ಮನೋರಂಜನೆ

ಚಿತ್ರರಂಗದಿಂದ ಹಿಂದೆ ಸರಿಯ ಹೊರಟಿದ್ದ ನಯನತಾರಾಗೆ ಮರುಹುಟ್ಟು​ ನೀಡಿದ ಕನ್ನಡ ಚಿತ್ರ ಯಾವುದು ಗೊತ್ತಾ?

Pinterest LinkedIn Tumblr


ನಯನತಾರಾ ತಮಿಳು ಚಿತ್ರರಂಗದಲ್ಲಿ ಭಾರೀ ಬೇಡಿಕೆ ಸೃಷ್ಟಿಸಿಕೊಂಡಿರುವ ನಟಿ. ಇವರು ನಟಿಸುವ ಚಿತ್ರಗಳಲ್ಲಿ ಹೀರೋ-ಹೀರೋಯಿನ್​ ಪಾತ್ರಗಳು ಒಂದೇ ತೂಕ ಹೊಂದಿರುತ್ತವೆ. ಸದ್ಯ ಇವರ ಕೈಯಲ್ಲಿ ನಾಲ್ಕೈದು ಚಿತ್ರಗಳಿವೆ. ಇಷ್ಟೊಂದು ಬೇಡಿಕೆ ಹೊಂದಿರುವ ಈ ನಟಿಗೆ ಮರುಹುಟ್ಟುಕೊಟ್ಟಿದ್ದು ಕನ್ನಡ ಚಿತ್ರರಂಗ ಎಂಬುದು ಅನೇಕರಿಗೆ ಗೊತ್ತಿಲ್ಲದ ವಿಚಾರ!

ಕಾಲಿವುಡ್​ನಲ್ಲಿ ನಯನತಾರಾ ಭಾರಿ ಬೇಡಿಕೆಯ ನಟಿ. ಅಚ್ಚರಿ ಎಂದರೆ ಒಂದು ಕಾಲದಲ್ಲಿ ಅವರು ಸಿನಿಮಾ ಇಂಡಸ್ಟ್ರಿಯನ್ನೇ ತೊರೆಯಲಿದ್ದಾರೆ ಎನ್ನಲಾಗಿತ್ತು! ನಯನತಾರಾ ಹಾಗೂ ನಟ-ನಿರ್ದೇಶಕ ಪ್ರಭುದೇವ ನಡುವೆ ಪ್ರೀತಿ ಮೊಳೆತಿತ್ತು. ಅದಾಗಲೇ ಪ್ರಭುದೇವ ಅವರಿಗೆ ಬೇರೆ ಮದುವೆ ಆಗಿತ್ತು. ಆದರೆ, ಪ್ರೇಮ ವಿಚಾರ ಪ್ರಭುದೇವ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿತ್ತು. ಮೊದಲ ಹೆಂಡತಿಗೆ ಅವರು ವಿಚ್ಛೇದನ ನೀಡಿದರು. ನಂತರ ಪ್ರಭುದೇವ-ನಯನತಾರಾ ಕೆಲ ಕಾಲ ಲಿವ್​ ಇನ್​ ರಿಲೇಶನ್​ಶಿಪ್​ನಲ್ಲಿದ್ದರು.

2010ರಲ್ಲಿ ಉಪೇಂದ್ರ ಅಭಿನಯದ ‘ಸೂಪರ್​’ ಸಿನಿಮಾ ಮೂಲಕ ನಯನತಾರಾ ಕನ್ನಡಕ್ಕೆ ಕಾಲಿಟ್ಟರು. ಅಲ್ಲಿಯವರೆಗೆ ಯಶಸ್ಸು ಕಾಣಲು ಹವಣಿಸುತ್ತಿದ್ದ ನಯನತಾರಾ ಅದೃಷ್ಟ ಬದಲಾಯಿತು. ‘ಸೂಪರ್​’ ಸಿನಿಮಾ ಯಶಸ್ಸು ತಂದುಕೊಡುತ್ತಿದ್ದಂತೆ ಅವರಿಗೆ ಒಳ್ಳೊಳ್ಳೆಯ ಕಥೆಗಳು ಬರಲು ಆರಂಭವಾದವು. ಈ ಮಧ್ಯೆ 2012ರಲ್ಲಿ ಪ್ರಭುದೇವ-ನಯನತಾರಾ ಸಂಬಂಧವೂ ಮುರಿದುಬಿತ್ತು.

ಕನ್ನಡ ಚಿತ್ರರಂಗದ ಮೂಲಕ ಮರುಹುಟ್ಟು ಪಡೆದುಕೊಂಡಿದ್ದ ನಯನತಾರಾಗೆ ಈ ವಿವಾದಗಳು ಹಿನ್ನಡೆ ಉಂಟು ಮಾಡಲೇ ಇಲ್ಲ. ಸಿನಿಮಾದಿಂದ ಸಿನಿಮಾಗೆ ಬೆಳೆಯುತ್ತಲೇ ಹೋದರು. ‘ರಾಜ ರಾಣಿ’, ‘ಆರಂಭಂ’ ‘ಥನಿ ಒರುವನ್​’ ಸೇರಿ ಸಾಕಷ್ಟು ಹಿಟ್​ ಚಿತ್ರಗಳನ್ನು ನೀಡಿದರು. ವರ್ಷಕ್ಕೆ ಅವರ ನಟನೆಯ 5-6 ಚಿತ್ರಗಳು ರಿಲೀಸ್​ ಆದವು. ಈಗ ಅವರು ತಮಿಳಲ್ಲಿ ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತಿ ಪಡೆದುಕೊಂಡಿದ್ದಾರೆ.

Comments are closed.