ಕರಾವಳಿ

ಪ್ರತಿಷ್ಠಿತ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಸಿ‌ಎ ಎಂ. ಎನ್. ಪೈ ಆಯ್ಕೆ

Pinterest LinkedIn Tumblr

ಮಂಗಳೂರು : 2020-2021೧ನೇ ಸಾಲಿನ ಪದಾಧಿಕಾರಿಗಳ ಚುನಾವಣೆಯಲ್ಲಿ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಮಿಜಾರ್ ನರಸಿಂಹದಾಸ್ ಪೈ (ಸಿ‌ಎ ಎಂ. ಎನ್. ಪೈ) ಆಯ್ಕೆಯಾಗಿದ್ದಾರೆ.

ಮಂಗಳೂರಿನ ಕದ್ರಿಯಲ್ಲಿರುವ ಸಂಸ್ಥೆಯ ಶಾಲಾ ಆವರಣದಲ್ಲಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಚಿನ್ಮಯ ಶಿಕ್ಷಣ ಸಂಸ್ಥೆಗಳ ನೂತನ ಅಧ್ಯಕ್ಷರಾಗಿ ಸಿ‌ಎ ಎಂ. ಎನ್. ಪೈ ಆಯ್ಕೆಯಾದರು. ಸಿ‌ಎ ಎಮ್. ಎನ್. ಪೈ ವೃತ್ತಿಯಲ್ಲಿ ಲೆಕ್ಕ ಪರಿಶೋಧಕರಾಗಿದ್ದು ಎಂ. ಎನ್. ಪೈ & ಅಸೋಸಿಯೇಟ್ಸ್ ಎಂಬ ಸ್ವಂತ ಸಂಸ್ಥೆಯನ್ನು ನಡೆಸುತ್ತಿದ್ದಾರೆ.

ಉಪಾಧ್ಯಕ್ಷರಾಗಿ ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿ.ನ ನಿರ್ದೇಶಕ ಸುಬ್ರಾಯ ಪೈ, ಕಾರ್ಯದರ್ಶಿಯಾಗಿ ದೇವಗಿರಿ ಚಹಾದ ಮಾಲೀಕರಾದ ನಂದಗೋಪಾಲ್ ಶೆಣೈ ಮತ್ತು ಖಜಾಂಚಿಯಾಗಿ ಕರ್ನಾಟಕ ಕೊಂಕಣಿ ಅಕಾಡೆಮಿಯ ಮಾಜಿ ರಿಜಿಸ್ಟ್ರಾರ್ ಡಾ.ಬಿ.ದೇವದಾಸ್ ಪೈ ಆಯ್ಕೆಯಾಗಿದ್ದಾರೆ.

ಚಿನ್ಮಯ ಶಿಕ್ಷಣ ಸಂಸ್ಥೆ1978 ರಲ್ಲಿ ಸ್ಥಾಪನೆಯಾಯಿತು. ಇದು ಕಳೆದ 42 ವರ್ಷಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿದೆ. ಸಂಸ್ಥೆಯ ಸಹ-ಸಂಸ್ಥಾಪಕ ದಿವಂಗತ ಪಿ.ಎಂ. ಶೆಣೈ ಅವರು ಶಾಲೆಯನ್ನು ಸ್ಥಾಪಿಸಿದರು. ಅವರ ನಂತರ ಬಂದ ವಿವಿಧ ಪದಾಧಿಕಾರಿಗಳು ಮತ್ತು ವ್ಯವಸ್ಥಾಪನಾ ಸಮಿತಿಯ ಸದಸ್ಯರು ಶಾಲೆಯನ್ನು ಅಭಿವೃದ್ಧಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಪ್ರತಿವರ್ಷ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತದೆ.

Comments are closed.