ಕರ್ನಾಟಕ

ಸಹೋದ್ಯೋಗಿಗಳು ಸ್ನಾನ ಮಾಡುವುದನ್ನು ರೆಕಾರ್ಡ್‌ ಮಾಡಿ ಬಾಯ್‌ ಫ್ರೆಂಡ್‌ಗೆ ವಿಡಿಯೋ ಕಳುಹಿಸುತ್ತಿದ್ದ 2 ಮದುವೆಯಾಗಿದ್ದ ಆರೋಪಿ ನರ್ಸ್‌

Pinterest LinkedIn Tumblr


ಬೆಂಗಳೂರು: ಖಾಸಗಿ ಆಸ್ಪತ್ರೆಯೊಂದರ ಹಾಸ್ಟೆಲ್‌ನಲ್ಲಿ ಸಹೋದ್ಯೋಗಿಗಳು ಸ್ನಾನ ಮಾಡುವುದನ್ನು ರೆಕಾರ್ಡ್‌ ಮಾಡಿ ಬಾಯ್‌ ಫ್ರೆಂಡ್‌ಗೆ ವಿಡಿಯೋ ಕಳುಹಿಸುತ್ತಿದ್ದ ಸ್ಟಾಫ್‌ ನರ್ಸ್‌ ಅಶ್ವಿನಿಯ ಸ್ನೇಹಿತ ಪ್ರಭು ಎಂಬಾತನನ್ನು ಬಂಧಿಸಿರುವ ವೈಟ್‌ಫೀಲ್ಡ್‌ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಮೊಬೈಲ್‌ಗಳನ್ನು ಕಳುಹಿಸಿದ್ದಾರೆ.

ತಮಿಳುನಾಡಿನ ದಿಂಡಿಗಲ್‌ನಲ್ಲಿ ಆರೋಪಿ ಪ್ರಭುವನ್ನು ಬಂಧಿಸಲಾಗಿದೆ. ಆದರೆ, ಮೊಬೈಲ್‌ನಲ್ಲಿನ ವಿಡಿಯೋಗಳನ್ನು ಆರೋಪಿ ಡಿಲೀಟ್‌ ಮಾಡಿದ್ದ. ಹೀಗಾಗಿ, ಮಾಹಿತಿಯನ್ನು ರಿಟ್ರೈವ್‌ ಮಾಡಲು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ. ವಿಡಿಯೋವನ್ನು ತಾನು ಮಾತ್ರ ನೋಡುತ್ತಿದ್ದೆ ಎಂದು ಹೇಳಿದ್ದಾನೆ. ಆದರೆ, ದುರುಪಯೋಗ ಮತ್ತು ಬೇರೆಯವರಿಗೆ ಕಳುಹಿಸಿರುವ ಕುರಿತ ಖಚಿತತೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದೆ.

ಯಾವುದಾದರೂ ವೆಬ್‌ಸೈಟ್‌ಗಳಿಗೆ ಅಪ್‌ಲೋಡ್‌ ಅಥವಾ ಮಾರಿಕೊಂಡಿರುವ ಕುರಿತು ಎಫ್‌ಎಸ್‌ಎಲ್‌ನ ವರದಿಯಿಂದ ಗೊತ್ತಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅಶ್ವಿನಿ, ಸಹೋದ್ಯೋಗಿಗಳು ಸ್ನಾನ ಮಾಡುವ ವೇಳೆ ಮೊಬೈಲ್‌ ಫೋನ್‌ ಇಟ್ಟು ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡ್‌ ಮಾಡುತ್ತಿದ್ದಳು. ನಂತರ ಆ ವಿಡಿಯೋವನ್ನು ಸ್ನೇಹಿತ ಪ್ರಭುಗೆ ಕಳುಹಿಸುತ್ತಿದ್ದಳು. ಡಿ.5ರಂದು ಹಾಸ್ಟೆಲ್‌ನ ಸೆಕ್ಯುರಿಟಿ ಗಾರ್ಡ್‌ ಗಮನಿಸಿದಾಗ ವಿಡಿಯೊ ರೆಕಾರ್ಡಿಂಗ್‌ ಮಾಡುತ್ತಿರುವುದು ಗೊತ್ತಾಗಿದೆ.

ನಂತರ ವೈಟ್‌ಫೀಲ್ಡ್‌ ಪೊಲೀಸ್‌ ಠಾಣೆಗೆ ಹಾಸ್ಟೆಲ್‌ನ ವಾರ್ಡನ್‌ ದೂರು ನೀಡಿದ್ದರು. ದೂರು ಆಧರಿಸಿ ಪೊಲೀಸರು ಅಶ್ವಿನಿಯನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಆಕೆ, ತನ್ನ ಸ್ನೇಹಿತ ಪ್ರಭುಗೆ ವಿಡಿಯೊ ಕಳುಹಿಸುತ್ತಿರುವುದು ಗೊತ್ತಾಗಿತ್ತು. ಅಶ್ವಿನಿಯ ಮೊಬೈಲ್‌ ಫೋನ್‌ ಕೂಡ ಎಫ್‌ಎಸ್‌ಎಲ್‌ಗೆ ಕಳುಹಿಸಿರುವ ಪೊಲೀಸರು, ವಿಚಾರಣೆ ನಡೆಸಿದ್ದಾರೆ.

ಮಿಸ್ಡ್‌ ಕಾಲ್‌ನಿಂದ ಪರಿಚಯ
ಆರೋಪಿ ಅಶ್ವಿನಿಗೆ ಈಗಾಗಲೇ ಎರಡು ವಿವಾಹವಾಗಿದೆ. ಆದರೆ, ಇಬ್ಬರು ಕೂಡ ತೊರೆದು ಹೋಗಿದ್ದಾರೆ. ಆಕಸ್ಮಿಕವಾಗಿ ಬಂದ ಮಿಸ್ಡ್‌ ಕಾಲ್‌ನಿಂದ ಪ್ರಭು ಪರಿಚಯವಾಗಿದ್ದ. ನಂತರ ಆತನಿಗೆ ನನ್ನ ವಿಡಿಯೊ ಕಳುಹಿಸುತ್ತಿದ್ದೆ. ಈ ವಿಡಿಯೊ ನೋಡಿ ಇನ್ನಷ್ಟು ವಿಡಿಯೊ ಕಳುಹಿಸುವಂತೆ ಕೇಳುತ್ತಿದ್ದ. ಹೀಗಾಗಿ, ಸಹೋದ್ಯೋಗಿಗಳು ಸ್ನಾನದ ವಿಡಿಯೊ ರೆಕಾರ್ಡ್‌ ಮಾಡಿ ಕಳುಹಿಸುತ್ತಿದ್ದೆ ಎಂದು ಹೇಳಿಕೆ ನೀಡಿದ್ದಾಳೆ.

Comments are closed.