ್ಟರಿಂಗ್ನಲ್ಲಿ ಚುನಾವಣೆ ಸಿಬ್ಬಂದಿಗಳು ಮತಪೆಟ್ಟಿಗೆ ಹಾಗೂ ಇತರ ಅಗತ್ಯ ಸಾಮಾಗ್ರಿಗಳನ್ನು ಮತದಾನ ಕೇಂದ್ರಕ್ಕೆ ಕೊಂಡೊಯ್ದರು.

ಬೆಳಿಗ್ಗೆಯಿಂದ ಮಸ್ಟರಿಂಗ್ ಪ್ರಕ್ರಿಯೆಗಳು ನಡೆದಿದ್ದು ಮಧ್ಯಾಹ್ನದ ಬಳಿಕ ಮತ ಪೆಟ್ಟಿಗೆಯೊಂದಿಗೆ ಮತ ಕೇಂದ್ರಗಳಿಗೆ ಅಧಿಕಾರಿ ಸಿಬ್ಬಂದಿಗಳು ತೆರಳಿದರು.

ಗ್ರಾಮ ಪಂಚಾಯತಿಗೆ ಮಂಗಳವಾರ ನಡೆಯಲಿರುವ ಮತದಾನ ಪ್ರಕ್ರಿಯೆ ಅಧಿಕಾರಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಈ ಬಾರಿ ಕೊರೋನಾ ಹಿನ್ನೆಲೆ ಮತದಾನ ದಿನದಂದು ಎಲ್ಲಾ ಮತಗಟ್ಟೆಯಲ್ಲಿ ಸ್ಯಾನಿಟೈಸಿಂಗ್ ಹಾಗೂ ಥರ್ಮಲ್ ಸ್ಕ್ಯಾನಿಂಗ್ ಮಾಡಿಸಲಾಗುತ್ತದೆ.
Comments are closed.