ರಾಷ್ಟ್ರೀಯ

ಹಿಂದೂವೆಂದು ಸುಳ್ಳು ಹೇಳಿ ಮದುವೆ: ಗರ್ಭಪಾತ ನಡೆಸಿ ಮತಾಂತರಕ್ಕೆ ಒತ್ತಾಯ

Pinterest LinkedIn Tumblr


ಲಖನೌ: ಉತ್ತರ ಪ್ರದೇಶದ ಸರ್ಕಾರ ಲವ್​ ಜಿಹಾದ್​ ಕಾಯ್ದೆ ಜಾರಿಗೆ ತಂದು ಎರಡು ದಿನಗಳು ಕಳೆಯುವುದರೊಳಗೆ ಎರಡನೇ ಲವ್​ ಜಿಹಾದ್​ ಪ್ರಕರಣ ದಾಖಲಾಗಿದೆ. ಹಿಂದೂವೆಂದು ನಂಬಿಸಿ ಮದುವೆಯಾದ ಯುವಕ, ಪತ್ನಿ ಗರ್ಭವತಿ ಆದ ನಂತರ ಮತಾಂತರವಾಗುವ ಒತ್ತಾಯ ಮಾಡಿರುವ ಘಟನೆ ರಾಜ್ಯದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ.

ಹಿಂದೂ ಧರ್ಮದ ಯುವತಿಗೆ ಫೇಸ್​ಬುಕ್​ನಲ್ಲಿ ಕುನಾಲ್​ ಶರ್ಮಾ ಹೆಸರಿನ ಯುವಕನೊಂದಿಗೆ ಸ್ನೇಹ ಬೆಳೆದಿದ್ದು, ಅದು ಪ್ರೀತಿಗೆ ತಿರುಗಿದೆ. ಇವರಿಬ್ಬರು ದೋಪೇಶ್ವರ ನಾಥ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ದಂಪತಿ ಆಗಾಗ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದರು. ಸುಖ ಸಂಸಾರ ನಡೆಸುತ್ತಿದ್ದ ಈ ಕುಟುಂಬಕ್ಕೆ ಸಿಹಿ ಸುದ್ದಿಯೊಂದು ಸಿಕ್ಕಿತ್ತು. ಯುವತಿ ಗರ್ಭವತಿ ಆಗಿದ್ದಾಳೆ. ಆದರೆ ಅಷ್ಟರಲ್ಲಾಗಲೇ ತನ್ನ ನಿಜ ರೂಪ ತೋರಲಾರಂಭಿಸಿದ ಪತಿ, ಆಕೆಯ ಹೊಟ್ಟೆಗೆ ಒದ್ದು ಗರ್ಭಪಾತವಾಗುವಂತೆ ಮಾಡಿದ್ದಾನೆ. ನನ್ನ ಹೆಸರು ಕುನಾಲ್​ ಅಲ್ಲ ತಾಹಿರ್​ ಹುಸೇನ್​ ಎಂದು ಹೇಳಿದ್ದಾನೆ. ನನ್ನ ಜತೆ ಬದುಕಲು ನೀನು ಮುಸ್ಲಿಂ ಧರ್ಮಕ್ಕೆ ಮತಾಂತರವಾಗಲೇ ಬೇಕು ಎಂದು ಹೆದರಿಸಿದ್ದಾನೆ. ಒಂದು ವೇಳೆ ಮತಾಂತರವಾಗದಿದ್ದರೆ ಕೊಲೆ ಮಾಡುವ ಬೆದರಿಕೆಯನ್ನೂ ಹಾಕಿದ್ದಾನೆ.

ಮೋಸ ಹೋದ ನಂತರ ಎಚ್ಚೆತ್ತ ಯುವತಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

Comments are closed.