ಬೆಂಗಳೂರು: ವೀರಶೈವ ಲಿಂಗಾಯತ ಸೇರಿದಂತೆ ವಿವಿಧ ಸಮುದಾಯಕ್ಕೆ ಸೇರಿದ 182 ಮಠ ಮಾನ್ಯಗಳ ಜೀರ್ಣೋದ್ಧಾರ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಸರಕಾರ 88.75 ಕೋಟಿ ರೂ. ಬಿಡುಗಡೆ ಮಾಡಿದೆ.

2019-20 ಹಾಗೂ 2020-21ರ ಬಜೆಟ್‌ನಲ್ಲಿ ಮಠ, ಧಾರ್ಮಿಕ ಸಂಘ, ಸಂಸ್ಥೆಗಳಿಗೆ ಅನುದಾನ ಘೋಷಿಸಲಾಗಿತ್ತಾದರೂ ಕಾರಣಾಂತರದಿಂದ ಹಣ ಬಿಡುಗಡೆಯಾಗಿರಲಿಲ್ಲ. ಹಣ ಬಿಡುಗಡೆ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
ಬಿ.ಎಸ್.ಯಡಿಯೂರಪ್ಪ ಅವರು ಈ ಹಿಂದೆ ಸಿಎಂ ಆಗಿದ್ದಾಗಲೂ ಮಠ ಮಂದಿರಗಳಿಗೆ ನೆರವು ನೀಡಿದ್ದರು. ಎಲ್ಲ ಜಾತಿ, ವರ್ಗಗಳ ಮಠಗಳ ಮೂಲಸೌಕರ್ಯ ಸಂಬಂಧ 2008 ರಿಂದ 2013ರ ಅವಧಿಯ ಬಿಜೆಪಿ ಸರಕಾರ ಸಾಕಷ್ಟು ಅನುದಾನ ನೀಡಿತ್ತು.
2019-20ರ ಮುಂಗಡ ಪತ್ರದಲ್ಲಿ 39 ಮಠ, ಸಂಘ, ಸಂಸ್ಥೆಗಳಿಗೆ 39 ಕೋಟಿ ರೂ. ಘೋಷಿಸಲಾಗಿತ್ತು. 2020-21ರಲ್ಲಿ 143 ಮಠಗಳಿಗೆ 49.75 ಕೋಟಿ ರೂ. ಘೋಷಿಸಲಾಗಿತ್ತು. ಇದರ ಒಟ್ಟು ಮೊತ್ತ 88.75 ಕೋಟಿ ರೂ. ಅನ್ನು ಈಗ ಬಿಡುಗಡೆ ಮಾಡಲಾಗಿದೆ. ಈ ಪೈಕಿ 49 ಮಠ, ಸಂಸ್ಥೆಗಳಿಗೆ ತಲಾ 1 ಕೋಟಿ ರೂ. ನೀಡಲಾಗುತ್ತಿದೆ.
Comments are closed.