ಬೆಂಗಳೂರು: ಐಎಂಐ ಬಹುಕೋಟಿ ಹಗರಣ ಪ್ರಕರಣದಲ್ಲಿ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಭಾನುವಾರ ಸಿಬಿಐ ಬಂಧಿಸಿದ್ದು ಸೋಮವಾರ ಅವರ ನಿವಾಸದ ಮೇಲೆಯೂ ದಾಳಿ ನಡೆಸಿದೆ.
ಬೆಂಗಳೂರಿನ ಪುಲಕೇಶಿ ನಗರದ ಕೋಲ್ಸ್ ಪಾರ್ಕ್ ಬಳಿಯಲ್ಲಿನ ಬೇಗ್ ಮನೆಯ ಮೇಲೆ ದೆಹಲಿ ಮೂಲದ ಸಿಬಿಐ ಅಧಿಕಾರಿಗಳ ತಂಡ ರೇಡ್ ಮಾಡಿದೆ. ಎರಡು ಪ್ರತ್ಯೇಕ ತಂಡವಾಗಿ ಬಂದ ಅಧಿಕಾರಿಗಳ ತಂಡ ಮಾಹಿತಿ ಕಲೆಹಾಕುತ್ತಿದೆ.
ಭಾನುವಾರ ರೋಷನ್ ಬೇಗ್ ಬಂಧನವಾಗಿದ್ದು ಹದಿನಾಲ್ಕು ದಿನಗಳ ಕಾಲ ನ್ಯಾಯಾಂಗ ಬಂಧನದ ಹಿನ್ನೆಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬೇಗ್ ಕಂಬಿ ಹಿಂದಿದ್ದಾರೆ.