ಕರ್ನಾಟಕ

ಚನ್ನಪಟ್ಟಣ ಆಟಿಕೆ ಕೊಳ್ಳೋಕೆ ಮುಂದಾದ ಅಮೆಜಾನ್​!

Pinterest LinkedIn Tumblr


ಅಮೆಜಾನ್ ಸಂಸ್ಥೆ ಪ್ರಧಾನ್ ಮಂತ್ರಿ ನರೇಂದ್ರ ಮೋದಿ ಅವರ ಆತ್ಮ ನಿರ್ಭಾರ್ ಯೋಜನೆಯನ್ನು ಉತ್ತೇಜಿಸುವ ದೃಷ್ಟಿಕೋನದಲ್ಲಿ ಮೇಡ್ ಇನ್ ಇಂಡಿಯಾದ ಟಾಯ್ ಸ್ಟೋರ್ ತೆರೆದಿದೆ. ಈ ಮೂಲಕ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದೆ. ಇನ್ನು ಮೇಡ್ ಇನ್ ಇಂಡಿಯಾ ಟಾಯ್ ಸ್ಟೋರ್​ನಲ್ಲಿ ಟ್ರೆಡಿಷನಲ್ ಆಟಿಕೆಗಳು, ಕೈಯಿಂದ ತಯಾರಿಸಿದ ಆಟಿಕೆ ಮತ್ತು ಮಕ್ಕಳಿಗೆ ಪಾಠದ ವೇಲೆ ಬೇಕಾಗುವ ಆಟಿಕೆಯನ್ನ ಮಾರಾಟ ಮಾಡುತ್ತಿದೆ. ಈಗಾಗಗಲೇ 25 ರಾಜ್ಯದ ಮಾರಾಟಗಾರರು ಒದಗಿಸುವ ಆಟಿಕೆಯನ್ನು ಮೇಡ್ ಇನ್ ಇಂಡಿಯಾ ಟಾಯ್ ಸ್ಟೋರ್​ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಆಗಸ್ಟ್ ತಿಂಗಳಲ್ಲಿ ಮನ್ ಕಿ ಬಾತ್ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಸ್ಟಾರ್ಟ್​ ಅಪ್ ಉದ್ಯದಾರರು ಆಟಿಕೆಗಳ ಉತ್ಪಾದನೆಯತ್ತ ಗಮನಹರಿಸಬೇಕು ಎಂದಿದ್ದರು. ದೇಶಿಯ ಆಟಿಕೆಗಳು ಬ್ರಾಂಡ್ ಆಗಿ ಹೊರಹೊಮ್ಮಬೇಕು ಎಂದಿದ್ದರು.

ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ದತ್ತಾಂಶವನ್ನು ಉಲ್ಲೇಖಿಸಿ ಫೈನಾನ್ಶಿಯಲ್ ಎಕ್ಸ್​​ಪ್ರೆಸ್ ನೀಡಿದ ವರದಿಯಂತೆ ಭಾರತ ಶೇ.85ರಷ್ಟು ಆಟಿಕೆಯನ್ನು ಚೀನಾ , ಶ್ರೀಲಂಕಾ ಮತ್ತು ಮಲೇಷ್ಯಾದಿಂದ ಆಮದು ಮಾಡುತ್ತಿದೆ ಎಂದು ತಿಳಿಸಿದೆ.

ಅಮೆಜಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ‘ಮೇಡ್ ಇನ್ ಇಂಡಿಯಾ ಆನ್​​ಲೈನ್ ಸ್ಟೋರ್ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಜಾನಪದ ಕಥೆಯಿಂದ ಪ್ರೇರಿತವಾಗಿ ತಯಾರಿಸಿದ ಆಟಿಕೆಗಳನ್ನು ಮಾರಾಟ ಮಾಡಲು ಸಹಾಯವಾಗುತ್ತದೆ. ಸಾವಿರಾರು ತಯರಾಕರು ಮತ್ತು ಮಾರಾಟಗಾರರು ಇದರಿಂದ ಪ್ರಯೋಜನ ಪಡೆಯಲಿದ್ದಾರೆ ಎಂದಿದೆ.

ಎಲ್ಲಾ ರೀತಿಯ ಆಟಿಕೆಯನ್ನು ಅಮೆಜಾನ್ ಟಾಯ್ ಸ್ಟೋರ್​ನಲ್ಲಿ ಮಾರಾಟ ಮಾಡಲಿದೆ. ಚೌಕಾ ಬಾರಾ, ಲಗೋರಿ, ಕೈಯಿಂದ ಮಾಡಿದ ಆಟಿಕೆ, ಚೆನ್ನಪಟ್ಟಣ, ತಂಜಾವೂರು ಮತ್ತು ವಾರಾಣಾಸಿಯಲ್ಲಿ ತಯಾರಿಸುವ ಆಟಿಕೆಯನ್ನು ಮಾರಾಟ ಮಾಡಲಿದೆ.
ಅಮೆಜಾನ್ ಈಗಾಗಲೇ ತನ್ನ ವೆಬ್​ಸೈಟ್​​ನಲ್ಲಿ ಮೇಡ್ ಇನ್ ಇಂಡಿಯಾ ಟಾಯ್ ವಿಭಾಗವನ್ನು ತೆರೆದಿದ್ದು, ಅದರ ಮೂಲಕ ಬೇಕಾದ ಆಟಿಕೆಯನ್ನು ಖರೀದಿಸಬಹುದಾಗಿದೆ ಎಂದು ತಿಳಿಸಿದೆ.

Comments are closed.