
ನಟಿಯೊಬ್ಬಳು ತನ್ನ ಮುಖದ ಸೌಂದರ್ಯವನ್ನೇ ಹಾಳು ಮಾಡಿಕೊಂಡಿದ್ದು, ಕೊನೆಗೆ ಕನ್ನಡಿ ನೋಡಿದಾಗ ತಾನು ಮಾಡಿರುವ ತಪ್ಪು ಆಕೆಗೆ ಅರಿವಾಗಿದೆ.
27 ವರ್ಷ ಪ್ರಾಯದ ಡೆಮಿ-ನಿಕೋಲ್ ಡನ್ಲಾಪ್ ಎ ವರ್ಗದ ಮಾದಕ ವ್ಯಸನಿಯಾಗಿದ್ದಳು, ಆಕೆಗೆ ಬೇಕೆನಿಸಿದಾಗ ಸೇವಿಸುತ್ತಿದ್ದಳು.
ಎರಡು ವರ್ಷಗಳ ಕಾಲ ಡೆಮಿ-ನಿಕೋಲ್ ಡನ್ಲಾಪ್ ಮಾದಕ ವ್ಯಸನಕ್ಕೆ ತುತ್ತಾಗಿದ್ದಳು. ಹೀಗೆ ಡ್ರಗ್ಸ್ ಎಡಿಕ್ಟ್ ಆಗಿದ್ದ ನಟಿಯ ಅಂದ ಕೆಡುತ್ತಾ ಬಂದಿದೆ.
ಕೊನೆಗೆ ಆಕೆ ಕನ್ನಡಿಯಲ್ಲಿ ಮುಖ ನೋಡಿದಾಗ ತನ್ನ ಚಂದವನ್ನೇ ಹಾಳುಮಾಡಿಕೊಂಡಿದ್ದೇನೆ ಎಂಬ ಅರಿವಾಗಿದೆ. ನಂತರ ಇದರಿಂದ ಹೊರಬರಲು ಡೆಮಿ-ನಿಕೋಲ್ ಡನ್ಲಾಪ್ ಪ್ರಯತ್ನಿಸುತ್ತಾಳೆ.
ಕೊನೆಗೆ 4 ತಿಂಗಳ ಕಾಲ ಸರಿಯಾದ ಚಿಕಿತ್ಸೆ ಪಡೆದು ಗುಣಮುಖಲಾಗುತ್ತಾಳೆ, ತನ್ನ ಮುಖದ ಸೌಂದರ್ಯವನ್ನು ಮತ್ತೆ ಪಡೆದಿದ್ದಾಳೆ.
ಸಾಮಾಜಿಕ ಜಾಲತಾಣದಲ್ಲಿ ಡೆಮಿ-ನಿಕೋಲ್ ಡನ್ಲಾಪ್ ತನ್ನ ಪಿಂಪ.ಲ್ಸ್ನಿಂದ ಕೂಡಿದ ಮುಖದ ಫೋಟೋವನ್ನು ಹಂಚಿಕೊಂಡಿದ್ದಾಳೆ. ಇದನ್ನು ಕಂಡ ಅಭಿಮಾನಿಗಳಿಗೆ ಅಚ್ಚರಿಯಾಗಿದೆ. ಅನೇಕರು ಆಕೆಗೆ ಸಲಹೆ ನೀಡಿದ್ದಾರೆ.
ಅಭಿಮಾನಿಗಳ ಸಲಹೆಗೆ ಧನ್ಯವಾದ ತಿಳಿಸಿರುವ ಡೆಮಿ-ನಿಕೋಲ್ ಡನ್ಲಾಪ್, ನಿಮ್ಮ ಸಲಹೆ, ಪ್ರೀತಿಯಿಂದ ನಾನು ಮಾದಕ ವ್ಯಸನದಿಂದ ಹೊರ ಬಂದಿದ್ದೇನೆ. ಧನ್ಯವಾದ ಎಂದು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾಳೆ.
Comments are closed.