
ಬೆಂಗಳೂರು: ‘ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆ’ಗೆ ಸರ್ಕಾರ ಮುಂದಾಗಿದ್ದ ಕ್ರಮಕ್ಕೆ ರಾಜ್ಯದೆಲ್ಲೆಡೆ ಪ್ರತಿಭಟನೆ ವ್ಯಕ್ತವಾಗಿದ್ದು, ರಾಜ್ಯ ಸರಕಾರ ನ.27ರ ಒಳಗಾಗಿ ತನ್ನ ನಿರ್ಧಾರ ಹಿಂಪಡೆಯದಿದ್ದರೆ ಡಿ.5ಕ್ಕೆ ಕರ್ನಾಟಕ ಬಂದ್ ಕರೆ ನೀಡಲಾಗುವುದು ಎಂದು ಕನ್ನಡ ಪರ ಸಂಘಟನೆಗಳು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಎಚ್ಚರಿಕೆ ನೀಡಿವೆ.
ಈ ಕುರಿತಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ರಾಜ್ಯದಲ್ಲಿ ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ಮಾಡುವ ಅಗತ್ಯ ಏನಿತ್ತು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಕೂಡಲೇ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವಂತೆ ಅವರು ಆಗ್ರಹಿಸಿದ್ದಾರೆ.
ಇನ್ನು ಕನ್ನಡ ಪರ ಸಂಘಟನೆಗಳು ಕೊಟ್ಟ ಬಂದ್ ಕರೆಗೆ ಬೆಂಬಲ ವ್ಯಕ್ತವಾಗುತ್ತಿವೆ. ಆಟೋ, ಕ್ಯಾಬ್ ಯೂನಿಯನ್ಗಳು ಕೂಡಾ ಬೆಂಬಲ ಸೂಚಿಸಿವೆ. ಸರ್ಕಾರ ಪ್ರಾಧಿಕಾರ ರಚನೆ ನಿರ್ಧಾರವನ್ನು ವಾಪಸ್ ಪಡೆಯದೇ ಇದ್ದರೆ ದೊಡ್ಡ ಮಟ್ಟದಲ್ಲಿ ಬಂದ್ ನಡೆಸುವುದು ಕನ್ನಡ ಪರ ಸಂಘಟನೆಗಳ ಯೋಜನೆಯಾಗಿದೆ.
ಈಗಾಗಲೇ ಕನ್ನಡ ಸಂಘಟನೆಗಳ ಒಕ್ಕೂಟ ಮಾತುಕತೆ ನಡೆಸಿಕೊಂಡಿದ್ದು ಬಂದ್ ಯಶಸ್ವಿಗೊಳಿಸಲು ಯೋಜನೆ ರೂಪಿಸಿಕೊಳ್ಳುತ್ತಿವೆ. ಇನ್ನು ಸರ್ಕಾರದ ಈ ನಡಗೆ ಕಾಂಗ್ರೆಸ್ ಕೂಡಾ ವಿರೋಧ ವ್ಯಕ್ತಪಡಿಸಿದ್ದು ಸಮಾಜವನ್ನು ಒಡೆಯುವ ನೀತಿ ಎಂದು ಆರೋಪಿಸಿದೆ.
Comments are closed.