ಕರಾವಳಿ

ನೀರು ಕೇಳುವ ನೆಪದಲ್ಲಿ ಬಂದು 36 ಗ್ರಾಂ ಚಿನ್ನದ ಮುಷ್ಠಿ ಸರ ಕದ್ದ ಖದೀಮ..!

Pinterest LinkedIn Tumblr

ಉಡುಪಿ: ನೀರು ಕೇಳುವ ನೆಪದಲ್ಲಿ ಬಂದು ವ್ರದ್ಧೆಯೊಬ್ಬರ 36 ಗ್ರಾಂ ಚಿನ್ನದ ಮುಷ್ಟಿ ಸರ ಕದ್ದ ಘಟನೆ ಉಡುಪಿ ಜಿಲ್ಲೆ ಕಾಪು ತಾಲೂಕಿನ ಶಿರ್ವಾ ಬಂಟಕಲ್ ಎಂಬಲ್ಲಿ ನಡೆದಿದೆ.

ಇಲ್ಲಿನ ನಿವಾಸಿ ವಸಂತಿ (72) ಅವರ ಮನೆಗೆ ನೀಲಿಬಣ್ಣದ ಶರ್ಟ್, ಕಪ್ಪು ಪ್ಯಾಂಟ್ ಹಾಗೂ ಕಪ್ಪು ಹೆಲ್ಮೆಟ್ ಧರಿಸಿದ ಓರ್ವ ಅಪರಿಚಿತ ವ್ಯಕ್ತಿ ಮೋಟಾರ್‌ ಸೈಕಲ್‌ನಲ್ಲಿ ಬಂದು ನೀರು ಕೇಳಿದ್ದು ವಸಂತಿಯವರು ನೀರು ಕೊಟ್ಟಿದ್ದಾರೆ. ಆ ವ್ಯಕ್ತಿ ನೀರು ಕುಡಿದು ಮನೆಯ ಒಳಗಡೆ ವಸಂತೈಯವರ ಹಿಂದಿನಿಂದ ಬಂದು ಕುತ್ತಿಗೆಯಲ್ಲಿದ್ದ 36 ಗ್ರಾಂ ತೂಕದ 1 ಲಕ್ಷ 60 ಸಾವಿರ ಮೌಲ್ಯದ ಚಿನ್ನದ ಮುಷ್ಠಿ ಸರವನ್ನು ಬಲತ್ಕಾರವಾಗಿ ಎಳೆದುಕೊಂಡು ತಾನು ಬಂದಿದ್ದ ಕಪ್ಪು ಬಣ್ಣದ ಮೋಟಾರ್‌ ಸೈಕಲ್ನಲ್ಲಿ ಶಿರ್ವಾದತ್ತ ತೆರಳಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.