ರಾಷ್ಟ್ರೀಯ

ದೇಶದಲ್ಲಿರುವ ಚಿರತೆಗಳ ಕುರಿತು ಅಚ್ಚರಿಯ ಸುದ್ದಿ!

Pinterest LinkedIn Tumblr


ನವದೆಹಲಿ: ‘ಭಾರತದಲ್ಲಿ ಈಗ 12,852 ಚಿರತೆಗಳಿದ್ದು. 2014ರಲ್ಲಿ ನಡೆದ ಈ ಹಿಂದಿನ ಅಂದಾಜಿಗಿಂತ ಶೇ.60ರಷ್ಟು ಹೆಚ್ಚಳವಾಗಿದೆ’ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸೋಮವಾರ ‘ಭಾರತದಲ್ಲಿ ಚಿರತೆಯ ಸ್ಥಿತಿಗತಿ’ ವರದಿಯನ್ನು ಬಿಡುಗಡೆ ಮಾಡಿ, ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಅಂದ ಹಾಗೇ ರಾಜ್ಯದಲ್ಲಿ ಚಿರತೆಗಳ ಹಾವಳಿ ಮೀತಿ ಮೀರುತ್ತಿದ್ದು, ಕಾಡು ಬಿಟ್ಟು ನಾಡಿಗೆ ಬಂದು ಹಾವಳಿಯನ್ನು ನೀಡಲು ಶುರುವಾಗಿದೆ. ಹಲವು ಕಡೆಗಳಲ್ಲಿ ಜನತೆ ಬೆಳಗ್ಗಿನ ಹೊತ್ತು ಕೂಡ ಚಿರೆತೆಯಿಂದ ಹೆದರಿಕೊಂಡು ಜೀವನ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದ್ದು, ರಾಜ್ಯದ ನಾನಾ ಭಾಗಗಳಲ್ಲಿ ಚಿರತೆಯಿಂದ ಪ್ರಾಣಹಾನಿಯಾಗಿರುವ ಘಟನೆಗಳು ಕೂಡ ನಡೆದು ಹೋಗಿದೆ. ಇದಲ್ಲದೇ ಕಾಡನಲ್ಲಿ ಚಿರತೆಗಳಿಗೆ ಸರಿಯಾದ ಆಹಾರ ಸಿಗದೇ ಇರೋದು, ರಸ್ತೆಯಲ್ಲಿ ಮಾಂಸದ ತ್ಯಾಜ್ಯಗಳನ್ನು ಚೆಲ್ಲುತ್ತಿರುವುದು, ನಗರೀಕರಣ ಹೆಚ್ಚುತ್ತಿರುವುದು ಸೇರಿದಂತೆ ನಾನಾ ಕಾರಣಾದಿಂದ ಕೂಡ ನಾಡು ಬಿಟ್ಟು ಕಾಡಿಗೆ ಚಿರತೆಗಳು ಬರುತ್ತಿದ್ದಾವೆ.

Comments are closed.